ಸೇಡಿಗೆ ಸೇಡು, ರಕ್ತಕ್ಕೆ ರಕ್ತ! ರೊಚ್ಚಿಗೆದ್ದ ಇರಾನ್‌ನ ಕ್ರಮ!

ಇರಾನ್‌ ರೊಚ್ಚಿಗೆದ್ದಿದೆ, ಕೆಲ ದಿನಗಳ ಹಿಂದೆ ತನ್ನ ಅಣುಸ್ಥಾವರದ ಮೇಲೆ ನಡೆದ ದಾಳಿಗೆ ಪ್ರತಿಕಾರದ ಹೆಜ್ಜೆ ಇಟ್ಟಿದೆ. ಎಲ್ಲಾ ನಿಯಮ ಗಾಳಿಗೆ ತೂರಿ ಯುರೇನಿಯಂ (ಅಣುಬಾಂಬ್‌ನ ಕಚ್ಚಾ ಪದಾರ್ಥ) ಉತ್ಪಾದನೆ ಹೆಚ್ಚಿಸಲು ಮುಂದಾಗಿದೆ. ಸದ್ಯ ಪ್ರತಿ ಗಂಟೆಗೆ ಸುಮಾರು 9 ಗ್ರಾಂ ಯುರೇನಿಯಂ ಸಂಸ್ಕರಿಸುವ ಸಾಮರ್ಥ್ಯ ಇರಾನ್‌ಗಿದೆ. ಈ ಸಂಸ್ಕರಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ.

ಈ ಮೂಲಕ ಅಣ್ವಸ್ತ್ರ ಯುದ್ಧಕ್ಕೆ ಇರಾನ್ ಸಿದ್ಧವಾಗಿದೆಯಾ ಎಂಬ ಅನುಮಾನ ಅಮೆರಿಕ ಹಾಗೂ ಇಸ್ರೇಲ್ ಮಿತ್ರರಿಗೆ ಕಾಡುತ್ತಿದೆ. ಕೆಲ ದಿನಗಳ ಹಿಂದೆ ಇರಾನ್‌ನ ನತಾಂಜ್‌ ನಗರದ ಅಂಡರ್‌ಗ್ರೌಂಡ್ ಯುರೇನಿಯಂ ಅಣು ಸಂಸ್ಕರಣಾ ಘಟಕದಲ್ಲಿ ದಿಢೀರ್ ವಿದ್ಯುತ್‌ ಕಡಿತವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಇರಾನ್ ಸ್ಥಾವರ ಬಂದ್ ಮಾಡಿ ಹೈಅಲರ್ಟ್ ಘೋಷಿಸಿತ್ತು.
ಸಹಜವಾಗಿ ಈ ದಾಳಿಗೆ ಇರಾನ್, ಇಸ್ರೇಲ್ ಸರ್ಕಾರವನ್ನೇ ದೂಷಿಸಿತ್ತು. ದಾಳಿ ನಡೆದು ಕೆಲವು ದಿನಗಳು ಕಳೆಯುವುದರ ಒಳಗೆ ಯುರೇನಿಯಂ ಸಂಸ್ಕರಣಾ ಸಾಮರ್ಥ ಹೆಚ್ಚಿಸಲು ಇರಾನ್ ಮುಂದಾಗಿದೆ. ಇದು ಸಹಜವಾಗಿ ಮಧ್ಯಪ್ರಾಚ್ಯದಲ್ಲಿ ಕೆಂಡದಂತಹ ಪರಿಸ್ಥಿತಿ ಸೃಷ್ಟಿಸಿದೆ.

ಸೇಡಿಗೆ ಸೇಡು, ರಕ್ತಕ್ಕೆ ರಕ್ತ..!

ಸೇಡಿಗೆ ಸೇಡು, ರಕ್ತಕ್ಕೆ ರಕ್ತ..!

ಇರಾನ್ ತನ್ನ ವಿರೋಧಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿ ನಿಂತಿದೆ. ಅದ್ರಲ್ಲೂ ಮಧ್ಯಪ್ರಾಚ್ಯದಲ್ಲಿ ತನ್ನ ವಿರೋಧ ಕಟ್ಟಿಕೊಂಡವರಿಗೆ ಬಿಸಿ ಮುಟ್ಟಿಸಲು ಈ ಕ್ರಮ ಕೈಗೊಂಡಿದೆ ಎಂಬುದು ತಜ್ಞರ ವಾದ. ಇರಾನ್‌ನ ಸಂಸ್ಕರಣಾ ಸಾಮರ್ಥ್ಯ ಹೆಚ್ಚುವುದರಿಂದ ಅಣ್ವಸ್ತ್ರ ಉತ್ಪಾದನೆ ಕೂಡ ಹೆಚ್ಚಲಿದೆ, ಇದನ್ನು ವಿರೋಧಿಗಳ ಮೇಲೆ ಇರಾನ್ ಬಳಸು ಅಪಾವಿದೆ ಎಂಬುದು ಕೆಲ ರಾಷ್ಟ್ರಗಳ ಆರೋಪ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇರಾನ್ ತನ್ನ ಅಣುಸ್ಥಾವರಗಳ ಅಭಿವೃದ್ಧಿಯತ್ತ ಮತ್ತಷ್ಟು ಗಮನ ಹರಿಸುತ್ತಿದೆ. ಈ ಮೂಲಕ ಇರಾನ್ ಸೇಡಿಗೆ ಸೇಡು, ರಕ್ತಕ್ಕೆ ರಕ್ತದ ನಿಯಮ ಅನುಸರಿಸುತ್ತಿದೆ.

ಅಣು ವಿಜ್ಞಾನಿಯ ಭೀಕರ ಹತ್ಯೆ

ಅಣು ವಿಜ್ಞಾನಿಯ ಭೀಕರ ಹತ್ಯೆ

ನವೆಂಬರ್ 27ರಂದು ಇರಾನ್ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರ್‌ನಲ್ಲಿ ತೆರಳುತ್ತಿದ್ದಾಗ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿಗೆ ಇಸ್ರೇಲ್ ರೂವಾರಿ ಎಂದು ಇರಾನ್ ಆರೋಪ ಮಾಡಿತ್ತು. ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರನ್ನ ಅಡ್ಡಹಾಕಿ ಮಷಿನ್ ಗನ್ ಬಳಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಮಾಸುವ ಮೊದಲೇ ಇರಾನ್‌ನ ಅಣು ಕೇಂದ್ರಗಳ ಮೇಲೆ ಸೈಬರ್ ದಾಳಿ ನಡೆದಿರುವುದು ಮಧ್ಯಪ್ರಾಚ್ಯ ಶಾಂತಿಗೆ ಭಂಗ ತಂದಿದೆ. ಪ್ರತಿಕಾರಕ್ಕಾಗಿ ಇರಾನ್ ಕಾದು ಕುಳಿತಿದ್ದು, ಇಸ್ರೇಲ್‌ಗೆ ಕೌಂಟರ್ ಕೊಡುವ ಲೆಕ್ಕಾಚಾರ ಹಾಕುತ್ತಿದೆ.

ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್

ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್

ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್‌ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್‌ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್‌ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್‌ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ.

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ

ಅಂದಹಾಗೆ ದಶಕದ ಹಿಂದೆ ಇರಾನ್‌ ಪರಮಾಣು ಯೋಜನೆ ಪ್ರಾರಂಭಿಸಿದ ನಂತರ ಫಖ್ರಿಜಾದೆಹ್‌ ರೀತಿ ಹಲವು ವಿಜ್ಞಾನಿಗಳನ್ನ ಕೊಂದು ಹಾಕಲಾಗಿದೆ. ಎಲ್ಲಾ ಕೊಲೆಗಳ ಹಿಂದೆ ಇಸ್ರೇಲ್‌ ಕೈವಾಡವಿದೆ ಎಂಬುದು ಇರಾನ್‌ ಆರೋಪ. ಒಂದು ಕಡೆ ಅರಬ್ ರಾಷ್ಟ್ರಗಳು ಒಂದೊಂದಾಗಿ ಇಸ್ರೇಲ್ ಜೊತೆಗಿನ ದ್ವೇಷ ಮರೆತು ಸ್ನೇಹ ಸಾಧಿಸುತ್ತಿವೆ. ಆದರೆ ಇರಾನ್ ಮಾತ್ರ ಇಸ್ರೇಲ್ ಜೊತೆಗೆ ಸ್ನೇಹ ಮಾಡಲು ಬಿಲ್‌ಕುಲ್ ಸಿದ್ಧವಿಲ್ಲ. ಇದು ಉರಿವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ದಿನದಿಂದ ದಿನಕ್ಕೆ ಎರಡೂ ರಾಷ್ಟ್ರಗಳ ಸಂಬಂಧ ಹಳಸುತ್ತಿದೆ.

ಹಡಗಿನ ಮೇಲೆ ಭೀಕರ ದಾಳಿ..!

ಹಡಗಿನ ಮೇಲೆ ಭೀಕರ ದಾಳಿ..!

ಇನ್ನೂ ಮೊನ್ನೆ ಮೊನ್ನೆ ಕೆಂಪು ಸಮುದ್ರದಲ್ಲಿ ಅಂದರೆ ಸೂಯೆಜ್ ಕಾಲುವೆ ಕೂಡುವ ಸಮುದ್ರದಲ್ಲಿ ಇರಾನ್‌ ಹಡಗಿನ ಮೇಲೆ ಭೀಕರ ದಾಳಿ ನಡೆದಿತ್ತು. ತನ್ನ ಸರಕು ಸಾಗಾಣಿಕೆ ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಕಂಡು ಇರಾನ್ ಕೆಂಡವಾಗಿತ್ತು. ಇಸ್ರೇಲ್‌ನ ಹಡಗುಗಳ ಮೇಲೆ ಹಿಂದಿನ ದಾಳಿಗೆ ಇದು ಪ್ರತೀಕಾರವಾಗಿದೆ ಎಂಬ ಅನುಮಾನವನ್ನೂ ಇರಾನ್ ವ್ಯಕ್ತಪಡಿಸಿತ್ತು. ಇದೀಗ ಮತ್ತೊಮ್ಮೆ ಇರಾನ್‌ನ ಅಣುಕೇಂದ್ರಗಳ ಮೇಲೆ ದಾಳಿ ನಡೆದಿರುವುದು ಎರಡೂ ರಾಷ್ಟ್ರಗಳ ನಡುವೆ ಕಿಚ್ಚು ಹೊತ್ತುವಂತೆ ಮಾಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ಎಲ್ಲಾ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+