• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾನಕಿ ಹುಟ್ಟೂರಿಗೆ ಹೋಗದ ಮೋದಿ, ಬಂದ್ ಬಿಸಿ

By Mahesh
|

ಕಠ್ಮಂಡು, ನ.21: ಜನಕರಾಜನ ಕುವರಿ, ಅಯೋಧ್ಯ ಶ್ರೀರಾಮಚಂದ್ರನ ಮಡದಿ ಜಾನಕಿಯ ಹುಟ್ಟೂರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ರದ್ದಾಗಿದ್ದನ್ನು ವಿರೋಧಿಸಿ ನೇಪಾಳದಲ್ಲಿ ಬಂದ್ ಆಚರಿಸಲಾಯಿತು. ಸುಮಾರು 22 ಪಕ್ಷಗಳು ಕರೆ ನೀಡಿದ್ದ ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೇಪಾಳ ಪ್ರವಾಸ ಕಳೆದ ಆಗಸ್ಟ್ ತಿಂಗಳಿನಲ್ಲೇ ನಿಗದಿಯಾಗಿತ್ತು. ಹಿಂದೂಗಳು, ಬೌದ್ಧರು ಮೋದಿ ಆಗಮನವನ್ನು ಎದುರು ನೋಡುತ್ತಿದ್ದರು.ನೇಪಾಳದ ಜನಕ್ ಪುರ, ಮುಕ್ತಿನಾಥ್ ಹಾಗೂ ಲುಂಬಿನಿಗೆ ಮೋದಿ ಅವರು ಭೇಟಿ ನೀಡಬೇಕಿತ್ತು.

Janakpur disappointed after PM Modi cancelled visit to historical town

'ಭಾರತದ ಪ್ರಧಾನಿ ಮೋದಿ ಅವರ ನೇಪಾಳ ಪ್ರವಾಸ ರದ್ದಾಗಿದೆ' ಎಂದು ನೇಪಾಳ ಸರ್ಕಾರ ಗುರುವಾರ ಘೋಷಿಸಿತು. ಮೋದಿ ಅವರು ನವೆಂಬರ್ 26-27ರಂದು ಕಠ್ಮಂಡುವಿನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಮಾತ್ರ ಮೋದಿ ಅವರು ಭಾಗವಹಿಸುತ್ತಾರೆ ಎಂದು ನೇಪಾಳ ಸರ್ಕಾರ ಹೇಳಿತ್ತು.

ಅದರೆ, ನ.25ರಂದು ಮೋದಿ ಅವರು ಮೋದಿ ಅವರು ನಾಗರಿಕ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಕೊನೆ ಕ್ಷಣದಲ್ಲಿ ಈ ಕಾರ್ಯಕ್ರಮ ರದ್ದಾಗಿದ್ದರ ಬಗ್ಗೆ ಐತಿಹಾಸಿಕ ನಗರಿಯ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಆಕ್ರೋಶ ವ್ಯಕ್ತಪಡಿಸಿ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಹಾಗೂ ಗೃಹಸಚಿವ ಬಾಂದ್ವೆ ಗೌತಮ್ ಅವರ ಪ್ರತಿಕೃತಿಯನ್ನು ಸುಟ್ಟರು ಎಂದು ಸ್ಥಳೀಯ ಪತ್ರಿಕೆ ಕಾಂತಿಪುರ್ ವರದಿ ಮಾಡಿದೆ.

ನೇಪಾಳದ ವಿದೇಶಾಂಗ ಸಚಿವ ಬಹದೂರ್ ಪಾಂಡೆ ಅವರು ಪ್ರತಿಕ್ರಿಯಿಸಿ, ಮೋದಿ ಅವರು ಕೆಲಸದ ಒತ್ತಡವಿರುವುದರಿಂದ ಸಾರ್ಕ್ ಸಮ್ಮೇಳನದಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎಂದಿದ್ದಾರೆ. ಅದರೆ, ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ನೇಪಾಳಕ್ಕೆ ಭಾರತದ ರಾಯಭಾರಿಯಾಗಿರುವ ರಂಜೀರ್ ರೇ ಸ್ಪಷ್ಟಪಡಿಸಿದ್ದಾರೆ.

ಆದರೆ, ಈ ಎಲ್ಲಾ ಗೊಂದಲಗಳ ನಡುವೆ ನೇಪಾಳ-ಭಾರತ ಗಡಿಭಾಗದಲ್ಲಿ ಮೋದಿ ಆಗಮನಕ್ಕೆ ಸ್ವಾಗತ ಕೋರುವ ಕಟೌಟ್ ಗಳು ರಾರಾಜಿಸುತ್ತಿದ್ದವು. ಗೃಹ ಕಾರ್ಯದರ್ಶಿ ಸೂರ್ಯ ಪ್ರಸಾದ್ ಸಿಲ್ವಾಲ್ ಅವರು ಜನಕ್ ಪುರಕ್ಕೆ ಆಗಮಿಸಿ ಭದ್ರತಾ ಪರಿಶೀಲನೆ ನಡೆಸಿರುವುದರಿಂದ ಮೋದಿ ಅವರ ಆಗಮನದ ನಿರೀಕ್ಷೆ ಇನ್ನೂ ಜನರ ಮನಸ್ಸಿನಲ್ಲಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A shutdown affected normal life in Janakpur in Nepal Friday after 22 political parties announced a strike protesting against the cancellation of Indian Prime Minister Narendra Modi's visit to the town revered by Hindus and Buddhists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more