ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭೀತಿ: ದಾವೂದ್ ಇಬ್ರಾಹಿಂ ಪಲಾಯನ

By Mahesh
|
Google Oneindia Kannada News

ನವದೆಹಲಿ, ಅ.27: ಭೂಗತ ಪಾತಕಿ ಮತ್ತುಮುಂಬೈ ಸರಣಿ ಸ್ಫೋಟದ ರೂವಾರಿ, ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ನರೇಂದ್ರ ಮೋದಿ ಸರ್ಕಾರದ ಭೀತಿ ಕಾಡುತ್ತಿದೆಯೇ? ಎಂಬ ಪ್ರಶ್ನೆ ಎದ್ದಿದೆ. ದಾವೂದ್ ಇಬ್ರಾಹಿಂನನ್ನು ಕರಾಚಿಯಿಂದ ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿಭಾಗದ ಅಜ್ಞಾತ ಅಡಗುತಾಣಕ್ಕೆಶಿಫ್ಟ್ ಮಾಡಲಾಗಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ.

ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್‍ಐ) ದಾವೂದ್ ಇಬ್ರಾಹಿಂನನ್ನು ಆಫ್ಘಾನಿಸ್ತಾನದ ಗಡಿಭಾಗದ ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟಿದೆ ಎಂದು ವರದಿಯಾಗಿದೆ. ಭೂಗತ ಪಾತಕಿಯ ಡಿ ಕಂಪನಿ (ದಾವೂದ್ ಕಂಪನಿ) ಬಗ್ಗೆ ತೀವ್ರ ನಿಗಾ ವಹಿಸಿದ್ದು, ಅವನ ಚಲನವಲನಗಳ ಮೇಲೆ ನಿರಂತರ ಕಣ್ಣಿಟ್ಟಿರುವ ಭಾರತದ ಭದ್ರತಾ ವಿಭಾಗದ ಉನ್ನತ ಮೂಲಗಳು ಈ ವಿಷಯ ತಿಳಿಸಿದೆ. [ಐಎಸ್ ಐನಿಂದ ಹೊಸ ಟಿವಿ ಚಾನೆಲ್]

Is Dawood Ibrahim scared of Modi? Moved to Pak-Afghan border by ISI

ಕಳೆದ ಒಂದೆರಡು ದಿನಗಳ ಹಿಂದೆ ಕರಾಚಿಯಲ್ಲಿ ಭಾರೀ ಬಿಗಿಭದ್ರತೆ ಹೊಂದಿದ್ದ ನಿವಾಸವೊಂದರಲ್ಲಿದ್ದ ದಾವೂದ್ ನನ್ನು ಐಎಸ್‍ಐ ಪಾಕಿಸ್ತಾನ-ಆಫ್ಘಾನಿಸ್ತಾನದ ಗಡಿಯ ರಹಸ್ಯ ಸ್ಥಳವೊಂದಕ್ಕೆ ಸ್ಥಳಾಂತರಿಸಿದೆ ಎಂದು ಹೇಳಿವೆ. [ದಾವೂದ್ ಇಬ್ರಾಹಿಂ ದೇಶ ಬಿಟ್ಟು ಪರಾರಿ]

ಇತ್ತೀಚೆಗೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾಗಿರುವುದು, ಭಾರತ ಮತ್ತು ಅಮೆರಿಕದ ಈ ಒಪ್ಪಂದ ಭೂಗತ ಪಾತಕಿ ದಾವೂದ್ ಹಾಗೂ ಐಎಸ್‍ಐ ಗ್ಯಾಂಗ್ ನಲ್ಲಿ ಭೀತಿ ಹುಟ್ಟಿಸಿದೆ ಎಂದು ತಿಳಿದು ಬಂದಿದೆ.

ಈ ತಿಂಗಳ ಮೊದಲ ಭಾಗದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎ.ಕೆ.ದೋವಲ್ ಹಾಗೂ ಅಮೆರಿಕದ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳ ಮಧ್ಯೆ ನಡೆದ ಜಾಗತಿಕ ಭಯೋತ್ಪಾದನೆ ಹಾಗೂ ನೆರೆ ದೇಶಗಳಲ್ಲಿನ ಭಯೋತ್ಪಾದನೆಗೆ ಕುಮ್ಮಕ್ಕುಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳ ಕುರಿತಂತೆ ನಡೆದ ಮಾತುಕತೆಗಳು ಡಿ ಕಂಪನಿಗೆ ಭಯ ಉಂಟಾಗಲು ಕಾರಣವಾಗಿವೆ. ಮಾದಕ ದ್ರವ್ಯಗಳನ್ನು ಭಾರೀ ಪ್ರಮಾಣದಲ್ಲಿ ಪೂರೈಕೆ ಮಾಡುವ ದಾವೂದ್ ಆ ಹಣವನ್ನು ಭಾರತ ಮತ್ತು ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ವೆಚ್ಚ ಮಾಡುತ್ತಿದ್ದಾನೆ.

English summary
Is Dawood Ibrahim scared of Modi? India's most wanted terrorist Dawood Ibrahim has been moved to Pak-Afghan border by ISI, say Intelligence Sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X