ರಷ್ಯಾ ದೇಶಕ್ಕೆ ಮತ್ತೊಂದು ಕಂಟಕ: ಏನದು ಗೊತ್ತಾ?
ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಜಗತ್ತಿನ ಹಲವು ದೇಶಗಳು ಈಗಾಗಲೇ ರಷ್ಯಾ ವಿರುದ್ಧವೇ ನಿರ್ಬಂಧ ಹೇರಿವೆ. ಹೀಗಿದ್ದಾಗ ಮತ್ತೊಂದು ಆಘಾತ ಇದೀಗ ರಷ್ಯಾಗೆ ಎದುರಾಗಿದ್ದು, ದಿಢೀರ್ ಅಂತಾರಾಷ್ಟ್ರೀಯ ನ್ಯಾಯಾಲಯ ರಷ್ಯಾ ವಿರುದ್ಧ ಆದೇಶ ಒಂದನ್ನ ಇದೀಗ ಹೊರಡಿಸಿದೆ.
ಉಕ್ರೇನ್ ವಿರುದ್ಧ ಅಟ್ಯಾಕ್ ಮಾಡುತ್ತಿರುವ ರಷ್ಯಾ ಸೇನೆ ಲಕ್ಷಾಂತರ ಅಮಾಯಕ ಜನರ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ, ರೊಚ್ಚಿಗೆದ್ದು ಮಹತ್ವದ ಆದೇಶ ಹೊರಡಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ, ರಷ್ಯಾ ದೇಶದ ಸೇನಾಧಿಕಾರಿಗಳ ವಿರುದ್ಧ ಇದೀಗ ಅರೆಸ್ಟ್ ವಾರಂಟ್ ಕೊಟ್ಟಿದೆ. ಇದು ರಷ್ಯಾ ದೇಶದ ಬುಡ ಅಲುಗಾಡುವಂತೆ ಮಾಡಿದೆ. ಯಾಕಂದ್ರೆ ಕೆಲವು ತಿಂಗಳ ಹಿಂದಷ್ಟೇ ಅಧ್ಯಕ್ಷರಿಗೆ ಅಂದ್ರೆ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಕೂಡ ಅರೆಸ್ಟ್ ವಾರಂಟ್ ನೀಡಲಾಗಿತ್ತು. ಈಗ ನೋಡಿದ್ರೆ ರಷ್ಯಾ ಸೇನೆಯ ಅಧಿಕಾರಿಗಳಿಗೆ ಕೂಡ ಅರೆಸ್ಟ್ ವಾರಂಟ್ ಕೊಟ್ಟಿರುವುದು ಸಹಜವಾಗೇ ತಲ್ಲಣ ಎಬ್ಬಿಸಿದೆ.

1 ಲಕ್ಷ 20 ಸಾವಿರ ಜನರ ಸಾವು?
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿ ಹೆಚ್ಚಿಸುತ್ತಿದ್ದು ಹೀಗೆ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಯುದ್ಧದಿಂದಾಗಿ ಇದುವರೆಗೆ 50,000 ನಾಗರಿಕರು ಮೃತಪಟ್ಟು, 70,000 ಉಕ್ರೇನ್ ಸೈನಿಕರು ಜೀವ ಬಿಟ್ಟಿದ್ದಾರೆ ಎಂಬ ಆರೋಪ ಉಕ್ರೇನ್‌ನ ನಾಯಕರದ್ದು. ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಪ್ರಾಣ ಹೋಗಿದೆ, ಇದಕ್ಕೆ ನ್ಯಾಯ ಕೊಡಿಸಿ ಎನ್ನುತ್ತಿದೆ ಉಕ್ರೇನ್. ಇಂತಹ ಪರಿಸ್ಥಿತಿಯಲ್ಲಿ ರಷ್ಯಾ ಸೇನೆಗೆ ಆಘಾತ ನೀಡುವಂತೆ ಅಂತಾರಾಷ್ಟ್ರೀಯ ಕೋರ್ಟ್ ಕೂಡ ಅರೆಸ್ಟ್ ವಾರಂಟ್ ನೀಡಿದೆ.
20 ವರ್ಷ ನಡೆಯುತ್ತಾ ಯುದ್ಧ?
2022 ರಲ್ಲಿ ಶುರುವಾದ ರಷ್ಯಾ VS ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ಮುಗಿದು ಹೋಗಿ ಎಲ್ಲಾ ಶಾಂತವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಆಗಿದ್ದೆಲ್ಲಾ ಉಲ್ಟಾ ಅಂತಾ ಹೇಳಬಹುದು. ಯಾಕಂದ್ರೆ ಕೆಲವೇ ದಿನಗಳು ಬಿಡಿ ಈಗಾಗಲೇ 2 ವರ್ಷ ಪೂರೈಸಿರುವ ಈ ಯುದ್ಧ ಇನ್ನೂ 20 ವರ್ಷ ಕಳೆದರು ಮುಗಿಯುವ ಲಕ್ಷಣ ಕಾಣ್ತಿಲ್ಲ. ಒಂದು ಕಡೆ ಉಕ್ರೇನ್ ಪರವಾಗಿ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ನಿಂತಿದ್ದರೆ, ಇನ್ನೊಂದು ಬದಿಯಲ್ಲೀಗ ಚೀನಾ & ಉತ್ತರ ಕೊರಿಯಾ ಬೆಂಬಲ ಪಡೆದು ರಷ್ಯಾ ತನ್ನ ಹೋರಾಟ ಮುಂದುವರಿಸಿದೆ.












Click it and Unblock the Notifications