Iran Vs Israel War: ಇರಾನ್ - ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ

Iran Vs Israel War: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಾರಿ ಅಮೆರಿಕ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿರುವುದು ಯುದ್ಧದ ಸ್ವರೂಪವನ್ನೇ ಬದಲಾಯಿಸಿದೆ. ಇದೀಗ ಈ ಯುದ್ಧವು ಯುರೋಪಿಗೂ ವ್ಯಾಪಿಸುವ ಆತಂಕ ಎದುರಾಗಿದೆ. ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಇರಾನ್ ಇದೀಗ ಮಧ್ಯಪ್ರಾಚ್ಯಾದ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ದುಬೈ, ಕುವೈತ್, ಅಬುಧಾಬಿ ಹಾಗೂ ಖತರ್‌ನಲ್ಲೂ ಸಂಕಷ್ಟ ಎದುರಾಗಿದೆ. ಇದೀಗ ಈ ಯುದ್ಧವೂ ಮೂರನೇ ವಿಶ್ವ ಯುದ್ಧ ಸ್ವರೂಪವನ್ನು ಪಡೆದುಕೊಳ್ಳುತ್ತಿದೆಯೇ ಎನ್ನುವ ಆತಂಕ ಶುರುವಾಗಿದೆ.

ಭಾನುವಾರ ರಾತ್ರಿ ಸೈಪ್ರಸ್‌ನಲ್ಲಿರುವ ಬ್ರಿಟಿಷ್ ರಾಯಲ್ ಏರ್ ಫೋರ್ಸ್ ನೆಲೆಯನ್ನು ಗುರಿಯಾಗಿಸಿಕೊಂಡು ಶಂಕಿತ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಬ್ರಿಟಿಷ್ ರಕ್ಷಣಾ ಸಚಿವಾಲಯ ತಿಳಿಸಿದೆ. ಮಧ್ಯರಾತ್ರಿಯ ಸುಮಾರಿಗೆ ಸೈಪ್ರಸ್‌ನ ಆರ್‌ಎಎಫ್ ಅಕ್ರೋಟಿರಿ ಪ್ರದೇಶದಲ್ಲಿ ನಡೆದ ದಾಳಿಗೆ ಸಶಸ್ತ್ರ ಪಡೆಗಳು ಪ್ರತಿಕ್ರಿಯಿಸುತ್ತಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Iran Vs Israel War Escalates

ಯುಕೆ (ಯುನೈಟೆಡ್ ಕಿಂಗ್‌ಡಮ್) ಮತ್ತು ಇಸ್ರೇಲಿ ವೈಮಾನಿಕ ದಾಳಿಯ ಸಮಯದಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟ ನಂತರ ಮಧ್ಯಪ್ರಾಚ್ಯದಲ್ಲಿ ಬ್ರಿಟಿಷ್ ಪಡೆಗಳು ಮತ್ತು ಸಾರ್ವಜನಿಕರು ಇರಾನ್‌ನ "ವಿವೇಚನಾರಹಿತ ದಾಳಿ"ಗಳಿಂದ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ಯುಕೆ ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ. ದಿನದಿಂದ ದಿನಕ್ಕೆ ಯುದ್ಧವು ವಿವಿಧ ದೇಶಗಳಿಗೆ ವ್ಯಾಪಿಸುತ್ತಿರುವುದು ಆತಂಕ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.

ವಿಶ್ವದಾದ್ಯಂತ ಸಂಕಷ್ಟ

ಇರಾನ್‌ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಇಂದು ನೆನ್ನೆಯದಲ್ಲ. ದಶಕಗಳಿಂದಲೂ ಈ ಭಾಗದಲ್ಲಿ ಸಂಘರ್ಷ ಇದೆ. ಅಮೆರಿಕ, ಇಸ್ರೇಲ್ vs ಇರಾನ್‌ನ ನಡುವೆ ನಡೆಯುತ್ತಿರುವ ಸಂಘರ್ಷವು ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಇದರಿಂದ ಭಾರತಕ್ಕೂ ಸಂಕಷ್ಟ ಎದುರಾಗಿದೆ. ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಬಿಕ್ಕಟ್ಟಿನಿಂದ ವಿಶ್ವದಾದ್ಯಂತ ತೈಲ ಸರಬರಾಜಿನಲ್ಲೂ ಸಂಕಷ್ಟ ಎದುರಾಗಿದೆ. ಈ ಯುದ್ಧವು ಇನ್ನಷ್ಟು ದೇಶಗಳಿಗೆ ವ್ಯಾಪಿಸುವ ಆತಂಕ ಶುರುವಾಗಿದೆ. ಇರಾನ್ ಬೆಂಬಲಕ್ಕೆ ಚೀನಾ ಬಂದಿರುವುದು ಸಹ ಆತಂಕವನ್ನು ಹೆಚ್ಚಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಅಮೆರಿಕ vs ಚೀನಾ ಸ್ವರೂಪವನ್ನು ಪಡೆದುಕೊಂಡರೆ ಜಗತ್ತು ಹೊಸ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತವಾಗಲಿದೆ. ಇರಾನ್‌ನ ಪ್ರಮುಖ ನಾಯಕರೇ ಈ ಯುದ್ಧದಲ್ಲಿ ಮೃತಪಟ್ಟಿರುವುದರಿಂದ ಈ ದೇಶದ ಮುಂದಿನ ನಡೆ ಏನಾಗಿರಲಿದೆ ಎನ್ನುವ ಕುತೂಹಲ ಹಾಗೂ ಆತಂಕ ಎರಡೂ ಈಗ ಹೆಚ್ಚಳವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+