Iran-Israel War: ಇರಾನ್ ಅಣ್ವಸ್ತ್ರ ಘಟಕ ಮೇಲೆ US ದಾಳಿ ಯಶಸ್ವಿ: ಡೊನಾಲ್ಡ್ ಟ್ರಂಪ್
Iran vs Israel War: ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಇರಾನ್-ಇಸ್ರೇಲ್ ಯುದ್ಧವು 09ನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಅಮೆರಿಕಾ ಅಧ್ಯಕ್ಷರು ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಒಟ್ಟು ಮೂರು ಪರಮಾಣು ಕೇಂದ್ರಗಳ ಮೇಲೆ ಅತ್ಯಂತ ಯಶಸ್ವಿ ದಾಳಿಯನ್ನು ನಾವು ಪೂರ್ಣಗೊಳಿಸಿದ್ದೇವೆ ಎಂದಿದ್ದಾರೆ.
ಈ ಕುರಿತು ಭಾನುವಾರ ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ನಮ್ಮ ಎಲ್ಲ ಯುದ್ಧ ವಿಮಾನಗಳು ಇರಾನ್ ವಾಯುಪ್ರದೇಶದ ಹೊರಗಿವೆ. ಬಾಂಬ್‌ಗಳ ಸಂಪೂರ್ಣ ಪೇಲೋಡ್ ಅನ್ನು ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಬೀಳಿಸಲಾಗಿದೆ. ನಮ್ಮ ವಿಮಾನಗಳು ಸುರಕ್ಷಿತವಾಗಿದ್ದು, ಈ ಯಶಸ್ವಿ ದಾಳಿಯಲ್ಲಿ ಪಾಲ್ಗೊಂಡ ಅಮೇರಿಕನ್ ಯೋಧರಿಗೆ ಟ್ರಂಪ್ ಅಭಿನಂದನೆ ತಿಳಿಸಿದ್ದಾರೆ. ಇಂತಹ ಕಾರ್ಯಾಚರಣೆ ಮಾಡಬಲ್ಲ ಮತ್ತೊಂದು ಮಿಲಿಟರಿ ಜಗತ್ತಿನಲ್ಲೇ ಇಲ್ಲ ಎಂದು ಅವರು ಬಣ್ಣಿಸಿದ್ದಾರೆ. ಈಗ ಶಾಂತಿಯ ಸಮಯ ಎಂದು ಉಲ್ಲೇಖಿಸಿರುವ ಅವರು, ದಾಳಿ ಕುರಿತು ಮಾಹಿತಿ ನೀಡಿದ್ದಾರೆ.

ಇರಾನ್ ಅಣ್ವಸ್ತ್ರ ಘಟಕ ಧ್ವಂಸಕ್ಕೆ ಬಂಕರ್, ಬ್ಲಸ್ಟರ್ ಬಾಂಬ್‌ಗಳನ್ನು ಹೊತ್ತು ದಾಳಿ ನಡೆಸುವ ಬಿ-2 ಸ್ಟೆಲ್ತರ್ ವಿಮಾನಗಳನ್ನು ಅಮೆರಿಕಾ ಸೇನೆ ನೆನ್ನೆ ಇರಾನ್‌ನತ್ತ ಸಾಗಿಸಿತ್ತು. ಭೂಮಿಯ 200 ಅಡಿ ಆಳದವರೆಗೂ ಸಾಗಿ ಗುರಿ ಇಟ್ಟು ಹೊಡೆದು ಶತ್ರುಗಳ ನೆಲೆ, ಬಂಕರ್ ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಇತ್ತೀಚೆಗೆ ಈ ಬಾಂಬ್‌ಗಳಿಗೆ ಇಸ್ರೇಲ್ ಅಮೆರಿಕಾಕಕ್ಕೆ ಬೇಡಿಕೆ ಸಲ್ಲಿಸಿತ್ತು.
ಇಸ್ರೇಲ್ ಪರವಾಗಿ ಇರಾನ್ ಮೇಲೆ ಅಮೆರಿಕ ದಾಳಿ ಮಡುತ್ತಿದ್ದಂತೆ ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಪರಮಾಣು ಸೋರಿಕೆಯ ಯಾವುದೇ ಬೆದರಿಕೆ ಇಲ್ಲ ಎಂದು ಐಆರ್‌ಐಬಿ ಎಂಬ ಇರಾನ್ ಸರ್ಕಾರಿ ವಾಹಿನಿಗೆ ಸ್ಪಷ್ಟಪಡಿಸಿದೆ.
— Donald J. Trump (@realDonaldTrump) June 21, 2025
ಡೊನಾಲ್ಡ್ ಟ್ರಂಪ್ ಭಾಷಣ
ಇನ್ನು ಇರಾನ್ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕ ವಾಯುನೆಲೆಯಲ್ಲಿ ಅಲರ್ಟ್ ಆಗಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 7.30ಕ್ಕೆ ದೇಶವನ್ನು ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡಲಿದ್ದಾರೆ. ಪರಮಾಣು ನೆಲೆಗಳ ಮೇಲಿನ ದಾಳಿ ಕುರತು ಭಾಷಣ ಮಾಡಲಿದ್ದಾರೆ. ಇರಾನ್-ಇಸ್ರೇಲ್ ಯುದ್ಧ ಮುಂದುವರಿದಿದ್ದು, ಈ ವೇಳೆ ಯು ಎಸ್ ಅಧ್ಯಕ್ಷರ ಮಾತು, ಪ್ರತಿಕ್ರಿಯೆಗಳು ಪ್ರಾಮುಖ್ಯತೆ ಪಡೆದುಕೊಳ್ಳಲಿವೆ.












Click it and Unblock the Notifications