Israel War: ಗಾಜಾ ಮೇಲಿನ ದಾಳಿ ತೀವ್ರಗೊಳಿಸಿದ ಇಸ್ರೇಲ್

ಇಸ್ರೇಲ್ ಹಮಾಸ್ ಸಂಘರ್ಷ 16ನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ಗಾಜಾ ಪ್ರದೇಶದ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಇಸ್ರೇಲ್ ಈ ಪ್ರದೇಶದ ಜನರಿಗೆ ಹಲವು ದಿನಗಳ ಹಿಂದೆಯೇ ಸೂಚನೆ ನೀಡಿತ್ತು.

ಭಾನುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ, . ದಕ್ಷಿಣ ಗಾಜಾ ನಗರದ ಖಾನ್ ಯೂನಿಸ್‌ನಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಮಾಧ್ಯಮ ವರದಿ ಮಾಡಿದೆ.

Israel War

ಗಾಜಾದ ಉತ್ತರ ಭಾಗದಲ್ಲಿ ದಾಳಿಯನ್ನು ಹೆಚ್ಚಿಸುತ್ತೇವೆ ಎಂದು ಇಸ್ರೇಕ್ ಎಚ್ಚರಿಸಿದ ಕೆಲವು ಗಂಟೆಗಳ ನಂತರ ಈ ದಾಳಿ ನಡೆದಿದೆ. ಗಾಜಾದ ದಕ್ಷಿಣಕ್ಕೆ ಚಲಿಸುವಂತೆ ಗಾಜಾನ್‌ಗಳಿಗೆ ಇಸ್ರೇಲ್ ಕರೆ ನೀಡಿದೆ.

"ನಿಮ್ಮ ಸುರಕ್ಷತೆಗಾಗಿ ದಕ್ಷಿಣದ ಕಡೆಗೆ ಚಲಿಸಿ. ನಾವು ಗಾಜಾ ನಗರದ ಪ್ರದೇಶದಲ್ಲಿ ದಾಳಿಯನ್ನು ಮುಂದುವರಿಸುತ್ತೇವೆ ಮತ್ತು ದಾಳಿಯನ್ನು ಹೆಚ್ಚಿಸುತ್ತೇವೆ" ಎಂದು ಇಸ್ರೇಲಿ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಇಸ್ರೇಲಿ ವರದಿಗಾರರಿಗೆ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ.

ಮಾನವೀಯ ನೆರವು

ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ಮೊದಲ ಬಾರಿಗೆ ಗಾಜಾ ಪಟ್ಟಿಗೆ ಅನುಮತಿಸಲಾದ 20 ಟ್ರಕ್‌ಗಳ ಮೊದಲ ಮಾನವೀಯ ನೆರವು ಬೆಂಗಾವಲು ರಾಫಾ ಗಡಿ ದಾಟುವ ಮೂಲಕ ಆಗಮಿಸಿದೆ. ಹಮಾಸ್ ಉಗ್ರರು ಇಸ್ರೇಲ್ ನಾಗರಿಕರನ್ನು ಕೊಂದ ನಂತರ, ಇಡೀ ಗಾಜಾ ಮೇಲೆ ಇಸ್ರೇಲ್ ಸೈನಿಕರು ಮುಗಿಬಿದ್ದಿದ್ದಾರೆ.

ಇಸ್ರೇಲ್‌ನ ವಾಯು ಮತ್ತು ಕ್ಷಿಪಣಿ ದಾಳಿಯಲ್ಲಿ ನೂರಾರು ಮಕ್ಕಳು ಸೇರಿದಂತೆ ಕನಿಷ್ಠ 4,385 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.

ಹಮಾಸ್ ಉಗ್ರರನ್ನು ಕೊಂದಿದ್ದೇವೆ ಎಂದ ಇಸ್ರೇಲ್

ವೆಸ್ಟ್ ಬ್ಯಾಂಕ್‌ನ ಜೆನಿನ್‌ನಲ್ಲಿರುವ ಮಸೀದಿಯ ಮೇಲೆ ನಡೆದ ವೈಮಾನಿಕ ದಾಳಿ ಮಾಡಿದ್ದು, ಇಸ್ರೇಲ್ ಮೇಲೆ ದಾಳಿಗಳನ್ನು ಯೋಜಿಸುತ್ತಿದ್ದ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್‌ನ "ಭಯೋತ್ಪಾದಕ ಕಾರ್ಯಕರ್ತರನ್ನು" ಕೊಂದಿರುವುದಾಗಿ ಇಸ್ರೇಲ್ ಭಾನುವಾರ ಹೇಳಿದೆ.

ಅಲ್-ಅನ್ಸಾರ್ ಮಸೀದಿ ಮೇಲೆ ವೈಮಾನಿಕ ದಾಳಿ ಮಾಡಲಾಗಿದೆ. ಇಸ್ರೇಲಿ ಮಿಲಿಟರಿ "ಭಯೋತ್ಪಾದಕರು ದಾಳಿಗಳನ್ನು ಯೋಜಿಸಲು ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಬಳಸಿದ್ದಾರೆ" ಎಂದು ಹೇಳಿದೆ.

ದಾಳಿಯಲ್ಲಿ ಸಾವನ್ನಪ್ಪಿದವರು ಕಳೆದ ತಿಂಗಳುಗಳಲ್ಲಿ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾರೆ ಮತ್ತು ಹೆಚ್ಚುವರಿ ಭಯೋತ್ಪಾದಕ ದಾಳಿಯನ್ನು ಯೋಜಿಸಿದ್ದರು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಜೆನಿನ್ ಮಸೀದಿ ವೈಮಾನಿಕ ದಾಳಿಯಲ್ಲಿ ಹಮಾಸ್ 'ಭಯೋತ್ಪಾದಕ ಆಪರೇಟಿವ್‌ಗಳನ್ನು' ಕೊಂದಿದೆ ಎಂದು ಇಸ್ರೇಲ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+