ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಜಗತ್ತಿಗೆ ಚೀನಾ ಮುಚ್ಚಿಟ್ಟ ನಾಲ್ಕು ಭಯಾನಕ ಸುಳ್ಳುಗಳು

|
Google Oneindia Kannada News

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡ ಚೀನಾ ವೈರಸ್ ಅಥವಾ ಕೊರೊನಾ ವೈರಸ್, ಇಂದು ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಸುಮಾರು ಎಪ್ಪತ್ತು ದಿನಗಳ ಲಾಕೌಟ್ ನಂತರ, ವುಹಾನ್ ನಗರದಲ್ಲಿ ಲಾಕ್ ಔಟ್ ತೆರವುಗೊಂಡಿದೆ.

ಆದರೆ, ಈ ವೈರಾಣು ವಿಶ್ವದ ಹಲವು ದೇಶಗಳ ಬಾಗಿಲನ್ನು ಬಂದ್ ಮಾಡಿದೆ. ಅಮೆರಿಕಾ, ಸ್ಪೇನ್, ಇಟೆಲಿ, ಬ್ರಿಟನ್, ಇರಾನ್, ಬೆಲ್ಜಿಯಂ ಮುಂತಾದ ದೇಶಗಳಲ್ಲಿ ಕೊರೊನಾ ಅಕ್ಷರಸಃ ಮರಣಮೃದಂಗ ಬಾರಿಸುತ್ತಿದೆ.

ಈ ವೈರಸ್ ಕುರಿತ ಮಾಹಿತಿಯನ್ನು ಚೀನಾ, ಪ್ರಾಥಮಿಕ ಹಂತದಲ್ಲಿ ಮುಚ್ಚಿಟ್ಟಿದ್ದರಿಂದ, ಇಡೀ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾಗಿದೆ. ಭಾರತ ಎರಡನೇ ಹಂತದ ಲಾಕ್ ಡೌನ್ ಗೆ ಸಜ್ಜಾಗಲೇ ಬೇಕಿದೆ.

ಕೊರೊನಾ: ಬಿಎಸ್ವೈ ಕೆಲಸ ಎಕ್ಸಲೆಂಟ್: ತಜ್ಞರ ಸಮಿತಿಯ ಡಾ.ಮಂಜುನಾಥ್ ವಿಶೇಷ ಸಂದರ್ಶನ ಕೊರೊನಾ: ಬಿಎಸ್ವೈ ಕೆಲಸ ಎಕ್ಸಲೆಂಟ್: ತಜ್ಞರ ಸಮಿತಿಯ ಡಾ.ಮಂಜುನಾಥ್ ವಿಶೇಷ ಸಂದರ್ಶನ

ಕೊರೊನಾ ವೈರಸ್ ಪ್ರಕರಣದಲ್ಲಿ ಚೀನಾ ಹಲವು ವಿಷಯಗಳನ್ನು ಮುಚ್ಚಿಟ್ಟಿದ್ದಲ್ಲದೇ, ಸುಳ್ಳನ್ನೂ ಹೇಳುತ್ತಿದೆ ಎಂದು ಅಮೆರಿಕಾ ಗುಪ್ತಚರ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಫಾಕ್ಸ್ ನ್ಯೂಸ್ ವರದಿ ಮಾಡಿತ್ತು.

'ಕಾರಣ ತಿಳಿಯದ' ಸಾವು

'ಕಾರಣ ತಿಳಿಯದ' ಸಾವು

ಕಳೆದ ಎರಡು ತಿಂಗಳಲ್ಲಿ ಚೀನಾದಲ್ಲಿ ಅಪಾರ ಪ್ರಮಾಣದ ಸಾವು ಸಂಭವಿಸಿದೆ. ಚೀನಾ ತನ್ನ ರೋಗಿಗಳ ಸಂಖ್ಯೆ ಮತ್ತು ಸಾವುಗಳನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವ ಮೂಲಕ ಜಗತ್ತಿನ ದಾರಿ ತಪ್ಪಿಸಿದೆ ಎಂದು ಅಮೆರಿಕಾದ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿದೆ. ಈ ರೀತಿಯ ಸಾವುಗಳನ್ನು 'ಕಾರಣ ತಿಳಿಯದ' ಸಾವು ಎಂದು ಚೀನಾ ಸರಕಾರ ತೋರಿಸುತ್ತಿದೆ. ತನ್ನ ದೇಶದಲ್ಲಿ ಕೊರೊನಾ ವೈರಸ್ ಏಕಾಏಕಿ ಹರಡಿರುವುದನ್ನು ಚೀನಾ ಮುಚ್ಚಿಡುತ್ತಿದೆ ಎಂದು ಬ್ಲೂಂಬರ್ಗ್ ತನ್ನ ಲೇಖನದಲ್ಲೂ ಹೇಳಿದೆ.

ಚೀನಾ ಸರಕಾರ ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿದೆ

ಚೀನಾ ಸರಕಾರ ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿದೆ

ಈ ಮಾರಣಾಂತಿಕ ವೈರಸ್ ನಿಂದಾಗಿರುವ ಸಾವನ್ನು ಚೀನಾ ಸರಕಾರ ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿದೆ. ಹಾಗೂ, ಚೀನಾ ನೀಡುತ್ತಿರುವ ಸಾವಿನ ಅಂಕಿಅಂಶ ತಾಳೆಯಾಗುತ್ತಿಲ್ಲ. ಸಾವಿನ ಸಂಖ್ಯೆಯಲ್ಲಿ ಕಮ್ಮಿ ತೋರಿಸಿದರೆ, ಈ ವೈರಾಣುವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು, ವಿಶ್ವಕ್ಕೆ ತೋರಿಸುವುದು ಚೀನಾದ ಉದ್ದೇಶ.

ಕರ್ನಾಟಕದಲ್ಲಿ ಏಪ್ರಿಲ್ 30ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆಕರ್ನಾಟಕದಲ್ಲಿ ಏಪ್ರಿಲ್ 30ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆ

ಸತ್ತವರು ನಲವತ್ತು ಸಾವಿರಕ್ಕೂ ಹೆಚ್ಚು

ಸತ್ತವರು ನಲವತ್ತು ಸಾವಿರಕ್ಕೂ ಹೆಚ್ಚು

2019ರಲ್ಲಿ ಚೀನಾದ ಹುಬೇ ಪ್ರಾಂತ್ಯದಲ್ಲಿ ಈ ವೈರಾಣು ಪತ್ತೆಯಾಯಿತು. ಅಧಿಕೃತವಾಗಿ ಚೀನಾ 82,000 ಕೇಸುಗಳು ಮತ್ತು 3,300 ಸಾವು ಎಂದು. ಆದರೆ, ಇದರಿಂದ ಸತ್ತವರು ನಲವತ್ತು ಸಾವಿರಕ್ಕೂ ಹೆಚ್ಚು ಎನ್ನುವ ಮಾಹಿತಿಯೊಂದು ಚೀನಾದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಚೀನಾ ಅಧಿಕೃತವಾಗಿ ಹೇಳಿದ ಸಂಖ್ಯೆಗೂ, ಬಳಸಲಾಗಿರುವ ಶವಪೆಟ್ಟಿಗೆಗಳಿಗೆ ತಾಳೆಯಾಗುತ್ತಿಲ್ಲ.

ವಿಶೇಷ ಆಸ್ಪತ್ರೆಯನ್ನು ಚೀನಾ ಬಂದ್ ಮಾಡಿ, ಕೊರೊನಾ ಮುಕ್ತ ಎಂದು ಹೇಳಿತ್ತು

ವಿಶೇಷ ಆಸ್ಪತ್ರೆಯನ್ನು ಚೀನಾ ಬಂದ್ ಮಾಡಿ, ಕೊರೊನಾ ಮುಕ್ತ ಎಂದು ಹೇಳಿತ್ತು

ಕೊರೊನಾಗಾಗಿ ನಿರ್ಮಿಸಲಾಗಿದ್ದ ವಿಶೇಷ ಆಸ್ಪತ್ರೆಯನ್ನು ಚೀನಾ ಬಂದ್ ಮಾಡಿ, ಕೊರೊನಾ ಮುಕ್ತ ಎಂದು ಹೇಳಿತ್ತು. ಆದರೆ, ವುಹಾನ್ ನಲ್ಲಿ ಲಾಕ್ ಡೌನ್ ತೆರವು ಮಾಡಿರುವುದಕ್ಕೆ ಅಡ್ಡಿ ಪಡಿಸುತ್ತಿರುವ ಅಥವಾ ವಿರೋಧ ವ್ಯಕ್ತವಾಗುತ್ತಿರುವ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ವೈರಸ್ ಇನ್ನೂ ಅಲ್ಲಿ ಜೀವಂತವಾಗಿದೆ ಎಂದು ಹೇಳಲಾಗುತ್ತಿದೆ.

English summary
Is China Purposefully Lied About Coronavirus And Putting World In Jeopardy?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X