ಖಾನ್ ಯೂನಿಸ್ ನಗರದಿಂದ ಇಸ್ರೇಲ್ ಎಸ್ಕೇಪ್!
ಹಮಾಸ್ ವಿರುದ್ಧ ಭೀಕರ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಸೇನೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ದಾಳಿಯ ಭೀಕರತೆ ಹಿನ್ನೆಲೆ ಗಾಜಾಪಟ್ಟಿ ಸೇರಿದಂತೆ ಪ್ಯಾಲೆಸ್ತೀನ್ ಪ್ರಜೆಗಳು ನಲುಗಿ ಹೋಗಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, ಭರ್ಜರಿ ಸುದ್ದಿಯೊಂದು ಇದೀಗ ರಿವೀಲ್ ಆಗಿದ್ದು ಖಾನ್ ಯೂನಿಸ್ ನಗರದಿಂದ ಇಸ್ರೇಲ್ ಎಸ್ಕೇಪ್ ಆಗಿದೆಯಂತೆ! ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಬನ್ನಿ ತಿಳಿಯೋಣ.
ಹೌದು ಕಳೆದ 6 ತಿಂಗಳಿಂದ ನಡೆಯುತ್ತಿರುವ ಇಸ್ರೇಲ್ VS ಹಮಾಸ್ ಯುದ್ಧದಲ್ಲಿ 32,000 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಎಲ್ಲವೂ ಕೈಮೀರುತ್ತಿದೆ ಅಂತಾ ವಿಶ್ವಸಂಸ್ಥೆ ಕೂಡ ಗರಂ ಆಗಿತ್ತು. ಮತ್ತೊಂದು ಕಡೆ ಅಮೆರಿಕ ಕೂಡ ರೊಚ್ಚಿಗೆದ್ದು ಇಸ್ರೇಲ್‌ಗೆ ಬುದ್ಧಿ ಹೇಳಿದೆ. ಹೀಗೆ ಎಲ್ಲವೂ ಕೈಮೀರಿ ಹೋಗುತ್ತಿರುವ ಸಂಗತಿ ಅರಿತಿರುವ, ಇಸ್ರೇಲ್ ಸೇನೆ ದಿಢೀರ್ ಗಾಜಾ ಪಟ್ಟಿಯ ದಕ್ಷಿಣದಲ್ಲಿ ಇರುವ ಖಾನ್ ಯೂನಿಸ್ ನಗರದಿಂದ ಎಸ್ಕೇಪ್ ಆಗಿದೆಯಂತೆ.

ಪ್ರಮುಖ ಪ್ರದೇಶದಿಂದ ಇಸ್ರೇಲ್ ವಾಪಸ್!
ಹಮಾಸ್ ಉಗ್ರರ ವಿರುದ್ಧ ದಾಳಿ ನಡೆಸುತ್ತಿರುವ ಇಸ್ರೇಲ್ ಗಾಜಾ ಪಟ್ಟಿ ನಗರವನ್ನೇ ಪೀಸ್ ಪೀಸ್ ಮಾಡಿ ಹಾಕಿದೆ. ಒಂದು ಕಡೆ ಈ ಬಗ್ಗೆ ಭಾಗಶಃ ಇಡೀ ಪ್ರಪಂಚವೇ ಆಕ್ರೋಶ ಹೊರಹಾಕುತ್ತಿದೆ. ಮತ್ತೊಂದು ಕಡೆ ಅಮೆರಿಕದ ಬುಡಕ್ಕೂ ಇದೇ ವಿಚಾರ ಬಿಸಿ ನೀರು ಕಾಯಿಸಿದಂತೆ ಆಗುತ್ತಿದ್ದು ಪದೇ ಪದೇ ಇಸ್ರೇಲ್‌ಗೆ ಬುದ್ಧಿ ಹೇಳುತ್ತಿತ್ತು ಅಮೆರಿಕ. ಇದೇ ಸಮಯದಲ್ಲಿ ಇಸ್ರೇಲ್ ಕೂಡ ಕಠಿಣ ನಿರ್ಧಾರ ಕೈಗೊಂಡು ಪ್ರಮುಖ ಪ್ರದೇಶದಿಂದ ಹಿಂದಕ್ಕೆ ಸರಿದಿದೆ. ಗಾಜಾ ಪಟ್ಟಿಯ, ದಕ್ಷಿಣದಲ್ಲಿ ಇರುವ ಖಾನ್ ಯೂನಿಸ್ ನಗರದಿಂದ ಸೇನಾಪಡೆ ಹಿಂದಕ್ಕೆ ಕರೆಸಿಕೊಂಡ ಕುರಿತು ಇಸ್ರೇಲ್ ಮಿಲಿಟರಿ ಮಾಹಿತಿ ನೀಡಿದೆ.
ಯುದ್ಧ ಶುರುವಾಗಿದ್ದು ಎಲ್ಲಿಂದ?
ಗಾಜಾ ಪಟ್ಟಿ ನರಕವಾಗಿ ಬದಲಾಗಿದ್ದು, ಅಕ್ಟೋಬರ್ 7 ರಂದು ತಮ್ಮ ಮೇಲೆ ಉಗ್ರ ಪಡೆ ದಾಳಿ ಮಾಡಿದ್ದ ಕಾರಣ ಇಸ್ರೇಲ್ ಯುದ್ಧ ಘೋಷಣೆ ಮಾಡಿದೆ. ಹೀಗೆ ಯುದ್ಧ ಬಲೆಗೆ ಸಿಲುಕಿ ಇಸ್ರೇಲ್ ಕೂಡ ಸಂಕಷ್ಟ ಎದುರಿಸುತ್ತಿದೆ. ಸ್ಥಿತಿ ಹೀಗಿದ್ದಾಗ ಗಾಜಾ ಪಟ್ಟಿ ರಕ್ತಸಿಕ್ತವಾಗಿ ಹೋಗಿದೆ ಇಸ್ರೇಲ್ ವಿರುದ್ಧ ಜಗತ್ತಿನ ಹಲವು ದೇಶಗಳು ಆಕ್ರೋಶ ಹೊರಹಾಕಿ ಪ್ಯಾಲೆಸ್ತೀನ್ ಪರ ನಿಲ್ಲುತ್ತಿವೆ. ಇನ್ನು ಪರಿಸ್ಥಿತಿ ಅಳೆದು ತೂಗಿ ಹೊಸ ನಿರ್ಧಾರ ಕೈಗೊಂಡಿರುವ ಇಸ್ರೇಲ್ ಸೇನೆ ಮೆಲ್ಲಗೆ ಗಾಜಾದ ನೆಲದಿಂದ ತನ್ನ ಸೇನೆಯನ್ನ ವಾಪಸ್ ಕರೆಸಿಕೊಳ್ಳುವಂತೆ ಕಾಣುತ್ತಿದೆ.

ಒಟ್ನಲ್ಲಿ ಹೀಗೆ ಜಾಗತಿಕವಾಗಿ ಸಖತ್ ಸದ್ದು ಮಾಡುತ್ತಿರುವ ಇಸ್ರೇಲ್ & ಹಮಾಸ್ ಯುದ್ಧ ಶೀಘ್ರದಲ್ಲೇ ಮುಗಿದು ಹೋಗುವ ಲಕ್ಷಣ ಗೋಚರಿಸುತ್ತಿದೆ. ಅದ್ರಲ್ಲೂ ಈ ಯುದ್ಧದಿಂದಾಗಿ ಅಮೆರಿಕ ಕೂಡ ಇಕ್ಕಟ್ಟಿಗೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಇದೆಲ್ಲವೂ ತನ್ನ ಬುಡಕ್ಕೇ ಬರುತ್ತೆ ಅನ್ನೋ ಭಯ ಅಮೆರಿಕದ ನಾಯಕರಿಗೆ ಕಾಡುತ್ತಿದೆ.












Click it and Unblock the Notifications