• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಪಾಕಿಸ್ತಾನಕ್ಕೆ ಆಹ್ವಾನ ನೀಡದಿರಲು ಭಾರತದ 'ಆಂತರಿಕ ರಾಜಕೀಯ' ಕಾರಣ'

|

ಇಸ್ಲಾಮಾಬಾದ್, ಮೇ 28: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿ ಹುದ್ದೆಗೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ಅಹ್ವಾನ ನೀಡಿಲ್ಲ. ಭಾರತದ ಪ್ರಧಾನಿಗಳ "ಆಂತರಿಕ ರಾಜಕಾರಣ"ದ ಕಾರಣಕ್ಕೆ ಪಾಕಿಸ್ತಾನಕ್ಕೆ ಆಹ್ವಾನ ನೀಡಲು ಸಾಧ್ಯವಾಗಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಬಾಂಗ್ಲಾದೇಶ್, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್, ಭಾರತ ಹಾಗೂ ನೇಪಾಳವನ್ನು ಒಳಗೊಂಡ ಏಳು ರಾಷ್ಟ್ರಗಳ ಸದಸ್ಯತ್ವದ ಗುಂಪೊಂದನ್ನು ಮಾಡಿಕೊಂಡಿದ್ದು, ಉಳಿದ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಮೋದಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿರಲಿಲ್ಲ. ಇದಕ್ಕೆ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಉತ್ತರಿಸಿದ್ದಾರೆ.

ಮೋದಿ ಪ್ರಮಾಣವಚನಕ್ಕೆ ಇಮ್ರಾನ್‌ ಖಾನ್‌ಗೆ ಆಹ್ವಾನವಿಲ್ಲ

ಕಾಶ್ಮೀರ ಸಮಸ್ಯೆ, ಸಿಯಾಚಿನ್ ಹಾಗೂ ಸರ್ ಕ್ರಿಕ್ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಭೇಟಿ ಆಗುವುದು ಮುಖ್ಯ. ಪ್ರಮಾಣ ವಚನ ಸಮಾರಂಭಕ್ಕೆ ಹೋಗುವುದರಲ್ಲಿ ಎಂಥ ಹೆಚ್ಚುಗಾರಿಕೆ ಇದೆ ಎಂದಿದ್ದಾರೆ.

ಅವರ (ಪ್ರಧಾನಿ ಮೋದಿ) ಎಲ್ಲ ಗಮನ (ಚುನಾವಣೆ ಪ್ರಚಾರ ವೇಳೆಯಲ್ಲಿ) ಪಾಕಿಸ್ತಾನವನ್ನು ಬಯ್ಯುವುದರಲ್ಲಿ ಇತ್ತು. ಇಂಥ ವ್ಯಾಖ್ಯಾನದಿಂದ ತಕ್ಷಣಕ್ಕೆ ಹೊರಬರುತ್ತಾರೆ ಅಂದುಕೊಳ್ಳುವುದು ಬುದ್ಧಿವಂತಿಕೆ ಅಲ್ಲ ಎಂದು ಖುರೇಷಿ ಹೇಳಿರುವುದಾಗಿ 'ಡಾನ್' ಪತ್ರಿಕೆ ವರದಿ ಮಾಡಿದೆ. ಭಾರತದ ಆಂತರಿಕ ರಾಜಕಾರಣವು ಪಾಕಿಸ್ತಾನಕ್ಕೆ ಆಹ್ವಾನ ನೀಡಲು ಅವಕಾಶ ನೀಡಿಲ್ಲ ಎಂದು ಅವರು ಖುರೇಷಿ ಪಟ್ಟಿದ್ದಾರೆ.

ಮೋದಿ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲಿರುವ ಮಮತಾ

ಮೋದಿ ಹಾಗೂ ಇಮ್ರಾನ್ ಖಾನ್ ಕೈರ್ಗಿಸ್ತಾನದಲ್ಲಿ ನಡೆಯುವ ಶಾಂಘೈ ಕೋ ಆಪರೇಷನ್ ಆರ್ಗನೈಸೇಷನ್ ನಲ್ಲಿ ಮುಂದಿನ ತಿಂಗಳು ಭೇಟಿ ಆಗಬೇಕಿದೆ. ಐದು ವರ್ಷಗಳ ಹಿಂದೆ ಮೋದಿ ಪ್ರಮಾಣ ವಚನದ ವೇಳೆ ಸಾರ್ಕ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆಗ ಪಾಕ್ ಪ್ರಧಾನಿ ಆಗಿದ್ದ ನವಾಜ್ ಷರೀಫ್ ಕೂಡ ಭಾಗವಹಿಸಿದ್ದರು.

English summary
'Internal politics' not allowed Modi to extend invitation to Pakistan, said Pakistan foreign minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X