ಇರಾನ್ ಪರಮಾಣು ಸ್ಥಾವರದ ಬಳಿ ಭಾರಿ ಕಟ್ಟೆಚ್ಚರ, ದಾಳಿ ಎದುರಿಸಲು ಸಿದ್ಧತೆ? Israel And Iran

ಇಸ್ರೇಲ್ ಸೇನೆಯಿಂದ ಭೀಕರ ದಾಳಿ ಎದುರಿಸಿದ ನಂತರ ಇರಾನ್ ನೆಲದಲ್ಲಿ ವಿಕಿರಣ ಸೋರಿಕೆ ಭಯ ಕಾಡುತ್ತಿದ್ದು, ಈ ಭಯದ ನಡುವೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇಸ್ರೇಲ್ ಸೇನೆ ಭಾರಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುತ್ತಿದ್ದು, ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಹೀಗೆ ಇಬ್ಬರ ನಡುವೆ ಘೋರ ಕದನ ನಡೆಯುತ್ತಿರುವ ಸಮಯದಲ್ಲೇ, ಇರಾನ್ ನೆಲದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಇರಾನ್ ಪರಮಾಣು ಸ್ಥಾವರದ ಬಳಿ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಮತ್ತೊಂದು ದಾಳಿ ನಡೆದರೂ ಅದನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಇರಾನ್. ಆದರೆ ಇಬ್ಬರ ಈ ಜಗಳ ಜಗತ್ತಿಗೆ ಭಾರಿ ಆತಂಕ ತರಿಸಿದೆ.

2ನೇ ಮಹಾಯುದ್ಧ ನಿಮಗೆಲ್ಲಾ ನೆನಪು ಇರಬಹುದು, ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಸಾಕಿ ಮೇಲೆ ಇದೇ ಅಮೆರಿಕ ಭೀಕರ ಪರಮಾಣು ದಾಳಿ ಮಾಡಿ ಎಲ್ಲವನ್ನೂ ನಾಶ ಮಾಡಿ ಹಾಕಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ರೀತಿ ಅಮೆರಿಕ ಸೇನೆ ನಡೆಸಿದ ಪರಮಾಣು ದಾಳಿ ಅಂದ್ರೆ ಆಟಂ ಬಾಂಬ್ ಅಟ್ಯಾಕ್ ಪರಿಣಾಮವನ್ನ ಈಗಲೂ ಜಪಾನ್ ದೇಶದ ಜನರು ಎದುರಿಸುತ್ತಿದ್ದಾರೆ. ಆದರೆ 1945 ಸಮಯದಲ್ಲಿ ನಡೆದ ಈ ದಾಳಿ ನಂತರ ಮತ್ತೆ ಯಾವತ್ತು ಪರಮಾಣು ಅಂದ್ರೆ ನ್ಯೂಕ್ಲಿಯರ್ ಅಟ್ಯಾಕ್ ಅಗಿರಲಿಲ್ಲ. ಹೀಗಿದ್ದಾಗಲೇ, ಮತ್ತೊಂದು ರಣಭೀಕರ ದಾಳಿಗೆ ಇದೀಗ ಸಿದ್ಧತೆ ನಡೆದಿದೆ ಎಂಬ ಸುದ್ದಿ ಹಬ್ಬಿದೆ.

Iran Nuclear Plants on High Alert Following Attack by Israel

ಇರಾನ್ ವಿರುದ್ಧ ಪರಮಾಣು ದಾಳಿ?

ಇಸ್ರೇಲ್ ಹಾಗೂ ಇರಾನ್ ಯುದ್ಧ ನೋಡುತ್ತಿದ್ದರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಎನ್ನಲಾಗುತ್ತಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಯುದ್ಧ ಶುರುವಾಗಿ, ಪರಮಾಣು ಸಾಮರ್ಥ್ಯ ಅಂದ್ರೆ ಅಣುಬಾಂಬ್ ಇರುವ ಇರಾನ್ ಮತ್ತು ಅಮೆರಿಕ ಬೆಂಬಲ ಇರುವ ಇಸ್ರೇಲ್ ನಡುವೆ ಘೋರ ಕದನ ಆರಂಭವಾಗಿ ದೊಡ್ಡ ಹಿಂಸಾಚಾರ ಕೂಡ ನಡೆಯುತ್ತಿದೆ. ಇಂತಹ ವೇಳೆ, ಇರಾನ್ & ಇಸ್ರೇಲ್ ನಡುವೆ ಪರಮಾಣು ಯುದ್ಧವೇ ಶುರುವಾಗುವ ಭಯ ಕಾಡುತ್ತಿದೆ. ಯಾಕಂದ್ರೆ ಈ ಎರಡೂ ದೇಶಗಳು ನ್ಯೂಕ್ಲಿಯರ್ ವಾರ್ ನಡೆಸುವ ಸಾಮರ್ಥ್ಯ ಹೊಂದಿವೆ.

ಮನುಷ್ಯರ ಅಂತ್ಯ ಗ್ಯಾರಂಟಿ ಆಯ್ತಾ?

ಇರಾನ್ & ಇಸ್ರೇಲ್ ಯುದ್ಧದ ಬಗ್ಗೆ ಇಡೀ ಜಗತ್ತಿಗೇ ಭಯ ಶುರುವಾಗಿದ್ದು, ಯುದ್ಧ ನಿಲ್ಲಬೇಕು ಎಂಬ ಒತ್ತಡ ಹೆಚ್ಚಾಗಿದೆ. ಇಷ್ಟಾದರೂ ಇಬ್ಬರ ನಡುವಿನ ಯುದ್ಧವಂತೂ ನಿಲ್ಲುತ್ತಿಲ್ಲ, ಬದಲಾಗಿ ಇನ್ನಷ್ಟು ಹೆಚ್ಚಾಗುತ್ತಿರುವ ಯುದ್ಧದ ಕಾರಣಕ್ಕಾಗಿ ಹೊಸ ಆತಂಕವೂ ಎದುರಾಗಿದೆ. ಇಂತಹ ಭಾರಿ ಸೂಕ್ಷ್ಮ ಸಮಯದಲ್ಲಿ ರಷ್ಯಾ ಅಧ್ಯಕ್ಷ ನಿಲುವು ಕುತೂಹಲವನ್ನ ಕೆರಳಿಸಿದೆ. ಯಾಕೆ ಅಂದ್ರೆ ರಷ್ಯಾ ಅಧ್ಯಕ್ಷ ಪುಟಿನ್ ಇರಾನ್ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದು, ಮತ್ತೊಂದು ಕಡೆ ಇಸ್ರೇಲ್ ಜೊತೆ ಕೂಡ ಚನ್ನಾಗಿಯೇ ಇದ್ದಾರೆ. ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಿದ್ದರೆ ಮನುಷ್ಯರ ಅಂತ್ಯ ಶುರುವಾದಂತೆ ಕಾಣ್ತಾ ಇದ್ದು, ಪರಮಾಣು ಯುದ್ಧ ನಡೆದರೆ ಅದೇ ಕ್ಷಣದಲ್ಲಿ ಮನುಷ್ಯರ ಅವನತಿ ಕೂಡ ಶುರುವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+