Israel VS Syria: 48 ಗಂಟೆ 480 ದಾಳಿ.. ಸಿರಿಯಾ ನೆಲ ಕಬ್ಜಾ ಮಾಡುತ್ತಾ ಇಸ್ರೇಲ್?
ಇಸ್ರೇಲ್ & ಸಿರಿಯಾ ನಡುವೆ ಘೋರ ಯುದ್ಧ ನಡೆಯುತ್ತಿದೆ, ಕೆಲವು ದಿನಗಳ ಹಿಂದಷ್ಟೇ ಈ ಸಿರಿಯಾ ದೇಶದಲ್ಲಿ ನಾಗರಿಕ ದಂಗೆ ಕೊನೆಯಾಗಿ ಸರ್ಕಾರ ಬಿದ್ದು ಹೋಗಿತ್ತು. ಹಾಗೇ ಇದೇ ಸಿರಿಯಾ ದೇಶದ ಹಿಡಿತ ಸಿರಿಯಾ ಮಿಲಿಟರಿ ಕೈಯಿಂದ ತಪ್ಪಿ ಹೋಗಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲೇ ಇಸ್ರೇಲ್ ಏನು ಮಾಡುತ್ತಿದೆ ಗೊತ್ತಾ? 48 ಗಂಟೆ 480 ದಾಳಿ... ಹಾಗಾದರೆ ಸಿರಿಯಾ ನೆಲ ಕಬ್ಜಾ ಮಾಡುತ್ತಾ ಇಸ್ರೇಲ್?
ಇಸ್ರೇಲ್ & ಸಿರಿಯಾ ನಡುವೆ ಆಜನ್ಮ ವೈರತ್ವ ಇದ್ದು, ಸಿರಿಯಾ ಮತ್ತು ಇಸ್ರೇಲ್ ಈಗಾಗಲೇ ಒಂದು ರೌಂಡ್ ಬಡಿದಾಡಿಕೊಂಡಿವೆ. ಆದರೆ ಶಾಂತಿ ಒಪ್ಪಂದ ಕಾರಣಕ್ಕೆ ಇಸ್ರೇಲ್ & ಸಿರಿಯಾ ಸೈಲೆಂಟ್ ಆಗಿದ್ದವು. ಸಿರಿಯಾ ದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಅಸ್ಸಾದ್ ಸರ್ಕಾರ ಹಾಗೂ ಇಸ್ರೇಲ್ ಸೇನೆ ನಡುವೆ ಘೋರ ಕಾಳಗ ನಡೆದಿತ್ತು.

ಸಿರಿಯಾ & ಇಸ್ರೇಲ್ ನಡುವೆ ಗಡಿ ಹಂಚಿಕೆ ಆಗಿದ್ದು, ಆಗಾಗ ಕಿರಿಕ್ ನಡೆಯುತ್ತಿತ್ತು. ಆದರೆ ಇದೀಗ ಅಲ್ಲಿ ಬೇರೆಯದ್ದೇ ಆಟ ಶುರುವಾದಂತೆ ಕಾಣುತ್ತಿದೆ. ಅದು ಹೇಗೆ ಅಂದ್ರೆ, ಸಿರಿಯಾದಲ್ಲಿ ನಾಗರಿಕ ಯುದ್ಧದ ಹಿನ್ನೆಲೆ ಅಧ್ಯಕ್ಷ ಎಸ್ಕೇಪ್ ಆಗಿದ್ದು, ಇದೇ ಸಮಯದಲ್ಲಿ ಇಸ್ರೇಲ್ ತನ್ನ ಸೇನೆ ಮೂಲಕ ಸಿರಿಯಾದ ನೆಲವನ್ನು ಕಬಳಿಸುತ್ತಿದೆಯಾ? ಏನಿದು ಗಂಭೀರ ಆರೋಪ? ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
ಸಿರಿಯಾ ಜಾಗ ಇಸ್ರೇಲ್ ಪಾಲು?
ಇಸ್ರೇಲ್ ವಿರುದ್ಧ ಹೋರಾಟ ಮಾಡಲು ಸಿರಿಯಾ ಇದೀಗ ಶಕ್ತವಾಗಿಲ್ಲ. ಇಂತಹ ಸಮಯ ಬಳಸಿಕೊಂಡು ಸಿರಿಯಾ ನೆಲವನ್ನು ಇಸ್ರೇಲ್ ಮಿಲಿಟರಿ ಇದೀಗ ಕಬ್ಜಾ ಮಾಡುತ್ತಿದೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೆ ಕಳೆದ 48 ಗಂಟೆಗಳಲ್ಲಿ ಇಸ್ರೇಲ್ ಸೇನೆಯು 480 ಬಾರಿ ದಾಳಿ ಮಾಡಿದೆ ಎನ್ನಲಾಗಿದ್ದು, ಸಿರಿಯಾ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ವಾತಾವರಣ ನಿರ್ಮಾಣ ಆಗಿದೆ.
ಮತ್ತೊಂದು ಕಡೆಯಲ್ಲಿ ಇಸ್ರೇಲ್ ಈ ರೀತಿ ಸಿರಿಯಾ ಮೇಲೆ ದಾಳಿ ಮಾಡುತ್ತಿರುವ ವಿಚಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗೇ ದಿನದಿಂದ ದಿನಕ್ಕೆ ಮಧ್ಯಪ್ರಾಚ್ಯ ಭಾಗದಲ್ಲಿ ಈ ಬೆಳವಣಿಗೆ ಮತ್ತಷ್ಟು ಪ್ರಕ್ಷುಬ್ಧತೆ ನಿರ್ಮಾಣ ಮಾಡುತ್ತಿದೆ. ಈ ಭಾಗದಲ್ಲಿ ಈಗಾಗಲೇ ಗಾಜಾ ಪಟ್ಟಿ & ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಇಸ್ರೇಲ್ ಹಾಗೂ ಲೆಬನಾನ್ ಕೂಡ ಬಡಿದಾಡುತ್ತಿವೆ.












Click it and Unblock the Notifications