ಇರಾನ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ: ಇಂಟರ್ನೆಟ್ ಸ್ಥಗಿತ, ಮಹಿಳೆಯ ಆಕ್ರಂದನ ವಿಡಿಯೋ ವೈರಲ್!
ಟೆಹ್ರಾನ್: ಇರಾನ್ ಮತ್ತೆ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ. ಇರಾನ್‌ನ ಕೊನೆಯ ಶಾಹ್ ಮೊಹಮ್ಮದ್ ರೆಜಾ ಪಹ್ಲವಿ ಅವರ ಪುತ್ರ ಹಾಗೂ ಗಡಿಪಾರಾಗಿರುವ ಕ್ರೌನ್ ಪ್ರಿನ್ಸ್ ರೆಜಾ ಪಹ್ಲವಿ ಕರೆಗೆ ಓಗೊಟ್ಟು ಸಾವಿರಾರು ಜನರು ಗುರುವಾರ ತಡರಾತ್ರಿ ಟೆಹ್ರಾನ್ನ ಬೀದಿ-ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.
ಡಾಲರ್ ಎದುರು ಇರಾನ್ ಕರೆನ್ಸಿ ರಿಯಾಲ್ ಪಾತಾಳಕ್ಕೆ ಕುಸಿದಿದ್ದು, ಹಣದುಬ್ಬರ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ದಿನನಿತ್ಯ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಇದರಿಂದ ಇರಾನ್ ಸರ್ಕಾರದ ವಿರುದ್ದ ಜನಾಕ್ರೋಶ ಭುಗಿಲೆದಿದ್ದು, ಸುಮಾರು 13 ದಿನಗಳಿಂದ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಇರಾನ್ ಸರ್ಕಾರ ದೇಶದಾದ್ಯಂತ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಪ್ರತಿಭಟನಾಕಾರರನ್ನು ಮಟ್ಟಹಾಕುವ ಕೆಲಸಕ್ಕೆ ಮುಂದಾಗಿದೆ.

ಇತ್ತ ಇರಾನ್‌ನಲ್ಲಿ ಆರ್ಥಿಕ ಕುಸಿತದಿಂದಾಗಿ ದಿನದೂಡುವುದಕ್ಕೂ ಕಷ್ಟಕರವಾದ ಪರಿಸ್ಥಿತಿ ಎದುರಿಸಲಾಗದೆ ಆಕ್ರೋಶಗೊಂಡಿರುವ ಇರಾನ್ ಜನತೆ ಬೀದಿಗಿಳಿದಿದ್ದು, ಪ್ರತಿಭಟನೆ ಹತ್ತಿಕ್ಕಲು ಇಂಟರ್ನೆಟ್ ಸ್ಥಗಿತಗೊಳಿಸಿದ್ದು, ಸಾವಿರಾರು ಬಂಧನ ಬಂಧಿಸಿದೆ. ಪ್ರತಿಭಟನಾಕರರನ್ನು ಮಟ್ಟಹಾಕಲು ಕಠಿಣ ಕ್ರಮಕ್ಕೆ ಖಮೇನಿ ಮುಂದಾಗಿದ್ದರೂ ಸಹ ಅಲ್ಲಿನ ಜನತೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ದ ಆಕ್ರೋಶವನ್ನ ಹೊರಹಾಕಿದ್ದಾರೆ. ಇನ್ನೂ ನಾನು ಸತ್ತು 47 ವರ್ಷವಾಗಿದೆ ನನಗೆ ಭಯವಿಲ್ಲ ಎಂದು ಪ್ರಭಟನಾನಿರತ ಮಹಿಳೆ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಪ್ರತಿಭಟನೆಯ ಪರಿಣಾಮವನ್ನು ತಡೆಯಲು ಇರಾನ್ ಬಹುತೇಕ ಭಾಗಗಳಲ್ಲಿ ಇಂಟರ್ನೆಟ್ ಹಾಗೂ ಟೆಲಿಫೋನ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಈ ಪ್ರತಿಭಟನೆಯಲ್ಲಿ "ಜಾವಿದ್ ಶಾಹ್" (ಲಾಂಗ್ ಲೈವ್ ದಿ ಕಿಂಗ್), "ಪಹ್ಲವಿ ವಾಪಸ್ ಬರುತ್ತಾರೆ" ಎಂಬ ಘೋಷಣೆ ಜತೆಗೆ ಸರ್ಕಾರ ವಿರೋಧಿ ಘೋಷಣೆಗಳೂ ಕೇಳಿಬಂದವು. ಇರಾನ್ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆಗಳು ದುಬಾರಿಯಾಗಿವೆ. ಉದ್ಯೋಗ ಕೊರತೆ ಕಾಡುತ್ತಿದ್ದು, ಜೀವನ ನಿರ್ವಹಣೆ ವೆಚ್ಚ ಅಧಿಕವಾಗಿದೆ. ಇದರಿಂದ ಬೇಸತ್ತಿರುವ ಜನರು ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ.
ಪ್ರತಿಭಟನೆಗಳು ತೀವ್ರಗೊಂಡ ಬೆನ್ನಲ್ಲೇ ಇರಾನ್ ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೆ, ಫೋನ್ ಸಂಪರ್ಕವನ್ನು ಕಡಿಗೊಳಿಸಿದೆ. ಪ್ರತಿಭಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಹೊರಗೆ ಹೋಗದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವಾರು ಪ್ರದೇಶಗಳಲ್ಲಿ ವಾಯುಪಡೆಯವರಿಗೆ ಸೂಚನೆಗಳು ನೀಡಲಾಗಿದೆ ಮತ್ತು ತಬ್ರಿಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಇರಾನ್‌ನಾದ್ಯಂತ ಇಂಟರ್ನೆಟ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಇದು ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ಕ್ರಮವಾಗಿದೆ. ಈ ನಿರ್ಬಂಧವು ಜನಸಾಮಾನ್ಯರ ಸಂವಹನ ಹಕ್ಕನ್ನು ಕಸಿದುಕೊಂಡಿದೆ ಎಂದು ಆನ್‌ಲೈನ್ ಪರಿವೀಕ್ಷಕ ಸಂಸ್ಥೆ ನೆಟ್‌ಬ್ಲಾಕ್ಸ್ ವರದಿ ಮಾಡಿದೆ. ಇನ್ನೂ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಗಳಿಗೆ ಇರಾನ್ ನಾಯಕರಲ್ಲೇ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಪ್ರತಿಭಟನಾಕಾರರೊಂದಿಗೆ ಅತ್ಯಂತ ಸಂಯಮದಿಂದ ವರ್ತಿಸುವಂತೆ ಸೂಚಿಸಿದ್ದು, ಯಾವುದೇ ಹಿಂಸಾತ್ಮಕ ಅಥವಾ ಬಲವಂತದ ನಡವಳಿಕೆಯನ್ನು ತಪ್ಪಿಸಬೇಕು ಹಾಗೂ ಪ್ರತಿಭಟನಾಕಾರರೊಂದಿಗೆ ಸಂವಾದದ ಮೂಲಕ ತೊಡಗಿಸಿಕೊಂಡು ಜನರ ಬೇಡಿಕೆಗಳನ್ನು ಆಲಿಸುವುದರಿಂದ ಆಕ್ರೋಶವನ್ನು ಶಮನಗೊಳಿಸಬೇಕು ಎಂದು ತಮ್ಮ ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.












Click it and Unblock the Notifications