ಮೊದಲ ಜಪಾನ್, ಅಮೆರಿಕ, ಇಂಡಿಯಾ ಸ್ನೇಹಕೂಟಕ್ಕೆ 'ಜೈ'ಹೋ ಎಂದ ಮೋದಿ
Recommended Video

ಬ್ಯುನೋಸ್ ಏರಿಸ್(ಅರ್ಜೆಂಟೀನಾ), ಡಿಸೆಂಬರ್ 01: ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಸಲುವಾಗಿ ಸೃಷ್ಟಿಯಾದ ಜಪಾನ, ಅಮೆರಿಕ ಮತ್ತು ಭಾರತದ ಮೊದಲ ಸ್ನೇಹಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 'ಜೈ' ಎಂದು ನಾಮಕರಣ ಮಾಡಿದ್ದಾರೆ.
ಜಪಾನ್, ಅಮೆರಿಕ ಮತ್ತು ಇಂಡಿಯಾ ಈ ಮೂರು ದೇಶಗಳ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ರಚಿಸಿದ ಈ ಪದಕ್ಕೆ 'ಜಯವಾಗಲಿ' ಎಂಬ ಅರ್ಥವೂ ಇರುವುದರಿಂದ ಈ ಪದ ಹೆಚ್ಚು ಅರ್ಥಪೂರ್ಣವೆನ್ನಿಸಿದೆ.
ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ನಡುವೆ ತ್ರಿಪಕ್ಷೀಯ ಭೇಟಿ ಏರ್ಪಟ್ಟಿತ್ತು.

"ಜೈ ಎಂದರೆ ಜಯ ಎಂದರ್ಥ. ನಾವು ಮೂರು ದೇಶಗಳೂ ಸೇರಿ ಹೊಸ ಗೆಲುವಿಗೆ ಈ ಮೂಲಕ ಮುನ್ನುಡಿ ಹಾಡುತ್ತೇವೆ. 'ಜೈ' ಮೂಲಕ ನಾವು ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ನಾಂದಿ ಹಾಡುತ್ತೇವೆ" ಎಂದು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications