Israel VS Hamas War: ಅನ್ನ, ನೀರು, ನೆರಳಿಲ್ಲದೆ ನರಳುತ್ತಿರುವ ಗಾಜಾ ಮಂದಿಗೆ ಮತ್ತೊಂದು ಶಾಕ್!
ಇಸ್ರೇಲ್ ತನ್ನ ಶತ್ರು ಹಮಾಸ್ ವಿರುದ್ಧ ಉಗ್ರರೂಪ ತಾಳಿದ್ದು, ಎಲ್ಲಾ ಸರ್ವನಾಶ ಮಾಡಿ ರಣಕೇಕೆ ಹಾಕುತ್ತಿದೆ. ಸುಮ್ಮನೆ ಇದ್ದ ಇಸ್ರೇಲ್ ಮೇಲೆ ದಾಳಿ ಮಾಡಿದ ತಪ್ಪಿಗೆ ಹಮಾಸ್‌ನ ಉಗ್ರಪಡೆ ಹೆಣವಾಗಿ ಬಿದ್ದಿದೆ. ಆದರೆ ಇವರಿಬ್ಬರ ಜಗಳದಲ್ಲಿ ಸಾಮಾನ್ಯ ಜನರ ಜೀವವನ್ನ ಬಲಿಪಡೆಯುತ್ತಿರುವುದು ಎಷ್ಟು ನ್ಯಾಯ? ಎಂಬ ಪ್ರಶ್ನೆಯನ್ನು ಇಡೀ ಜಗತ್ತೇ ಕೇಳುತ್ತಿದೆ. ಈ ಸಮಯದಲ್ಲೇ ಗಾಜಾಪಟ್ಟಿಗೆ ಮತ್ತೊಂದು ಶಾಕ್ ಕೊಟ್ಟಿದೆ ಇಸ್ರೇಲ್.
ಯುದ್ಧವೇ ಹೀಗೆ, ಅದು ಶುರುವಾಗುವುದು ಮಾತ್ರ ಗೊತ್ತಾಗುತ್ತದೆ. ಆದರೆ ಯುದ್ಧ ನಿಂತು ಹೋಗುವಾಗ ಎಲ್ಲವು ನಾಶವಾಗಿ ಹೋಗಿರುತ್ತೆ. ಇಸ್ರೇಲ್ & ಹಮಾಸ್ ಉಗ್ರರ ಮಧ್ಯೆ ಈಗ ನಡೆಯುತ್ತಿರುವ ರಣಕಾಳಗ ಕೂಡ ಇದೇ ರೀತಿ ಸಾವಿರಾರು ಜೀವಗಳನ್ನು ಹಿಂದೆ ಮುಂದೆ ಯೋಚನೆ ಮಾಡದೆ ಬಲಿ ಪಡೆದಿದೆ. ಈಗಾಗಲೇ ಇಸ್ರೇಲ್ ಮತ್ತು ಹಮಾಸ್ ನಡುವಿನ ಈ ಕಾಳಗದಲ್ಲಿ 3000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಗಾಜಾಪಟ್ಟಿ ಜನರಿಗೆ ಮತ್ತೊಂದು ಆಘಾತ ನೀಡಿದೆ ಇಸ್ರೇಲ್.

ಗಾಜಾ ಜನರಿಗೆ ಅನ್ನ, ನೀರು, ನೆರಳು...
ಅಂದಹಾಗೆ ಹಮಾಸ್ ಉಗ್ರರು & ಇಸ್ರೇಲ್ ನಡುವೆ ನಡೆಯುತ್ತಿರುವ ಘೋರ ಯುದ್ಧ ಪರಿಣಾಮ ಎರಡೂ ದೇಶಗಳ ಸಾಮಾನ್ಯ ಜನ ನರಳುತ್ತಿದ್ದಾರೆ. ಅದ್ರಲ್ಲೂ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗೆ ಗಾಜಾಪಟ್ಟಿ ಛಿದ್ರವಾಗಿ ಹೋಗಿದೆ. ಹೀಗೆ ಮೊದಲೇ ಸಂಕಷ್ಟಕ್ಕೆ ಸಿಲುಕಿ ನರಳಿರುವ ಗಾಜಾಪಟ್ಟಿಗೆ ಗಾಯದ ಮೇಲೆ ಬರೆ ಎಳೆದಿದೆ ಇಸ್ರೇಲ್ ಸರ್ಕಾರ. ಗಾಜಾಪಟ್ಟಿಗೆ ಈಗಾಗಲೇ ಅನ್ನ, ನೀರು, ನೆರಳು ಹಾಗೂ ಬೆಳಕು ಅಂದರೆ ವಿದ್ಯುತ್ ಕೂಡ ಸಿಗದಂತೆ ಲಾಕ್ ಮಾಡಿದೆ ಇಸ್ರೇಲ್ ಸರ್ಕಾರ. ಇದೀಗ ಮತ್ತೊಂದು ಆಘಾತ ನೀಡಿದೆ.
ಒತ್ತೆಯಾಳುಗಳನ್ನ ಬಿಡದಿದ್ದರೆ ಸರ್ವನಾಶ!
ಗಾಜಾಪಟ್ಟಿ ಮೊದಲೇ ಬಡತನ & ಹಸಿವಿನಿಂದ ಬಳಲುತ್ತಿದೆ. ಈ ಮಧ್ಯೆ ಹಮಾಸ್ ಉಗ್ರರ ಕಾಟ ಶುರುವಾಗಿದೆ. ಉಗ್ರರು & ಬಡತನ ನಡುವೆ ನರಳುತ್ತಿದ್ದ ಗಾಜಾಪಟ್ಟಿಯ ಸಾಮಾನ್ಯ ಜನರೀಗ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಮಾಸ್ ಉಗ್ರರನ್ನು ಹೊಡೆದು ಹಾಕಲು ಇಸ್ರೇಲ್ ಮುಂದಾಗಿದ್ದರೆ, ಕೈಗೆ ಸಿಗುತ್ತಿರುವುದು ಮಾತ್ರ ಸಾಮಾನ್ಯ ಜನರು. ಹೀಗಿದ್ದಾಗಲೇ ಉಗ್ರರು ಒತ್ತೆಯಾಳುಗಳನ್ನು ರಿಲೀಸ್ ಮಾಡದೇ ಇದ್ದರೆ, ಗಾಜಾಪಟ್ಟಿಗೆ ಅನ್ನ, ನೀರು & ವಿದ್ಯುತ್ ಎಂದೆಂದಿಗೂ ಸಿಗಲ್ಲ ಎಂದು ಇಸ್ರೇಲ್ ಗುಡುಗಿದೆ. ಈ ಬಗ್ಗೆ ಮಾತನಾಡಿರುವ ಇಸ್ರೇಲ್‌ನ ಇಂಧನ ಸಚಿವ ಇಸ್ರೇಲ್ ಕಾಟ್ಜ್, ಇಸ್ರೇಲ್ ಒತ್ತೆಯಾಳುಗಳು ತಮ್ಮ ತಮ್ಮ ಮನೆಗೆ ವಾಪಸ್ ಬರದಿದ್ದರೆ ನಿಮ್ಮ ನಾಶ ಪಕ್ಕಾ ಎಂದಿದ್ದಾರೆ.

ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದಾಗ 100ಕ್ಕೂ ಹೆಚ್ಚು ಜನರನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಇವರಲ್ಲಿ ಮಹಿಳೆಯರು & ಮಕ್ಕಳು ಸೇರಿದ್ದಾರೆ. ಇದೀಗ ಅವರ ಬಿಡುಗಡೆಗಾಗಿ ಸಂಧಾನ ನಡೆಸಿ ವಿಫಲವಾಗಿರುವ ಇಸ್ರೇಲ್, ಭೀಕರ ಯುದ್ಧಕ್ಕೆ ರಣಕಹಳೆ ಮೊಳಗಿಸಿದ್ದು. ಇಡೀ ಗಾಜಾಪಟ್ಟಿಗೆ ಅಗತ್ಯ ಇರುವ ಎಲ್ಲಾ ವಸ್ತುಗಳನ್ನ ನಿಲ್ಲಿಸಿದೆ. ಅಲ್ಲದೆ ನಿನ್ನೆಯಷ್ಟೇ ವಿದ್ಯುತ್ ಕೂಡ ಕಟ್ ಮಾಡಿ, ಕರೆಂಟ್ ಇಲ್ಲದೆ ಗಾಜಾಪಟ್ಟಿ ಜನ ಪರದಾಡುವಂತೆ ಇದೇ ಇಸ್ರೇಲ್ ಮಾಡಿದೆ.
ಹೇಳಿದಂತೆ ಮಾಡಿದ ಇಸ್ರೇಲ್!
ಇನ್ನು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ ಖುದ್ದು ಇಸ್ರೇಲ್ ಪ್ರಧಾನಿಯೇ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಇಸ್ರೇಲ್‌ನ ಮೇಲೆ ಕೈಯಿಟ್ಟ ಉಗ್ರರಿಗೆ ತಕ್ಕ ಪಾಠ ಗ್ಯಾರಂಟಿ ಅಂತಾ ಘೋಷಿಸಿದ್ದರು. ಇಸ್ರೇಲ್ ಪ್ರಧಾನಿ ಹೇಳಿದಂತೆ ಈಗ ನಡೆದಿದ್ದು, ಗಾಜಾಪಟ್ಟಿಗೆ ಅನ್ನ, ನೀರು, ನೆರಳಿನ ಜತೆ ವಿದ್ಯುತ್ ಕೈಕೊಟ್ಟಿದೆ. ವಿದ್ಯುತ್ ಅಭಾವ ಕಾರಣ ಗಾಜಾಪಟ್ಟಿಯಲ್ಲಿನ ಏಕೈಕ ವಿದ್ಯುತ್ ಕೇಂದ್ರ ಮುಚ್ಚಲಾಗಿದೆ. ಇನ್ನು ಈ ಮಧ್ಯೆ ಇನ್ನಷ್ಟು ತಿಂಗಳು ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಇಸ್ರೇಲ್ ಗುಡುಗಿದೆ. ಆದರೆ ಇಸ್ರೇಲ್ ವರ್ತನೆಗೆ ಜಗತ್ತಿನಾದ್ಯಂತ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications