ಪಾಕಿಸ್ತಾನದ ನಾಟಕ ಬಯಲು, JeM ನಿಂದ ಮತ್ತೆ ಭಾರತ ವಿರೋಧಿ ಸಂದೇಶ

ನವದೆಹಲಿ, ಮಾರ್ಚ್ 05: ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ಪಾಕಿಸ್ತಾನ ನಿಷೇಧ ಹೇರಿದ್ದಾಗಿ ಹೇಳಿಕೊಂಡಿದ್ದು ಎಷ್ಟರ ಮಟ್ಟಿಗೆ ಸತ್ಯ? ಪಾಕಿಸ್ತಾನ ಹೇಳಿದ್ದೆಲ್ಲ ಸುಳ್ಳು ಎಂಬುದಕ್ಕೆ ಸಾಕ್ಷಿ ಇಲ್ಲಿದೆ.
ಮರಣಶಯ್ಯೆಯಲ್ಲಿ ಮೌಲನಾ, ಮಸೂದ್ ಅಜರ್ -ಪತ್ರಕರ್ತನಿಂದ ಉಗ್ರನಾದ ತನಕ
ಪುಲ್ವಾಮಾ ದಾಳಿಯ ನಂತರ ಭಾರತ ಉಗ್ರರ ನೆಲೆಯ ಮೇಲೆ ದಾಳಿ ಮಾಡಿದ ಮೇಲೂ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಸಾಪ್ತಾಹಿಕ 'ಆಲ್ ಖಲಮ್' ಇಂದಿಗೂ ಆನ್ ಲೈನ್ ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಆ ಆನ್ ಲೈನ್ ಪತ್ರಿಕೆಯಲ್ಲಿ ಫೆಬ್ರವರಿ 26 ರಂದು ನಡೆದ ಏರ್ ಸ್ಟ್ರೈಕ್ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಮಸೂದ್ ಅಜರ್ ಸೇನಾ ಆಸ್ಪತ್ರೆಯಿಂದ ಸ್ಥಳಾಂತರ, ಹೆಚ್ಚಿದ ಭದ್ರತೆ
"ಭಾರತದ ಇಂಥ ಬೆದರಿಕೆಗಿಗೆಲ್ಲ ನಾವು ಹೆದರುತ್ತೇವೆ ಎಂದು ಭಾರತ ಭ್ರಮಿಸುವ ಅಗತ್ಯವಿಲ್ಲ. ನಾವು ಖಂಡಿತ ಹೆದರಿಲ್ಲ" ಎಂದು ಬರೆಯಲಾಗಿದೆ.
ಜೆಇಎಂ ಮುಖಂಡ ಮಸೂದ್ ಅಝರ್ ನೇ ಸಾದಿ ಎಂಬ ಪೆನ್ ನೇಮಿನಲ್ಲಿ ಲೇಖನಗಳನ್ನು ಬರೆಯುತ್ತಾನೆ ಎನ್ನಲಾಗಿದೆ. ಆದರೆ ಆತ ಮೇಲೇಳಲಾಗದಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಪಾಕಿಸ್ತಾನವೇ ಹೇಳಿರುವಾಗ ಇವನ್ನೆಲ್ಲ ಬರೆಯುತ್ತಿರುವುವವರು ಯಾರು? ಪಾಕಿಸ್ತಾನ ಈ ಉಗ್ರ ಸಂಘಟನೆಯನ್ನು ನಿಷೇಧಿಸಿದೆ ಎನ್ನುವಾಗ ಅದರ ಸಾಪ್ತಾಹಿಕ ಇನ್ನೂ ಆನ್ ಲೈನ್ ನಲ್ಲಿ ಲಭ್ಯವಿರುವುದು ಹೇಗೆ? ಪಾಕಿಸ್ತಾನ ನಿಜಕ್ಕೂ ಜೆಇಎಂ ಬಗ್ಗೆ ಕಠಿಣ ನಿರ್ಧಾರ ತಳೆದಿದೆ ಎಂದು ನಂಬುವುದು ಹೇಗೆ? ಇದನ್ನು ಪಾಕಿಸ್ತಾನದ ಕಪಟ ನಾಟಕ ಎನ್ನದೆ ಏನೆನ್ನಬೇಕು ಎಂಬುದು ಭಾರತದ ಪ್ರಶ್ನೆ.