ಇರಾನ್ ವಿರುದ್ಧ ಭೀಕರ ದಾಳಿ ಆರಂಭಿಸಿದ ಇಸ್ರೇಲ್, ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರು | Israel Military
ಇಸ್ರೇಲ್ ದಿಢೀರ್ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಶುರು ಮಾಡಿದ್ದು, ಅಮೆರಿಕ ಜೊತೆಗಿನ ಇರಾನ್ ಸಂಧಾನ ವಿಫಲವಾದ ಬೆನ್ನಲ್ಲೇ ಯುದ್ಧ ಶುರುವಾಗಿದೆ. ಇರಾನ್ ನಾಯಕರಿಗೆ ಪದೇ ಪದೇ ಈ ವಿಚಾರವಾಗಿ ಅಮೆರಿಕ ಮತ್ತು ಇಸ್ರೇಲ್ ನಾಯಕರು ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ದಾರಿಗೆ ಬಾರದೆ, ಸೂಕ್ತ ಸಂಧಾನಕ್ಕೂ ಒಪ್ಪದೆ ಕಿರಿಕ್ ಮಾಡಿತ್ತು ಇರಾನ್. ಈಗಾಗಲೇ ಅಮೆರಿಕದ ಬೃಹತ್ ಸೇನೆ ಇರಾನ್ ಗಡಿಯಲ್ಲಿ ಕಾಯುತ್ತಾ ಇದ್ದು, ಈ ಸಮಯದಲ್ಲೇ ಇಸ್ರೇಲ್ ಸೇನೆಯಿಂದ ಅಧಿಕೃತ ದಾಳಿ ಆರಂಭ ಆಗಿದೆ. ಬೃಹತ್ ಕ್ಷಿಪಣಿಗಳು ಇದೀಗ ಇರಾನ್ ವಾಯು ಗಡಿಯ ಮೇಲೆ ಹಾರಾಡುತ್ತಾ ಬಂದು ಕಟ್ಟಡಗಳನ್ನು ಸರ್ವನಾಶ ಮಾಡುತ್ತಿವೆ.
ತಕ್ಷಣ ಪರಮಾಣು ಒಪ್ಪಂದಕ್ಕೆ ಇರಾನ್ ಒಪ್ಪದಿದ್ದರೆ 2025ರ ಜೂನ್ ದಾಳಿಗಿಂತ ಕಠಿಣ ದಾಳಿ ಗ್ಯಾರಂಟಿ, ಎಂಬ ಎಚ್ಚರಿಕೆ ನೀಡಿತ್ತು ಅಮೆರಿಕ. ಈ ಬೆಳವಣಿಗೆ ನಂತರ ವೇಗ & ಬಲದಿಂದ ಕಾರ್ಯನಿರ್ವಹಿಸುವ ಭಾರಿ ನೌಕಾಪಡೆ ಇರಾನ್ ಕಡೆಗೆ ಸಾಗುತ್ತಿದೆ ಎಂದು ವಾರ್ನಿಂಗ್ ಕೊಟ್ಟಿದ್ದರು ಟ್ರಂಪ್. ಆದರೆ ಎಲ್ಲವೂ ಮಾತುಕತೆ ಮೂಲಕ ಸರಿ ಹೋಗಬಹುದು ಎಂಬ ನಿರೀಕ್ಷೆಯಲ್ಲಿ ಮಧ್ಯಪ್ರಾಚ್ಯದ ಜನರು ಇದ್ದರೂ, ದಿಢೀರ್ ಯುದ್ಧ ಶುರುವಾಗಿದೆ. ಅಮೆರಿಕ & ಇರಾನ್ ನಡುವೆ ಜಿನೇವಾದಲ್ಲಿ ನಡೆದ ಶಾಂತಿ ಮಾತುಕತೆ, ಯಶಸ್ಸು ಕಾಣಲೇ ಇಲ್ಲ. ಈ ಘಟನೆ ಬಳಿಕ ಹಿಂದೆ & ಮುಂದೆ ಯೋಚನೆ ಮಾಡದೆ ಮುಂದೆ ನುಗ್ಗಿ ದಾಳಿ ಮಾಡಿದೆ ಇಸ್ರೇಲ್ ಮಿಲಿಟರಿ. ಮತ್ತೊಂದು ಕಡೆ, ಇರಾನ್ ಕೂಡ ಇದೀಗ ಮರುದಾಳಿ ಶುರು ಮಾಡಿದೆ. ಹೀಗಾಗಿ 3ನೇ ಮಹಾಯುದ್ಧದ ಭೀತಿ ಇದೀಗ ಎದುರಾಗಿದ್ದು, ಎಲ್ಲೆಲ್ಲೂ ಆತಂಕ ಮೂಡಿದೆ.

ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದೇನು?
ಇರಾನ್ ರಾಜಧಾನಿ ತೆಹ್ರಾನ್ ನಗರದಲ್ಲಿ ದಿಢೀರ್ ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿಬಂದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಇದೇ ಕಾರಣಕ್ಕೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಸೇನಾ ಉದ್ವಿಗ್ನತೆಯೂ ಹೆಚ್ಚಾಗಿ ಯುದ್ಧ ಶುರುವಾಗಿದೆ. ದಾಳಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಡೆಸಿದ್ದೇವೆ ಎಂದು ಈಗ ಇಸ್ರೇಲ್ ಹೇಳಿಕೊಂಡಿದ್ದು ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯೂ ಈಗ ಹುಸಿಯಾಗಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಸೇನಾ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಗುಡುಗಿದ್ದಾರೆ. ಭದ್ರತೆಗೆ ಧಕ್ಕೆ ಉಂಟುಮಾಡುವ ಅಪಾಯ ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications