ಮೊಬೈಲ್ ಇಂಟರ್‌ನೆಟ್ ಕಟ್, ಕರೆಂಟ್ ಜೂಟ್, ಪರಿಸ್ಥಿತಿ ಮತ್ತಷ್ಟು ಟೈಟ್!

ಹಮಾಸ್ ಉಗ್ರರ ಹೆಣ ಕೆಡವಲು, ಗಾಜಾಪಟ್ಟಿ ಇಂಚಿಂಚು ಜಾಗವನ್ನು ತಡಕಾಡಲು ಈಗ ಇಸ್ರೇಲ್ ಸೇನೆ ರಣಕಹಳೆ ಮೊಳಗಿಸಿದೆ. ಈ ಕಾರಣ ತನ್ನ ಭೂ ದಾಳಿಯನ್ನ ವಿಸ್ತರಿಸಿರುವ ಇಸ್ರೇಲ್ ಸೇನೆ ಗಾಜಾಪಟ್ಟಿ ಜನಕ್ಕೆ ಮತ್ತೊಂದು ಆಘಾತ ನೀಡಿದೆ. ಮೊಬೈಲ್ ನೆಟ್‌ವರ್ಕ್ ಕಟ್ ಮಾಡಿ, ಇಂಟರ್‌ನೆಟ್ ಆಫ್ ಮಾಡಿದೆ. ಇದೂ ಸಾಲದು ಎಂಬಂತೆ ಕರೆಂಟ್ ಕೂಡ ಸಂಪೂರ್ಣ ಕೈಕೊಟ್ಟು ಹೋಗಿದ್ದು, ಇದೇ ಸಂದರ್ಭದಲ್ಲಿ ಇಸ್ರೇಲ್ ಸೇನೆ ಡೆಡ್ಲಿ ಅಟ್ಯಾಕ್ ಮುಂದುವರಿಸಿದೆ.

ಎಲ್ಲಿ ನೋಡಿದರೂ ಪುಡಿ ಪುಡಿಯಾಗಿ ನೆಲಕ್ಕೆ ಬಿದ್ದಿರುವ ಕಟ್ಟಡಗಳು. ಆ ಕಟ್ಟಡಗಳ ಕೆಳ ಭಾಗದಲ್ಲಿ ಜೀವ ಕಳೆದುಕೊಂಡು ಬಿದ್ದಿರುವ ಮನುಷ್ಯರ ಶವಗಳು. ತುತ್ತು ಅನ್ನ ಸಿಗಲಿದೆ ಅಂತಾ ಕಾಯುತ್ತಿರುವ ಪುಟಾಣಿ ಮಕ್ಕಳು. ಅಷ್ಟಕ್ಕೂ ಇದು ನರಕದ ಸ್ಥಿತಿ ಅಲ್ಲ, ಭೂಮಿ ಮೇಲಿನ ಈಗಿನ ನಿಜವಾದ ನರಕ ಗಾಜಾಪಟ್ಟಿ ಪರಿಸ್ಥಿತಿ. ಹಮಾಸ್ ಉಗ್ರ ಪಡೆ ಮಾಡಿರುವ ತಪ್ಪಿಗೆ ಅಮಾಯಕ ಜನ ಕೂಡ ಈಗ ನರಳುವಂತಾಗಿದೆ. ಹೀಗೆ ಪರಿಸ್ಥಿತಿ ಕೈಮಿರಿ ಹೋದ ಸಂದರ್ಭದಲ್ಲಿ ಗಾಜಾಪಟ್ಟಿ ಮೇಲಿನ ಭೂದಾಳಿ ಅಂದ್ರೆ ಭೂ ಸೇನೆಯ ದಾಳಿಯನ್ನ ಕೂಡ ಇಸ್ರೇಲ್ ವಿಸ್ತರಣೆ ಮಾಡಿದೆ. ಜೊತೆಗೆ ಭೀಕರ ವಾಯು ದಾಳಿ ಕೂಡ ನಡೆಯುತ್ತಿದೆ.

Israel Military Extends Its Ground Operations In Gaza & Cuts Off The Phone and Internet Links

ರಾತ್ರಿ ಪೂರ್ತಿ ಸ್ಫೋಟದ ಸದ್ದು!

ಇಡೀ ಜಗತ್ತಿನಲ್ಲಿ ರಾತ್ರಿ ಸಮಯದಲ್ಲಿ ನೆಮ್ಮದಿಯಾಗಿ ಜನರು ಮಲಗುತ್ತಾರೆ, ಆದ್ರೆ ಇದೀಗ ಗಾಜಾಪಟ್ಟಿ ಮತ್ತು ಉಕ್ರೇನ್ ನೆಲದಲ್ಲಿ ಆಗುತ್ತಿರುವುದೇ ಬೇರೆ. ಉಕ್ರೇನ್ ನೆಲದಲ್ಲಿ ಕಳೆದ ಒಂದೂವರೆ ವರ್ಷದಿಂದಲೂ ರಾತ್ರಿ & ಹಗಲು ಎನ್ನದೆ ಬಾಂಬ್‌ಗಳು ಪಟಾಕಿಯಂತೆ ಫಟ್ ಫಟ್.. ಢಮಾರ್ ಎಂದು ಸದ್ದು ಮಾಡುತ್ತಿವೆ. ಅದೇ ರೀತಿ ಕಳೆದ 3 ವಾರಗಳಿಂದ ಗಾಜಾ ನಗರದ ಉತ್ತರ ಭಾಗದಲ್ಲಿ ಹಗಲು & ರಾತ್ರಿಯ ಲೆಕ್ಕ ಇಲ್ಲದೆ, ಬಾಂಬ್‌ಗಳು ಇಸ್ರೇಲ್‌ನಿಂದ ಬಂದು ಬೀಳುತ್ತಿವೆ. ಅದ್ರಲ್ಲೂ ನಿನ್ನೆಯಿಂದ ರಾತ್ರಿ ವೇಳೆ ಕೂಡ ಇಸ್ರೇಲ್ ಸೇನೆಯು ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿದೆ ಹಾಗೇ ಹಮಾಸ್ ಉಗ್ರರು ತಪ್ಪಿಸಿಕೊಳ್ಳದಂತೆ ಈಗ ಮತ್ತೊಂದು ರಣತಂತ್ರ ರೂಪಿಸಿದೆ.

ಹಿಡಿದು, ಬಡಿದು, ಕಡಿಯುವ ತಂತ್ರ?

ಅಂದಹಾಗೆ ಈಗಿರುವ ಮಾಹಿತಿ ಪ್ರಕಾರ ಹಮಾಸ್ ಉಗ್ರರು ಗಾಜಾಪಟ್ಟಿ ಒಳಗೆ ಸುರಂಗಗಳ ರಚನೆ ಮಾಡಿ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ. ಅಲ್ಲಿಂದಲೇ ಇಸ್ರೇಲ್ ಸೇನೆ ಮೇಲೆ ಉಗ್ರ ಪಡೆ ಭೀಕರ ದಾಳಿ ನಡೆಸುತ್ತಿದೆ. ಈ ಕಾರಣಕ್ಕೇ ಈಗ ಇಸ್ರೇಲ್ ಸೇನೆ ತನ್ನ ರಣತಂತ್ರದಲ್ಲಿ ಬದಲಾವಣೆ ಮಾಡಿ, ಗಾಜಾಪಟ್ಟಿ ಮೇಲೆ ವಾಯುದಾಳಿ, ಜಲದಾಳಿ ಜೊತೆಗೆ ಭೂ ದಾಳಿ ಮೂಲಕವೂ ಶಾಕ್ ಕೊಡಲು ಸಜ್ಜಾಗಿದೆ. ಆದ್ರೆ ಈ ಸಮಯದಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಇದ್ರೆ ಆಪತ್ತು ಜಾಸ್ತಿ ಅನ್ನೊದು ಗೊತ್ತಿದೆ. ಉಗ್ರರು ಎಲ್ಲೋ ಕೂತು ಇಸ್ರೇಲ್ ಸೇನೆ ಮೇಲೆ ದಾಳಿ ಮಾಡುವ ಅಪಾಯ ಇದೆ. ಹೀಗಾಗಿ 20 ಲಕ್ಷ ಜನಸಂಖ್ಯೆಯ ಹೊಂದಿರುವ ಗಾಜಾಪಟ್ಟಿಯಲ್ಲಿನ ಮೊಬೈಲ್ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

Israel Military Extends Its Ground Operations In Gaza & Cuts Off The Phone and Internet Links

ಭೀಕರ ಯುದ್ಧಕ್ಕೆ 7,000 ಜನ ಬಲಿ?

ಹಮಾಸ್ ಉಗ್ರರು & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ತಿಕ್ಕಾಟ ಜೋರಾಗಿರುವ ಸಮಯದಲ್ಲಿ 7326ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾಗೇ ಹಿಂಸೆಯಲ್ಲಿ ಮೃತಪಟ್ಟಿರುವ 7 ಸಾವಿರಕ್ಕೂ ಹೆಚ್ಚು ಜನರಲ್ಲಿ, 3038 ಮಕ್ಕಳು ಕೂಡ ಸೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಲ್ಲಿಂದಲೊ ಬಂದು ಬೀಳುತ್ತಿರುವ ಬಾಂಬ್‌ಗಳು, ಕ್ಷಿಪಣಿಗಳು ಜನರನ್ನ ಬೆಚ್ಚಿ ಬೀಳಿಸಿವೆ. ಇನ್ನು ಏನೂ ಅರಿಯದ ಮಕ್ಕಳು ಜೀವ ಉಳಿಸಿಕೊಳ್ಳಲು, ಹಾಗೇ ತಮ್ಮ ಪುಟಾಣಿ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಉಗ್ರರು, ಇಸ್ರೇಲ್‌ ವಿರುದ್ಧ 5000ಕ್ಕೂ ಹೆಚ್ಚು ರಾಕೆಟ್‌ಗಳ‌ನ್ನು ಒಂದೇ ಬಾರಿ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ನ‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿದೆ. ಹೀಗೆ ಭೀಕರ ಯುದ್ಧ ಶುರುವಾದ ಬಳಿಕ ಸಾವಿರಾರು ಜನ ಇದೇ ಹಿಂಸೆಗೆ ಬಲಿಯಾಗಿದ್ದು, ಇಸ್ರೇಲ್ & ಗಾಜಾಪಟ್ಟಿ ಭಾಗದಲ್ಲಿ ಮೃತಪಟ್ಟ ಜನರ ಒಟ್ಟು ಸಂಖ್ಯೆ ಭಯ ಹುಟ್ಟಿಸುವಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+