ಇಸ್ರೇಲ್ ವಿರುದ್ಧ ಮತ್ತೆ ರೊಚ್ಚಿಗೆದ್ದ ಇರಾನ್ ಸೇನೆಯಿಂದ ಯುದ್ಧ ಘೋಷಣೆ?

ಅಯ್ಯಯ್ಯೋ.. ಇರಾನ್ & ಇಸ್ರೇಲ್ ನಡುವೆ ಭೀಕರ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಇಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಫೈಟಿಂಗ್ ನಡೆಯುತ್ತಿದ್ದವು. ಆದರೆ ಇದೀಗ ನೇರವಾಗಿ ಯುದ್ಧ, ಹಿಂಸೆ, ಒಬ್ಬರ ಮೇಲೆ ಮತ್ತೊಬ್ಬರು ಪರಮಾಣು ಬಾಂಬ್ ಹಾಕುವ ಮಟ್ಟಕ್ಕೆ ಜಗಳ ಇದೀಗ ಶುರುವಾಗುವ ಕಾರ್ಮೋಡ ಆವರಿಸಿದೆ. ಹಾಗಾದ್ರೆ ದಿಢೀರ್ ಯಾಕ್ ಹಿಂಗಾಯ್ತು? ಮೊನ್ನೆ, ಮೊನ್ನೆ ಇಬ್ಬರು ಬಡಿದಾಡ್ಕೊಂಡು ಸೈಲೆಂಟ್ ಆಗಿದ್ರಲ್ವಾ? ಅಂತಾ ನಿಮ್ಮಲ್ಲೇ ಪ್ರಶ್ನೆ ಮೂಡಿದೆ ಅನಿಸುತ್ತೆ, ಬನ್ನಿ ಪ್ರಶ್ನೆಗೆ ಉತ್ತರ ತಿಳಿಯೋಣ.

ಅಂದಹಾಗೆ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆ ಹಿನ್ನೆಲೆ ಇಸ್ರೇಲ್‌ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಇರಾನ್‌ ಮುಂದಾಗಿದೆ. ಇಸ್ರೇಲ್‌ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್‌ ಘೋಷಿಸಿದೆ ಎಂದು ಸುದ್ದಿ ಹಬ್ಬಿದೆ. ಈ ವಿಚಾರ ಮತ್ತೊಮ್ಮೆ ಮಧ್ಯಪ್ರಾಚ್ಯ ಭಾಗದಲ್ಲಿ ಭಾರೀ ಬಿಗುವಿನ ವಾತಾವರಣ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಬೆಳವಣಿಗೆ ಹಿನ್ನೆಲೆ ಮಧ್ಯ ಪ್ರಾಚ್ಯ ಭಾಗದಲ್ಲಿ ಅಶಾಂತಿ ಭುಗಿಲೇಳುವುದು ಬಹುತೇಕ ಪಕ್ಕಾ ಅಂತಾ ಈಗ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಯುದ್ಧ ಶುರುವಾಗೇ ಹೋಯ್ತಾ?

Iran To Attack Israel Big Hint In Response To Hamas leader Yahya Sinwar s Killing

ಇಸ್ರೇಲ್‌ ಹಾಗೂ ಇರಾನ್‌ ಯುದ್ಧ...

ಗಾಜಾದಲ್ಲಿ ಅಡಗಿದ್ದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಇಸ್ರೇಲ್‌ ಸೇನೆ ವಿಡಿಯೊ ಹಾಗೂ ಫೋಟೊಗಳನ್ನು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದೆ. ಇಷ್ಟೆಲ್ಲ ಘಟನೆ ಬೆನ್ನಲ್ಲೇ ಯಹೂದಿ ರಾಷ್ಟ್ರ ಇಸ್ರೇಲ್ ಮೇಲೆ ಇರಾನ್‌ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಸುಳಿವು ನೀಡಿದೆ. ಇದರಿಂದ ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಮರ ನಿರ್ಣಾಯಕ ಹಂತವನ್ನೂ ತಲುಪಲಿದೆ ಎಂಬ ಮಾತುಗಳು ಜಾಗತಿಕ ವಲಯದಲ್ಲಿ ಕೇಳಿ ಬಂದಿವೆ.

ಇಸ್ರೇಲ್ ಮೇಲೆ ಮತ್ತೆ ಮಿಸೈಲ್ ದಾಳಿ?

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಮೃತಪಟ್ಟಿರುವ ಸುದ್ದಿ ಮತ್ತೊಮ್ಮೆ ಗಾಜಾಗೆ ಆಘಾತ ನೀಡಿದ್ದು, ಇದೀಗ ಗಾಜಾ ಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದೆ. ಮತ್ತೊಂದು ಕಡೆ ಈ ಪರಿಸ್ಥಿತಿಯ ಲಾಭ ಪಡೆದು, ಬಂಡುಕೋರರ ಗುಂಪು ಇನ್ನೊಮ್ಮೆ ಇಸ್ರೇಲ್ ವಿರುದ್ಧ ಮಿಸೈಲ್ & ರಾಕೆಟ್ ಅಟ್ಯಾಕ್ ಮಾಡುವ ಭಯ ಆವರಿಸಿದೆ. ಇದೇ ಕಾರಣಕ್ಕೆ ಅಲರ್ಟ್ ಆಗಿರುವ ಇಸ್ರೇಲ್ ಸೇನೆ ಯಾವುದೇ ಪರಿಸ್ಥಿತಿ ಎದುರಿಸಲು ಇದೀಗ ಸನ್ನದ್ಧವಾಗಿದೆ. ಮತ್ತೊಂದು ಕಡೆ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+