Breaking: ಜಪಾನ್ ಮಾಜಿ ಪ್ರಧಾನಿ ಅಬೆಯನ್ನು ಕೊಂದವನೇ 'ಯಮ'ಗಾಮಿ!
ನಾರಾ, ಜುಲೈ 8: ಸುದೀರ್ಘ ಅವಧಿಯವರೆಗೆ ಜಪಾನ್ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಅನ್ನು ಕೊಂದ ಶಂಕಿತ ಆರೋಪಿ ಯಾರು ಎನ್ನುವ ಪ್ರಶ್ನೆಗೆ ಸ್ಥಳದಲ್ಲೇ ಉತ್ತರ ಸಿಕ್ಕಿದೆ.
ಪ್ರತಿಯೊಬ್ಬರ ಸಾವಿನ ಹಿಂದೆ ಆ ಯಮದ ಕೈವಾಡವಿರುತ್ತದೆ. ಆದರೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯ ಹಿಂದೆ 'ಯಮಗಾಮಿ'ಯ ಕೈವಾಡ ಇರುವ ಬಗ್ಗೆ ಜಪಾನ್ ಪೊಲೀಸರು ಉಲ್ಲೇಖಿಸುತ್ತಿದ್ದಾರೆ. ಹೌದು, ಅಬೆ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯ ಹೆಸರೇ ತೆಸುಯಾ ಯಮಗಾಮಿ.
ಮಾಜಿ ಪ್ರಧಾನಿ ಶಿಂಜೋ ಅಬೆ ಸಾವಿಗೆ ಕಾರಣವಾದ ಆ ತೆಸುಯಾ ಯಮಗಾಮಿ ಯಾರು?, ದೇಶದ ಮಾಜಿ ಪ್ರಧಾನಿ ಅನ್ನು ಕೊಲ್ಲುವಷ್ಟು ದ್ವೇಷಕ್ಕೆ ಕಾರಣವಾಗಿದ್ದಾದರೂ ಏನು?, ಜಪಾನ್ ಮಾಜಿ ಪ್ರಧಾನಿಯ ಬದುಕು ದುರಂತ ಅಂತ್ಯ ಕಂಡಿದ್ದು ಹೇಗೆ ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸ್ವಯಂ ರಕ್ಷಣಾ ಪಡೆಯಲ್ಲಿದ್ದ ಆರೋಪಿ ಯಮಗಾಮಿ
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡು ಹಾರಿಸಿದ ಆರೋಪಿಯ ಹೆಸರು ತೆಸುಯಾ ಯಮಗಾಮಿ ಎಂದು ಗುರುತಿಸಲಾಗಿದ್ದು, 41 ವರ್ಷದ ಆರೋಪಿಯು ನಾರಾ ನಿವಾಸಿ ಆಗಿದ್ದಾನೆ. ಆರೋಪಿಯನ್ನು ಕೊಲೆ ಯತ್ನದ ಶಂಕೆಯ ಮೇರೆಗೆ ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ ಶಂಕಿತನು ಈ ಹಿಂದೆ ಸ್ವಯಂ ರಕ್ಷಣಾ ಪಡೆಯ ಸದಸ್ಯನಾಗಿದ್ದನು ಎಂದು ತಿಳಿದು ಬಂದಿದೆ.

ರಾಜಕೀಯ ಕಾರಣಕ್ಕೆ ನಡೆದಿಲ್ಲ ಶಿಂಜೋ ಅಬೆ ಹತ್ಯೆ
ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಹತ್ಯೆಗೆ ರಾಜಕೀಯ ಕಾರಣವಾಗಿರಲಿಲ್ಲ. ಅವರ ರಾಜಕೀಯ ನಂಬಿಕೆಗಳ ಮೇಲಿನ ದ್ವೇಷದಿಂದ ಗುಂಡಿನ ದಾಳಿ ನಡೆಸಿಲ್ಲ ಎಂದು ಸ್ವತಃ ಆರೋಪಿ ತೆಸುಯಾ ಯಮಗಾಮಿ ಹೇಳಿಕೆ ನೀಡಿದ್ದಾರೆ ಎಂದು ಜಪಾನ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದರ ಮಧ್ಯೆ ದಾಳಿಕೋರನ ಹತ್ಯೆಯ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದು ಬಂದಿಲ್ಲ ಎಂದು ಗೊತ್ತಾಗಿದೆ.

ಪೊಲೀಸರಿಂದ ಆರೋಪಿ ಯಮಗಾಮಿ ವಿಚಾರಣೆ
ಜಪಾನ್‌ನಲ್ಲಿ ಸದ್ಯ ಆರೋಪಿ ತೆಸುಯಾ ಯಮಗಾಮಿ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ನಾರಾ ನಿಶಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಶಿಂಜೋ ಅಬೆ ವಿರುದ್ಧ ತೀವ್ರ ಅಸಮಾಧಾನವನ್ನು ಹೊಂದಿದ್ದು, ಹತ್ಯೆ ಮಾಡುವ ಉದ್ದೇಶದಿಂದಲೇ ಅಬೆ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸರ ಎದುರು ಆರೋಪಿ ಹೇಳಿಕೊಂಡಿದ್ದಾನೆ. ಇನ್ನು, ಹತ್ಯೆಗೆ ಆರೋಪಿಯು ತಾನೇ ಸಿದ್ಧಪಡಿಸಿದ ಬಂದೂಕನ್ನು ಬಳಸಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ.

ಶಿಂಜೋ ಅಬೆ ಹತ್ಯೆಯ ಘಟನೆ ಹೇಗೆ ನಡೆಯಿತು?
ಪಶ್ಚಿಮ ಜಪಾನ್‌ನ ನಾರಾದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಶಿಂಜೋ ಅಬೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಭಾಷಣ ಮಾಡುತ್ತಿದ್ದ ಸ್ಥಳದಿಂದ 10 ಅಡಿ ದೂರದಲ್ಲಿ ಆರೋಪಿ ತೆಸುಯಾ ಯಮಗಾಮಿ ನಿಂತುಕೊಂಡಿದ್ದು, ಹಿಂಭಾಗದಿಂದ ಆರೋಪಿಯು ದಿಢೀರನೇ ಗುಂಡಿನ ದಾಳಿ ನಡೆಸಿದ್ದಾನೆ. ಮೊದಲ ಬಾರಿ ಗುಂಡಿನ ಸದ್ದು ಮಾತ್ರ ಕೇಳಿ ಬಂದಿದ್ದು, ಎರಡನೇ ಬಾರಿ ಗುಂಡು ತಗುಲುತ್ತಿದ್ದಂತೆ ಅಬೆ ನಿಂತ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿಯು ನಾರಾದಲ್ಲೇ ಇರುವ ಆಸ್ಪತ್ರೆಗೆ ಅವರನ್ನು ದಾಖಲಿಸಿದರು. ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಕೆಲವೇ ಗಂಟೆಗಳಲ್ಲಿ ಶಿಂಜೋ ಅಬೆ ವಿಧಿವಶರಾದರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications