ಟ್ರಂಪ್ ಎಚ್ಚರಿಕೆಗೆ ಕ್ಯಾರೇ ಅನ್ನದೆ ಇರಾನ್ ನಿಂದ ಕ್ಷಿಪಣಿ ಪರೀಕ್ಷೆ

Posted By:
Subscribe to Oneindia Kannada

ಟೆಹರಾನ್, ಫೆಬ್ರವರಿ 1: ಇರಾನ್ ಹೊಸ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ರಕ್ಷಣಾ ಸಚಿವ ಹೊಸೈನ್ ದೆಹಘಾನ್ ಬುಧವಾರ ಹೇಳಿದ್ದಾರೆ. ಈ ಪರೀಕ್ಷೆಯು ಟೆಹರಾನ್ ಅಣು ಒಪ್ಪಂದ ಅಥವಾ ವಿಶ್ವ ಸಂಸ್ಥೆ ಭದ್ರತಾ ಕೌನ್ಸಿಲ್ ನ ನಿರ್ಣಯವನ್ನು ಉಲ್ಲಂಘಿಸಿಲ್ಲ ಎಂದು ಸಹ ಅವರು ಹೇಳಿದ್ದಾರೆ.

2015ರ ಅಣು ಒಪ್ಪಂದದ ನಂತರ ಇರಾನ್ ಹಲವು ಕ್ಷಿಪಣಿ ಪ್ರಯೋಗಗಳನ್ನು ನಡೆಸಿದೆ. ಆದರೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಕ್ಷಿಪಣಿ ನಡೆಸಿದೆ. ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ, ಇರಾನ್ ನ ಕ್ಷಿಪಣಿ ಪರೀಕ್ಷೆಗಳನ್ನು ನಿಲ್ಲಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು.[ಇರಾನ್ ಜನನಾಯಕನ ಅಂತ್ಯಕ್ರಿಯೆಗೆ ಜನಸಾಗರ ನಿರೀಕ್ಷೆ]

Iran confirms new missile test —first in Trump-era

"ಈ ಕ್ಷಿಪಣಿ ಪರೀಕ್ಷೆ ಬಹಳ ಹಿಂದೆಯೇ ನಿಗದಿಯಾಗಿತ್ತು. ಮತ್ತು ವಿದೇಶೀಯರು ನಮ್ಮ ರಕ್ಷಣಾ ವಿಚಾರದಲ್ಲಿ ತಲೆಹಾಕಲು ಬಿಡುವುದಿಲ್ಲ" ಎಂದು ಹೊಸೈನ್ ದೆಹಘಾನ್ ಹೇಳಿದ್ದಾರೆ. ಈ ಪರೀಕ್ಷೆಯು ಅಣು ಒಪ್ಪಂದವನ್ನಾಗಲೀ, ವಿಶ್ವಸಂಸ್ಥೆಯ ನಿರ್ಣಯವನ್ನಾಗಲೀ ಉಲ್ಲಂಘಿಸಿಲ್ಲ" ಎಂದಿದ್ದಾರೆ.

ಯುಎಸ್ ಅಧಿಕಾರಿಯೊಬ್ಬರು ಈ ಬಗ್ಗೆ ಸೋಮವಾರ ಮಾತನಾಡಿ, ಇರಾನ್ ಭಾನುವಾರ ಮಧ್ಯಮ ದೂರದ ಕ್ಷಿಪಣಿ ಪರೀಕ್ಷೆ ನಡೆಸಿದೆ. 630 ಮೈಲಿ ಕ್ರಮಿಸಿದ ನಂತರ ಅದು ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ. ಆದರೆ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ಯುಎಸ್ ಅಧಿಕಾರಿಯ ವರದಿಯನ್ನು ಖಾತ್ರಿಯೂ ಪಡಿಸಿಲ್ಲ, ನಿರಾಕರಿಸಿಯೂ ಇಲ್ಲ. ಆದರೆ, ಟೆಹರಾನ್ ಕ್ಷಿಪಣಿಯನ್ನು ಯಾವುದೇ ದೇಶದ ವಿರುದ್ಧ ದಾಳಿ ನಡೆಸಲು ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Iran’s Defence Minister Hossein Dehghan said on Wednesday that the Islamic Republic had tested a new missile, but added the test did not breach Tehran’s nuclear accord with world powers or a United Nations Security Council resolution endorsing the pact.
Please Wait while comments are loading...