200 ಸತತ ದಾಳಿಗಳ ನಂತರ ಯುದ್ಧ ನಿಲ್ಲಿಸಿದ ಇಸ್ರೇಲ್!
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ರಣಕಾಳಗ ಇದೀಗ ಗಾಜಾ ಪಟ್ಟಿಯ ಬಹುತೇಕ ಪ್ರದೇಶವನ್ನು ಹಾಳು ಮಾಡಿ ಹಾಕಿದೆ. ಅದರಲ್ಲೂ 35,000ಕ್ಕೂ ಹೆಚ್ಚು ಜನರು ಈ ಕಿತ್ತಾಟದಲ್ಲಿ ಜೀವ ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿ ಎದುರಾಗಿದ್ದನ್ನು ನೋಡಿದ ಜಗತ್ತೇ ಇಸ್ರೇಲ್ ವಿರುದ್ಧ ಆಕ್ರೋಶ ಹೊರ ಹಾಕುವಾಗ, ಬರೋಬ್ಬರಿ 200 ಸತತ ವೈಮಾನಿಕ ದಾಳಿಗಳ ನಂತರ ಈಗ ಇಸ್ರೇಲ್ ಸೈಲೆಂಟ್ ಆಗಿದೆ. ಯುದ್ಧಕ್ಕೆ ಒಂದು ಬ್ರೇಕ್ ಕೊಟ್ಟಿದೆ!
ಹೌದು, ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನಡೆಯ ಬಗ್ಗೆ ಭಾರಿ ಬೇಸರ ವ್ಯಕ್ತವಾಗುತ್ತಿದೆ. ಈ ರೀತಿ ಇಸ್ರೇಲ್ ವಿರುದ್ಧ ಜಗತ್ತು ರೊಚ್ಚಿಗೇಳಲು ಸ್ವತಃ ಇಸ್ರೇಲ್ ಕಾರಣವಾಗಿದೆ ಎಂದರೂ ತಪ್ಪಾಗಲ್ಲ. ಯಾಕಂದ್ರೆ ಹಮಾಸ್ ಉಗ್ರರನ್ನು ಹೊಡೆದು ಉರುಳಿಸುವ ನೆಪದಲ್ಲಿ ಇಸ್ರೇಲ್ ಸೇನೆ, ಗಾಜಾ ಪಟ್ಟಿ ಪ್ರದೇಶದ ಸಾಮಾನ್ಯ ಜನರು ಹಾಗೂ ನಿರಾಶ್ರಿತ ಅಮಾಯಕರ ಮೇಲೆ ಕೂಡ ದಾಳಿ ಮಾಡಿ ಸಾಯಿಸಿದೆ ಎಂಬ ಆರೋಪ ಇದೆ. ಈ ಆರೋಪಗಳಿಗೆ ಬಲವಾಗಿರುವ ಸಾಕ್ಷಿಗಳನ್ನೂ ಗಾಜಾ ಆಡಳಿತಾಧಿಕಾರಿಗಳು ನೀಡುತ್ತಿದ್ದಾರೆ. ಹೀಗಿದ್ದಾಗ ಇಸ್ರೇಲ್, ಯುದ್ಧಕ್ಕೆ ಬ್ರೇಕ್ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಯುದ್ಧ ಸಂಪೂರ್ಣ ಬಂದ್?
ಅಷ್ಟಕ್ಕೂ ಇಸ್ರೇಲ್ ಈಗ ಯುದ್ಧಕ್ಕೆ ಸಣ್ಣ ಬ್ರೇಕ್ ಕೊಟ್ಟಿದೆ ನಿಜ, ಆದರೆ ಯುದ್ಧ ಪೂರ್ತಿ ನಿಲ್ಲಿಸಿಲ್ಲ. ಯಾಕಂದ್ರೆ ಯುದ್ಧವನ್ನು ಸಂಪೂರ್ಣ ನಿಲ್ಲಿಸಲು ಇಸ್ರೇಲ್‌ಗೆ ಇಷ್ಟವಿಲ್ಲ ಅಂತ ಕಾಣುತ್ತೆ. ಇದೀಗ ಉತ್ತರ ಗಾಜಾ ಪಟ್ಟಿ ಪ್ರದೇಶದಲ್ಲಿ ಬರುವ ಜಬಾಲಿಯಾ ಎಂಬ ಪ್ರದೇಶ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ವಾಯುದಾಳಿ ನಂತರ ಇಸ್ರೇಲ್ ಯುದ್ಧಕ್ಕೆ ಬ್ರೇಕ್ ಹಾಕಿದೆ ಎಂಬ ವರದಿ ಬಂದಿದೆ. ಈ ಮೂಲಕ ಗಾಜಾ ಪಟ್ಟಿ ಪ್ರದೇಶದ ಒಂದು ಸಣ್ಣ ಭಾಗ ಈಗ ಶಾಂತಿಯಿಂದ ಇರುವ ಕನಸು ಕಾಣುತ್ತಿದೆ. ಆದರೆ ಇದು ಕನಸಾಗಿಯೇ ಉಳಿಯುತ್ತಾ? ಎಂಬ ಅನುಮಾನ ಕೂಡ ಕಾಡುತ್ತಿದೆ.
ಯುದ್ಧ ನಿಲ್ಲಿಸಲು ಹೇಳಿತ್ತು ಕೋರ್ಟ್
ಗಾಜಾ ಪಟ್ಟಿ ಪ್ರದೇಶದ ರಫಾ ಭಾಗದಲ್ಲಿ 3 ವಾರದಿಂದ ತಿಕ್ಕಾಟ ತೀವ್ರವಾಗಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶವು ವ್ಯಕ್ತವಾಗಿದೆ. ಹಾಗೆಯೇ ಯುದ್ಧ ತಕ್ಷಣ ನಿಲ್ಲಿಸಿ ಎಂಬ ಒತ್ತಾಯ ಕೇಳಿಬಂದಿತ್ತು. ಪ್ಯಾಲೆಸ್ತೀನ್ ಪ್ರಜೆಗಳನ್ನ ಇಸ್ರೇಲ್ ಸೇನೆ ಬಲವಂತಾಗಿ ಸ್ಥಳಾಂತರ ಮಾಡುತ್ತಿದೆ ಹೀಗಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಕೊನೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ಬಾಗಿಲು ಕೂಡ ಬಡಿದಿತ್ತು.
ಮತ್ತೆ ಯುದ್ಧ ಶುರುವಾಗುತ್ತಾ?
ಇಂಟರ್‌ನ್ಯಾಷನಲ್ ಕೋರ್ಟ್ ಇಸ್ರೇಲ್‌ಗೆ ಆಘಾತ ನೀಡಿ, ರಫಾ ಕಾರ್ಯಾಚರಣೆ ತಕ್ಷಣ ನಿಲ್ಲಿಸಿ ಎಂದಿತ್ತು ಅಂತಾರಾಷ್ಟ್ರೀಯ ನ್ಯಾಯಾಲಯ. ಇಷ್ಟೆಲ್ಲಾ ಗೊಂದಲದ ನಡುವೆಯೂ ಇಸ್ರೇಲ್ ಮಾತ್ರ ತನ್ನ ದಾಳಿ ಮುಂದುವರಿಸಿ ಟೀಕೆಗೆ ಗುರಿಯಾಗಿತ್ತು. ಆದರೆ ಇದೀಗ ಗಾಜಾ ಪಟ್ಟಿಯಲ್ಲಿ ಒಂದು ಸಣ್ಣ ಪ್ರದೇಶದ ಮೇಲೆ ತನ್ನ ಕಾರ್ಯಾಚರಣೆ ನಿಲ್ಲಿಸಿದೆ ಇಸ್ರೇಲ್. ಆದರೆ ಇಸ್ರೇಲ್ ಸೇನೆ ಯಾವಾಗ ಬೇಕಾದರೂ ಇಲ್ಲಿ ಮತ್ತೆ ಕಾರ್ಯಾಚರಣೆ ಪುನರ್ ಆರಂಭಿಸುವ ಸಾಧ್ಯತೆ ಇದೆ ಎಂಬ ಆರೋಪವೂ ಕೇಳಿಬಂದಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications