ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೀವೇ ಮುಂದಿನ ಟಾರ್ಗೆಟ್' ಸೌದಿ ಅರೇಬಿಯಾಗೆ ಐಸಿಸ್ ಎಚ್ಚರಿಕೆ

By ವಿಕಾಸ್ ನಂಜಪ್ಪ
|
Google Oneindia Kannada News

ರಿಯಾದ್, ಜೂನ್ 10: ಇರಾನ್ ದಾಳಿಯ ಬೆನ್ನಿಗೆ ಐಸಿಸ್ 'ನೀವೇ ನಮ್ಮ ಮುಂದಿನ ಟಾರ್ಗೆಟ್' ಅಂತ ಸೌದಿ ಅರೇಬಿಯಾಗೆ ಎಚ್ಚರಿಕೆ ನೀಡಿದೆ.

ಈ ಕುರಿತು ವರದಿ ಮಾಡಿರುವ ಸೈಟ್ (SITE) ಗುಪ್ತಚರ ತಂಡ, ಇರಾನ್ ಮೇಲಿನ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇರಾನಿನ ಶಿಯಾ ಬಹುಸಂಖ್ಯಾತರ ಮೇಲೆ ಮತ್ತಷ್ಟು ದಾಳಿ ನಡೆಸುವ ಬೆದರಿಕೆ ಹಾಕಿದೆ ಎಂದು ಹೇಳಿದೆ.

ISIS issues stern warning to Saudi Arabia

ಇರಾನ್ ದಾಳಿಗೂ ಮುನ್ನ ರೆಕಾರ್ಡ್ ಮಾಡಲಾದ ವಿಡಿಯೋದಲ್ಲಿ ಐಸಿಸ್ ಉಗ್ರರು ಇರಾನ್ ಮೇಲೆ ಮತ್ತು ಸೌದಿ ಅರೇಬಿಯಾದ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವಿಡಿಯೋದಲ್ಲಿ ಸೌದಿ ಅರೇಬಿಯಾಗೆ ಎಚ್ಚರಿಕೆ ಕೊಟ್ಟಿರುವ ಐಸಿಸ್ ಉಗ್ರನೊಬ್ಬ, "ಇರಾನ್ ನಂತರ ನಿಮ್ಮ ಸರದಿ ಬರಲಿದೆ. ಅಲ್ಲಾನ ಆಜ್ಞೆಯಂತೆ ನಿಮ್ಮ ನೆಲದಲ್ಲಿ ನಿಮ್ಮ ಮೇಲೆಯೇ ದಾಳಿ ನಡೆಸಲಿದ್ದೇವೆ. ನಾವು ಯಾರ ಏಜೆಂಟುಗಳೂ ಅಲ್ಲ. ನಾವು ಅಲ್ಲಾನ ಆಜ್ಞೆಯನ್ನು ಮತ್ತು ಸಂದೇಶವನ್ನು ಪಾಲಿಸುವವರು. ನಾವು ಇರಾನ್ ಆಗಲಿ ಅರಬ್ ಒಳಿತಿಗಾಗಿ ಹೋರಾಡುವವರಲ್ಲ ನಾವು ನಮ್ಮ ಧರ್ಮದ ಒಳಿತಿಗಾಗಿ ಹೋರಾಡುವವರು," ಎಂದು ಹೇಳಿದ್ದಾನೆ.

English summary
Days after the Iran Parliament attack claimed by the Islamic State, the outfit had a stern message for Saudi Arabia as well. You are next, the IS said. SITE Intelligence group reported that , IS claimed responsibility and threatened more attacks against Iran's majority Shi'ite population, seen by the hardline Sunni militants as heretics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X