ಸುಂದರಿಯಾಗಿದ್ರೆ ಸಾಲದು, ತಲೆಯಲ್ಲಿ ಬುದ್ಧಿಯೂ ಇರಬೇಕು!

Posted By:
Subscribe to Oneindia Kannada
ಹುಚ್ಚುತನಕ್ಕೆ ಹತ್ತಾರು ಮುಖಗಳಿರುತ್ತವೆ ಅಂತಾರೆ. ಹುಚ್ಚು ಖೋಡಿ ಮನಸ್ಸು ಅದಕೆ ಹದಿನಾರರ ವಯಸು ಎಂಬ ಹಾಡನ್ನೂ ನೀವು ಕೇಳಿಬರಹುದು. ಆದರೆ, ಈ ಇಪ್ಪತ್ತೆರಡರ ಹರೆಯದ ಸುರಸುಂದರಿಯ ಹುಚ್ಚುತನ ನೋಡಿ, ದಂಗಾಗುವುದು ಮಾತ್ರವಲ್ಲ, ಆಕೆಯ ಹುಚ್ಚುತನ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿದೆ.

ನೋಡಲು ಸುಂದರವಾಗಿದ್ರೆ ಮಾತ್ರ ಸಾಲದು, ತಲೆಯಲ್ಲಿ ಬುದ್ಧಿಯೂ ಇರಬೇಕು ಸ್ವಾಮೀ ಎಂದು 'ಆ ಚಿತ್ರವನ್ನು' ವೀಕ್ಷಿಸಿದವರು ಟೀಕಾಪ್ರಹಾರ ಮಾಡುತ್ತಿದ್ದಾರೆ. ಇಷ್ಟಕ್ಕೂ ರಷ್ಯಾದ ಮಾಡೆಲ್ ವಿಕ್ಟೋರಿಯಾ ಒಡಿನ್‌ಸ್ತೋವಾ ಅವರು ಅಂಥಾದ್ದೇನು ಮಾಡಿದ್ದು? ಮುಂದೆ ಓದಿ.

It's not just enough to be beautiful

ಫೋಟೋ ತೆಗೆಸಿಕೊಳ್ಳುವ ಹುಚ್ಚು ಯಾರಿಗೆ ಇರುವುದಿಲ್ಲ ಹೇಳಿ? ಪ್ರಸಿದ್ಧವಾದ ಕಟ್ಟಡದ ಮುಂದೆ ಯಾವುದ್ಯಾವುದೋ ಭಂಗಿಯಲ್ಲಿ ನಿಂತು ಫೋಟೋ ತೆಗಿಸಿಕೊಳ್ಳುವುದೆಂದರೆ ಹಲವರಿಗೆ ಅದೇನೋ ಪ್ರೀತಿ. ಆದರೆ, ರಷ್ಯಾದ ಸೇಂಟ್ ಪೀಟರ್ಸ್ಬರ್ಗ್‌ನ ಈ ಮಾಡೆಲ್ ಮಾಡಿದ್ದು ಏನು ಗೊತ್ತಾ?

ದುಬೈನ ಗಗನಚುಂಬಿ ಕಟ್ಟದ ತುತ್ತತುದಿಯಲ್ಲಿ ಇನಿಯನ ತೋಳಿನಿಂದ ಮತ್ತಾವುದೇ ಆಸರೆ ಇಲ್ಲದೆ ಜೋತುಬಿದ್ದಿದ್ದಾಳೆ! ಈ ವಿಡಿಯೋ ನೋಡುತ್ತಿದ್ದರೆ ಎಂಥವರ ಹೃದಯ ಕೂಡ ಧಬಧಬ ಬಡಿಯಲು ಪ್ರಾರಂಭಿಸುತ್ತದೆ. ಇದೆಂಥ ಹುಚ್ಚುತನ, ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ಯಾರು ಜವಾಬ್ದಾರರು ಎಂದು ಬಾಯಿಯ ಮೇಲೆ ಕೈ ಇಡುತ್ತಿದ್ದಾರೆ.

ಮೈಜುಂ ಎನ್ನಿಸುವಂಥ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್ ನಲ್ಲಿ ಹರಿಯಬಿಡಲಾಗಿದೆ. ಪ್ರಾಣವನ್ನು ಪಣಕ್ಕಿಟ್ಟು ಮಾಡಿದಂಥ ಈ ಗಟ್ಟಿಗುಂಡಿಗೆಯ ಸ್ಟಂಟ್ ನೋಡುತ್ತಿದ್ದರೆ ಎಂಥವರೂ ಬೆಚ್ಚಿಬೀಳುತ್ತಾರೆ.

ಈ ವಿಡಿಯೋ ನೋಡಿದವರು ಟೀಕಾಪ್ರಹಾರ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿದ್ದರೆ ಮೈಯೆಲ್ಲ ನಡುಗುತ್ತದೆ ಎಂದು ವೀಕ್ಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಸುಂದರಿ ತಲೆಯಲ್ಲಿ ಅದೇನು ತುಂಬಿಕೊಂಡಿದ್ದಾಳೆ. ಇದನ್ನು ನೋಡಿ ಎಳೆಯರು ಪ್ರಭಾವಿತರಾದರೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A video and photo posted by 22-year-old Russian model is being criticized on social media for the stunning stunt she has done. The model Victoria Odintsova hung from the tip of skyskaper from the hands of her boyfriend.
Please Wait while comments are loading...