ಪಾಕಿಸ್ತಾನದ ಅಮೆರಿಕ ರಾಯಭಾರ ಕಚೇರಿ ಮೇಲೆ ದಿಢೀರ್ ದಾಳಿ, ಹಿಂಸಾಚಾರದಲ್ಲಿ 8 ಸಾವು | Israel Military
ಅಮೆರಿಕ ಹಾಗೂ ಇಸ್ರೇಲ್ ಸೇರಿಕೊಂಡು ಒಂದು ಕಡೆ ಇರಾನ್ ಮೇಲೆ ಭೀಕರ ದಾಳಿ ಆರಂಭಿಸಿದ್ದು, ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ಶುರುವಾಗಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿ 3ನೇ ಮಹಾಯುದ್ಧದ ಭೀತಿ ಕೂಡ ಆವರಿಸಿದೆ. ಇಂತಹ ಪರಿಸ್ಥಿತಿಯು ಎದುರಾಗಿರುವ ಸಮಯದಲ್ಲೇ ಪಾಕಿಸ್ತಾನದಲ್ಲಿ ಘೋರ ದುರಂತ ನಡೆದು ಹೋಗಿದೆ, ಪಾಕಿಸ್ತಾನವನ್ನು ಮೆಚ್ಚಿಸಲು ಸದಾ ಪ್ರಯತ್ನಿಸುವ ಅಮೆರಿಕಗೆ ಇಂದು ಆಘಾತ ಎದುರಾಗಿದೆ. ಅಂದಹಾಗೆ ಪಾಕಿಸ್ತಾನ ನೆಲದಲ್ಲಿ ಇರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇಂದು ದಿಢೀರ್ ದಾಳಿ ಮಾಡಲಾಗಿದೆ. ಈ ದಾಳಿ ಸಮಯದಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು 8 ಸಾವು ವರದಿಯಾಗಿದ್ದು, ಹತ್ತಾರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಗ್ರರ ಕೂಪವಾಗಿರುವ ಪಾಕಿಸ್ತಾನಕ್ಕೆ ಪದೇ ಪದೇ ಅಮೆರಿಕ ಬೆಂಬಲ ನೀಡುತ್ತಾ ಬರುತ್ತಿದ್ದು, ಹೀಗೆ ಇದ್ದರೂ ಪಾಕಿಸ್ತಾನದ ಜನ ಮಾತ್ರ ಅಮೆರಿಕ ಹಾಗೂ ಅಮೆರಿಕದ ನಾಯಕರನ್ನು ವಿಲನ್ ರೀತಿಯೇ ನೋಡುತ್ತಿದ್ದಾರೆ. ಅದರಲ್ಲೂ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ಮಾಡಿದ ನಂತರ, ದಿಢೀರ್ ಪಾಕಿಸ್ತಾನದಲ್ಲಿ ಇರುವ ಅಮೆರಿಕ ರಾಯಭಾರ ಕಚೇರಿಗೆ ಒಂದು ಗುಂಪು ನುಗ್ಗಿದೆ. ಅಲ್ಲದೆ ಈ ಸಮಯದಲ್ಲಿ ಹಿಂಸಾಚಾರ ನಡೆಸಲು ಕೂಡ ಪ್ರಯತ್ನ ಮಾಡಿದ್ದಾರೆ. ಆದರೆ ಅಂತಿಮವಾಗಿ ಈ ಗಲಾಟೆ ನಿಯಂತ್ರಿಸಲು ಪಾಕಿಸ್ತಾನ ಭದ್ರತಾ ಪಡೆಗಳು ಅಸ್ತ್ರ ಪ್ರಯೋಗ ಮಾಡಿವೆ. ಈ ಸಮಯದಲ್ಲಿ ಹಿಂಸಾಚಾರ ಭುಗಿಲೆದ್ದು ಈವರೆಗೂ 8 ಸಾವು ವರದಿಯಾಗಿದೆ.

ಪಾಕಿಸ್ತಾನದಲ್ಲಿ ಗಲಾಟೆ ಶುರುವಾಗಿದ್ದು ಏಕೆ?
ಇರಾನ್ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಿಲ್ಲ ಎಂಬ ಕಾರಣದಿಂದ ಅಮೆರಿಕ ಮತ್ತು ಇಸ್ರೇಲ್ ಇದೀಗ ಇರಾನ್ ವಿರುದ್ಧ ಡೆಡ್ಲಿ ಅಟ್ಯಾಕ್ ಶುರು ಮಾಡಿಬಿಟ್ಟಿವೆ ದಿಢೀರ್. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಖಮೇನಿ ಮೃತಪಟ್ಟಿರುವುದು ಕನ್ಫರ್ಮ್ ಆಗಿದೆ. ಖಮೇನಿ ಮಾತ್ರವಲ್ಲ ಈಗಾಗಲೇ ಇರಾನ್ ದೇಶದ ಇಬ್ಬರು ಪ್ರಮುಖ ಸೇನಾಧಿಕಾರಿಗಳು ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ.
ಜೊತೆಯಲ್ಲಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯ ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಸೇರಿದಂತೆ, ಇರಾನ್ ರಕ್ಷಣಾ ಮಂಡಳಿಯ ಕಾರ್ಯದರ್ಶಿ ಅಲಿ ಶಾಮ್ಖಾನಿ ಈ ದಾಳಿಯಲ್ಲಿ ಮೃತಪಟ್ಟಿರುವುದು ಕನ್ಫರ್ಮ್ ಆಗಿತ್ತು. ಹೀಗಿದ್ದಾಗ ಪಾಕಿಸ್ತಾನದಲ್ಲಿ ಇರಾನ್ ಪರವಾಗಿ ಪ್ರತಿಭಟನೆ & ಹಿಂಸಾಚಾರ ಭುಗಿಲೆದ್ದಿದೆ. ಇದೇ ಸಮಯದಲ್ಲಿ ಅಮೆರಿಕ ರಾಯಭಾರ ಕಚೇರಿಗೆ ಕೂಡ ಕೆಲವರು ಹಾನಿ ಮಾಡಲು ಯತ್ನಿಸಿದ್ದು, ಬಲ ಪ್ರಯೋಗ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಮತ್ತಷ್ಟು ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆ ಇದ್ದು, ಭದ್ರತೆ ಹೆಚ್ಚಿಸಲು ಮುಂದಾಗಿದೆ ಪಾಕಿಸ್ತಾನ ಸರ್ಕಾರ.












Click it and Unblock the Notifications