ಇಸ್ತಾನ್ ಬುಲ್ ಕ್ಲಬ್ ದಾಳಿಕೋರನ ಬಂಧನ

Posted By:
Subscribe to Oneindia Kannada

ಇಸ್ತಾನ್ ಬುಲ್, ಜನವರಿ 17: ಕಳೆದ ತಿಂಗಳ 31ರಂದು ರಾತ್ರಿ ಇಲ್ಲಿನ ನೈಟ್ ಕ್ಲಬ್ ಒಂದರ ಮೇಲೆ ಗುಂಡಿನ ದಾಳಿ ನಡೆಸಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಸುಮಾರು 39 ಜನರನ್ನು ಬಲಿ ಪಡೆದಿದ್ದ ಶಂಕಿತ ಜಿಹಾದಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಪಡೆಗಳಿಗೆ ಮಹತ್ವದ ಸುಳಿವು ಸಿಕ್ಕ ಆಧಾರದ ಮೇಲೆ ಇಸ್ತಾನ್ ಬುಲ್ ನ ಇಸೆನಿಯುರ್ಟ್ ಜಿಲ್ಲೆಯ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಈತನನ್ನು ಬಂಧಿಸಲಾಗಿದೆ.

Istanbul Nightclub Attacker arrested

ಆದರೆ, ಬಂಧಿತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಿಟ್ಟುಕೊಟ್ಟಿಲ್ಲ. ಅಪಾರ್ಟ್ ಮೆಂಟ್ ನಲ್ಲಿ ಆತ ತನ್ನ ನಾಲ್ಕು ವರ್ಷದ ಮಗನೊಂದಿಗೆ ಜೀವಿಸುತ್ತಿದ್ದನೆಂದು ಮಾತ್ರ ತಿಳಿಸಿದ್ದಾರೆ.

ಡಿ. 31ರ ರಾತ್ರಿ, ಇಸ್ತಾನ್ ಬುಲ್ ನ ಪ್ರತಿಷ್ಠಿತ ನೈಟ್ ಕ್ಲಬ್ ಗಳಲ್ಲೊಂದಾದ ರೈನಾ ನೈಟ್ ಕ್ಲಬ್ ಮೇಲೆ ಏಕೈಕ ವ್ಯಕ್ತಿಯಿಂದ ಗುಂಡಿನ ದಾಳಿ ನಡೆದಿದ್ದು, ಇದರ ಹೊಣೆಯನ್ನು ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Turkish police on Monday captured the suspected jihadist who slaughtered 39 people on New Year's night at an Istanbul nightclub.
Please Wait while comments are loading...