Israel vs Hezbollah: ಯುದ್ಧ ಶುರುವಾಗುವ ಮುನ್ಸೂಚನೆ! ದಾಳಿ, ಪ್ರತಿದಾಳಿ ಆರಂಭ

ಇಸ್ರೇಲ್ ಮತ್ತೊಂದು ಯುದ್ಧಕ್ಕೆ ಸಜ್ಜಾಗಿದೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಕೆಲಸ ಮಾಡುವ ಕಡೆಗಳಲ್ಲಿ ಪೇಜರ್, ವಾಕಿ ಟಾಕಿಗಳು ಸ್ಪೋಟಗೊಂಡು 37 ಜನ ಮೃತಪಟ್ಟಿದ್ದು, 2900ಕ್ಕೂ ಹೆಚ್ಚು ಜನ ಗಾಯಗೊಂಡ ಬಳಿಕ, ಹಿಜ್ಬುಲ್ಲಾ ಸಂಘಟನೆ ಕೆರಳಿ ನಿಂತಿದೆ. ಈ ಕೃತ್ಯವನ್ನು ಮಾಡಿರುವುದು ಇಸ್ರೇಲ್‌ನ ಮೊಸಾದ್ ಎಂದು ಆರೋಪ ಮಾಡಿರುವ ಅದು, ಇಸ್ರೇಲ್ ಮೇಲೆ ವಾಯುದಾಳಿ ಆರಂಭಿಸಿದೆ.

ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಗುರುವಾರ ಲೆಬನಾನ್‌ನಲ್ಲಿ ಹಿಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ ಎಂದು ಅದರ ನಾಯಕ ಹಸನ್ ನಸ್ರಲ್ಲಾ ಹಿಂಬಾಲಕರು ಮತ್ತು ಲೆಬನಾನಿನ ಜನರನ್ನು ಉದ್ದೇಶಿಸಿ ಮಾತನಾಡುವಾಗ ಆರೋಪಿಸಿದ್ದಾರೆ.

Israeli Military Reports Deaths of Two Soldiers Near Lebanon Border

ಲೆಬನಾನ್‌ನಾದ್ಯಂತ ಹಿಜ್ಬುಲ್ಲಾ ಬಳಸಿದ ನೂರಾರು ಪೇಜರ್‌ಗಳು ಮತ್ತು ವಾಕಿ-ಟಾಕಿಗಳು ಸ್ಫೋಟಗೊಂಡು ಸಾವು ನೋವು ಸಂಭವಿಸಿದ ಬಳಿಕ ನಸ್ರಲ್ಲಾ ಹಿಜ್ಬುಲ್ಲಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲೆಬನಾನ್‌ನ ರಾಜ್ಯ ಮಾಧ್ಯಮ ವರದಿ ಮಾಡಿರುವ ಪ್ರಕಾರ, ನಸ್ರುಲ್ಲಾ ಭಾಷಣ ಮಾಡುವ ಸಂದರ್ಭದಲ್ಲೇ ಇಸ್ರೇಲ್ ಯುದ್ಧವಿಮಾನಗಳು ಬೈರುತ್‌ ಮೇಲೆ ದಾಳಿ ಮಾಡಿವೆ ಎಂದುಹೇಳಿದೆ.

ಇಸ್ರೇಲಿ ರಕ್ಷಣಾ ಪಡೆಗಳು ಲೆಬನಾನ್‌ನಲ್ಲಿ ಹಿಜ್ಬುಲ್ಲಾದ ಭಯೋತ್ಪಾದಕ ಸಾಮರ್ಥ್ಯಗಳು ಮತ್ತು ಮೂಲಸೌಕರ್ಯಗಳನ್ನು ತಪ್ಪಿಸಲು ದಾಳಿ ಮಾಡುತ್ತಿದೆ. ಅವರ ಶಸ್ತ್ರಾಸ್ತ್ರಗಳ ಸಂಗ್ರಹಕಾರಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಅವರು ನಾಗರಿಕರನ್ನು ಗುರಾಣಿಯಂತೆ ಬಳಿಸಿಕೊಂಡಿದ್ದಾರೆ ಎಂದು ಇಸ್ರೇಲಿ ರಕ್ಷಣಾ ಪಡೆ ಹೇಳಿದೆ.

ಲೆಬನಾನ್‌ನಲ್ಲಿರುವ ಇಸ್ರೇಲಿಗಳು ಇಸ್ರೇಲ್‌ನ ಪ್ರದೇಶಗಳಿಗೆ ಹಿಂತಿರುಗಲು ಸಹಾಯ ಮಾಡುವುದಾಗಿ ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ನಿವಾಸಿಗಳು ತಮ್ಮ ಮನೆಗಳಿಗೆ ಮರಳಲು ಮತ್ತು ಯುದ್ಧದ ಗುರಿಗಳನ್ನು ಸಾಧಿಸಲು ಉತ್ತರ ಇಸ್ರೇಲ್‌ನ ರಕ್ಷಣೆ ಮಾಡಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಆದರೆ, ಸ್ಥಳಾಂತರಗೊಂಡ ಇಸ್ರೇಲಿಗಳು ಎಂದಿಗೂ ಉತ್ತರ ಇಸ್ರೇಲ್‌ಗೆ ಹಿಂತಿರುಗಲು ಸಾಧ್ಯವಾಗುವುದಿಲ್ಲ ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾಹ್ ಪ್ರತಿಜ್ಞೆ ಮಾಡಿದ್ದಾರೆ. ಮಿಲಿಟರಿ ಉಲ್ಬಣಗೊಳ್ಳುವಿಕೆ, ಯಾವುದೇ ಹತ್ಯೆಗಳು, ಸಂಪೂರ್ಣ ಯುದ್ಧವಾದರೂ ಕೂಡ ನಿವಾಸಿಗಳನ್ನು ಗಡಿಗೆ ಹಿಂತಿರುಗಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಲೆಬನಾನ್ ಗಡಿಯಲ್ಲಿ ಹಿಜ್ಬುಲ್ಲಾ ದಾಳಿಗಳಿಂದ ತನ್ನ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿ ಸ್ಫೋಟಗೊಂಡಿದ್ದರಿಂದ ಹಿಜ್ಬುಲ್ಲಾಗೆ ಭಾರಿ ಹೊಡೆತ ಬಿದ್ದಿದೆ ಎನ್ನುವುದನ್ನು ಅವರ ನಾಯಕ ನಸ್ರುಲ್ಲಾಹ್ ಒಪ್ಪಿಕೊಂಡಿದ್ದಾರೆ.

ದಾಳಿಯನ್ನು ಹತ್ಯಾಕಾಂಡ ಮತ್ತು ಯುದ್ಧದ ಕೃತ್ಯ ಎಂದು ಕರೆದಿರುವ ಅವರು, ಇಸ್ರೇಲ್‌ ವಿರುದ್ಧ ಕಠಿಣ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆ ಕೊಟ್ಟಿದ್ದು, ನ್ಯಾಯಯುತ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಹಿಜ್ಬುಲ್ಲಾ ಪ್ಯಾಲೆಸ್ತಿನ್‌ನ ಉಗ್ರಗಾಮಿ ಗುಂಪಾದ ಹಮಾಸ್‌ನ ಮಿತ್ರರಾಷ್ಟ್ರವಾಗಿದೆ. ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ, ಗಾಜಾದಲ್ಲಿ ಯುದ್ಧ ನಡೆಸುತ್ತಿದೆ. ಹಮಾಸ್‌ಗೆ ಹಿಜ್ಬುಲ್ಲಾ ಬೆಂಬಲ ನೀಡಿದ್ದು ಇಸ್ರೇಲ್ ಕೋಪಕ್ಕೆ ಕಾರಣವಾಗಿದೆ. ಗಾಜಾದಲ್ಲಿ ಕದನ ವಿರಾಮ ಘೋಷಣೆಯಾಗುವವರೆಗೆ ಇಸ್ರೇಲ್ ವಿರುದ್ಧ ಹಿಜ್ಬುಲ್ಲಾದ ಹೋರಾಟವನ್ನು ಮುಂದುವರಿಸುವುದಾಗಿ ನಸ್ರಲ್ಲಾ ಪ್ರತಿಜ್ಞೆ ಮಾಡಿದ್ದಾರೆ. ಇದು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+