ನಿಮ್ಮ ನಿಮ್ಮ ಕೊನೆಯ ಆಸೆ ಈಡೇರಿಸಿಕೊಳ್ಳಿ... ಯಾಕಂದ್ರೆ ಹಿಂಗಾದ್ರೆ ಜಗತ್ತು ನಾಶ ಆಗೋದು ಗ್ಯಾರಂಟಿ... Israel And Iran

ಭೂಮಿ ಮೇಲೆ ಮನುಷ್ಯರು ಇನ್ನು ಕೆಲವೇ ಕೆಲವು ದಿನಗಳ ಕಾಲ ಬದುಕಬಹುದು ಅಂತಾ ಕಾಣುತ್ತೆ, ಯಾಕೆ ಅಂದ್ರೆ ಈಗಿನ ಪರಿಸ್ಥಿತಿ ನೋಡಿದ್ರೆ ಯಾವುದೇ ಕ್ಷಣದಲ್ಲಿ ಮತ್ತೊಂದು ಮಹಾಯುದ್ಧ ನಡೆದು ಹೋಗುವ ಸಾಧ್ಯತೆ ದಟ್ಟವಾಗಿದೆ. ಮೊದಲ ಎರಡು ಮಹಾಯುದ್ಧಗಳು ಯುರೋಪ್ ಮೂಲಕ ಆರಂಭ ಆಗಿದ್ದವು, ಆದರೆ ಈ ಬಾರಿ 3ನೇ ಮಹಾಯುದ್ಧ ಮಧ್ಯಪ್ರಾಚ್ಯ ದೇಶಗಳಿಂದ ಆರಂಭ ಆಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಇದೇ ಕಾರಣಕ್ಕೆ, ನಿಮ್ಮ ನಿಮ್ಮ ಕೊನೆಯ ಆಸೆ ಈಡೇರಿಸಿಕೊಳ್ಳಿ... ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜೋಕ್ ಮಾಡಲಾಗುತ್ತಿದೆ.

ಯುದ್ಧ... ಯುದ್ಧ... ಯುದ್ಧ... ಹೀಗೆ ಎಲ್ಲೆಲ್ಲೂ ಬರೀ ಯುದ್ಧದ ಭಯವೇ ಜನರನ್ನು ಕಾಡುತ್ತಾ ಸಾಯಿಸುತ್ತಿದೆ. ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಇರಾನ್ ಸೇನೆಯಿಂದ ಕೂಡ ಮತ್ತೊಂದು ಸುತ್ತಿನ ದಾಳಿಗೆ ಸಿದ್ಧತೆ ಸಾಗಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡು ದೊಡ್ಡ ಗಲಾಟೆ ಶುರುವಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಹಾಗೇ ಈ ಯುದ್ಧ ಇನ್ನಷ್ಟು ಜೋರಾದರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಭಯ ಕೂಡ ಆವರಿಸಿದೆ...

Israel And Iran Fight May Create Big Problems For Future

ಯುದ್ಧ... ಯುದ್ಧ... ಯುದ್ಧ...

ಮಧ್ಯಪ್ರಾಚ್ಯ ಅಂದ್ರೆ ಚಿನ್ನದ ಮೊಟ್ಟೆ ಇಡುವ ಕೋಳಿಗಳು ಇರುವ ಜಾಗ ಅಂತಾರೆ ಉದ್ಯಮಿಗಳು, ಯಾಕಂದ್ರೆ ಇದೇ ಮಧ್ಯಪ್ರಾಚ್ಯ ಮೂಲಕ ಇಡೀ ಜಗತ್ತಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ತೈಲ ಸಂಪತ್ತು ರವಾನೆ ಆಗುತ್ತದೆ. ಹೀಗಿದ್ದಾಗ, ತೈಲ ಸಂಪತ್ತು ಹೊಂದಿರುವ ದೇಶಗಳು ಇಡೀ ಪ್ರಪಂಚದಲ್ಲೇ ಭಾರಿ ಶಕ್ತಿಶಾಲಿ & ಶ್ರೀಮಂತವಾಗಿ ಇರಬೇಕು. ಆದರೆ ಈ ಲೆಕ್ಕಾಚಾರ ಉಲ್ಟಾ ಆಗುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧಗಳೇ ನಡೆಯುತ್ತಿವೆ. ಅದರಲ್ಲೂ ಇರಾನ್ & ಇಸ್ರೇಲ್ ನಡುವೆ ಶುರುವಾಗಿರುವ ಯುದ್ಧ ಇನ್ನೇನು ಇಡೀ ಜಗತ್ತನ್ನು ಸರ್ವನಾಶ ಮಾಡುವ ಲಕ್ಷಣ ಕಾಣಿಸುತ್ತಿದೆ.

ಭರ್ಜರಿ ವಾರ್ನಿಂಗ್ ಕೊಟ್ಟ ದೊಡ್ಡಣ್ಣ ಅಮೆರಿಕ!

ಇಸ್ರೇಲ್ & ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಇದೀಗ ದೊಡ್ಡಣ್ಣ ಅಮೆರಿಕ ಕೂಡ ಎಂಟ್ರಿ ಆಗಿದೆ. ಹೌದು, ಅಮೆರಿಕ & ಇರಾನ್ ನಡುವೆ ಸುಮಾರು ಅರ್ಧ ಶತಮಾನದಿಂದ ಫೈಟಿಂಗ್ ನಡೆಯುತ್ತಿದೆ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಇಸ್ರೇಲ್ ದೇಶಕ್ಕೆ ಇರುವ ಏಕೈಕ ದೊಡ್ಡ ಶತ್ರು ರಾಷ್ಟ್ರ ಅಂದ್ರೆ ಅದು ಇರಾನ್. ಹೀಗಾಗಿಯೇ, ಪದೇ ಪದೇ ಇರಾನ್ ಜೊತೆಗೆ ಅಮೆರಿಕ & ಸ್ನೇಹಿತರ ಬಡಿದಾಟ ನಡೆಯುತ್ತಲೇ ಇರುತ್ತದೆ.

ಈಗಾಗಲೇ ಸಾವಿರಾರು ನಿರ್ಬಂಧ ಹೇರಿ ಇರಾನ್ ದೇಶ ವಿಲವಿಲ ಎನ್ನುವಂತೆ ಮಾಡಿರುವ ಅಮೆರಿಕ ಇದೀಗ ಮತ್ತೊಂದು ಶಾಕ್ ಕೊಟ್ಟಿದೆ. ಇಸ್ರೇಲ್ & ಇರಾನ್ ಈಗ ಭರ್ಜರಿಯಾಗಿ ಬಡಿದಾಡುವಾಗ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಹಿಂಗೆ ಇದ್ದರೆ ಇನ್ನಷ್ಟು ತೀವ್ರ ದಾಳಿಯನ್ನು ನೀವು ಎದುರಿಸುತ್ತೀರಿ, ಹೀಗಾಗಿಯೇ ಪರಮಾಣು ಒಪ್ಪಂದಕ್ಕೆ ಸಿದ್ಧರಾಗಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+