
ತಾಯಂದಿರು, ಭಾರತೀಯ ಮೂಲದವರ ನೇಮಕಾತಿ ಬೇಡ ಎಂದಿತ್ತಾ ಇನ್ಫೋಸಿಸ್? ಅಮೆರಿಕ ಕೋರ್ಟ್‌ನಲ್ಲಿ ವಿಚಾರಣೆ
ವಾಷಿಂಗ್ಟನ್, ಅ. 9: ನೇಮಕಾತಿಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದೆಂಬ ಆರೋಪದ ಮೇಲೆ ಇನ್ಫೋಸಿಸ್ ಕಂಪನಿಯ ವಿರುದ್ಧ ಅಮೆರಿಕದ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಅಮೆರಿಕದಲ್ಲಿ ಇನ್ಫೋಸಿಸ್ ವಿರುದ್ಧ ಇಂಥ ತಾರತಮ್ಯದ ಆರೋಪ ಕೇಳಿಬರುತ್ತಿರುವುದು ಇದು ಎರಡನೇ ಬಾರಿ.
ಭಾರತೀಯ ಮೂಲದವರು, ಸಣ್ಣ ವಯಸ್ಸಿನ ಮಕ್ಕಳಿರುವವರು ಮತ್ತು 50 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಇಂಥವರನ್ನು ನೇಮಕಾತಿ ಮಾಡಿಕೊಳ್ಳಬೇಡಿ ಎಂದು ಇನ್ಫೋಸಿಸ್ ಸಂಸ್ಥೆ ಹೇಳಿತ್ತೆಂಬ ಆರೋಪ ಇದೆ. ಇನ್ಫೋಸಿಸ್‌ನ ಹೆಚ್‌ಆರ್ ವಿಭಾಗದ ಮಾಜಿ ಉಪಾಧ್ಯಕ್ಷೆ ಜಿಲ್ ಪ್ರೆಜೀನ್ ಅವರು ಅಮೆರಿಕದ ನ್ಯೂಯಾರ್ಕ್‌ನ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಕಾನೂನು ಮೊಕದ್ದಮೆ ಹೂಡಿದ್ದಾರೆ.
ವಿಪ್ರೋ, ಇನ್ಫೋಸಿಸ್ ಬಳಿಕ ಅಕ್ಸೆಂಚರ್ನಿಂದ ಫ್ರೆಶರ್ಗಳ ಆಫರ್ ಲೆಟರ್ ರದ್ದು
ನೇಮಕಾತಿಯಲ್ಲಿ ಇಂಥ ತಾರತಮ್ಯವನ್ನು ತಾನು ವಿರೋಧ ಮಾಡಿದ್ದರಿಂದ ಕೆಲಸದಿಂದಲೇ ವಜಾ ಮಾಡಲಾಯಿತು ಎಂದು ಜಿಲ್ ಪ್ರೆಜೀನ್ ಹೇಳಿದ್ದಾರೆ.
ಇನ್ಫೋಸಿಸ್ ಕಂಪನಿ, ಮಾಜಿ ಹಿರಿಯ ಉಪಾಧ್ಯಕ್ಷ ಮಾರ್ಕ್ ಲಿವಿಂಗ್‌ಸ್ಟೋನ್, ಇನ್ಫೋಸಿಸ್‌ನ ಮಾಜಿ ಬಿಸಿನೆಸ್ ಪಾರ್ಟ್ನರ್ಸ್ ಡ್ಯಾನ್ ಆಲ್‌ಬ್ರೈಟ್ ಮತ್ತು ಜೆರಿ ಕರ್ಟ್ಜ್ ಅವರು ಈ ಪ್ರಕರಣದಲ್ಲಿ ಆಪಾದಿತರಾಗಿದ್ದಾರೆ.
ಇನ್ಫೋಸಿಸ್‌ನ ಬ್ಯುಸಿನೆಸ್ ಪಾರ್ಟ್ನರ್‌ಗಳಾದ ಡ್ಯಾನ್ ಆಲ್‌ಬ್ರೈಟ್ ಮತ್ತು ಜೆರಿ ಕರ್ಟ್ಜ್ ಅವರು ಕಂಪನಿಯ ಸೀನಿಯರ್ ಹುದ್ದೆಯ ನೇಮಕಾತಿಯಲ್ಲಿ ಇಟ್ಟ ಷರತ್ತುಗಳನ್ನು ತಾನು ಆಕ್ಷೇಪಿಸಿದ ಕಾರಣಕ್ಕೆ ಸಕಾರಣ ಇಲ್ಲದೇ ತನ್ನನ್ನು ಕೆಲಸದಿಂದ ಕಿತ್ತು ಹಾಕಲಾಯಿತು ಎಂದು ಜಿಲ್ ಪ್ರೆಜೀನ್ ಆರೋಪಿಸಿದ್ದಾರೆ.
ಆರ್ಥಿಕ ಹಿಂಜರಿತದ ಅಪಾಯ: ಐಎಂಎಫ್ ನೀಡಿದ ಎಚ್ಚರಿಕೆ
ಆದರೆ, ಜಿಲ್ ಪ್ರೆಜೀನ್‌ರ ಈ ಅರೋಪವನ್ನು ಇನ್ಫೋಸಿಸ್ ಮತ್ತಿತರರು ಬಲವಾಗಿ ನಿರಾಕರಿಸಿದ್ದಾರೆ. ದೂರುದಾರೆ ಸ್ಪಷ್ಟ ಸಾಕ್ಷ್ಯಾಧಾರ ನೀಡದೇ ಇರುವುದರಿಂದ ಕಾನೂನು ಮೊಕದ್ದಮೆಯನ್ನು ವಜಾಗೊಳಿಸಬೇಕೆಂದು ಆರೋಪಿತರು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.

ದೂರುದಾರೆ ಜಿಲ್ ಪ್ರೆಜೀನ್ ಅವರನ್ನು 2018ರಲ್ಲಿ ಅವರ 59ನೇ ವಯಸ್ಸಿನಲ್ಲಿ ಟ್ಯಾಲೆಂಟ್ ಅಕ್ವಿಶಿಶನ್ (ಎಚ್ ಆರ್) ವಿಭಾಗಕ್ಕೆ ಉಪಾಧ್ಯಕ್ಷೆ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇನ್ಫೋಸಿಸ್‌ನ ಕನ್ಸಲ್ಟಿಂಗ್ ಡಿವಿಶನ್‌ನಲ್ಲಿ ಪಾರ್ಟ್ನರ್ಸ್ ಮತ್ತು ಉಪಾಧ್ಯಕ್ಷರಂಥ ಹಿರಿಯ ಎಕ್ಸಿಕ್ಯೂಟಿವ್‌ಗಳ ನೇಮಕಾತಿ ಕಾರ್ಯಕ್ಕಾಗಿ ಜಿಲ್ ಪ್ರೆಜೀನ್ ಅವರನ್ನು ಹೆಚ್ ಆರ್ ಆಗಿ ಮಾಡಲಾಗಿತ್ತು.
ಆದರೆ, ನೇಮಕವಾದ ಬಳಿಕ ಇನ್ಫೋಸಿಸ್‌ನ ಮ್ಯಾನೇಜ್ಮೆಂಟ್‌ನ ವರ್ತನೆ ತನಗೆ ಹಿಡಿಸಲಿಲ್ಲ. ತಾನು ಕೆಲಸಕ್ಕೆ ಸೇರಿದ ಎರಡು ತಿಂಗಳಲ್ಲೇ ಈ ಅಸ್ವಾಭಾವಿಕ ವಾತಾವರಣವನ್ನು ಬದಲಾಯಿಸಲು ಪ್ರಯತ್ನಿಸಿದೆ. ಆದರೆ, ಇನ್ಫೋಸಿಸ್‌ನ ಪಾರ್ಟ್ನರ್‌ಗಳಾದ ಜೆರಿ ಕರ್ಟ್ಜ್ ಮತ್ತು ಡ್ಯಾನ್ ಆಲ್‌ಬ್ರೈಟ್ ಅವರು ಪ್ರತಿರೋಧ ಒಡ್ಡಿದರು ಎಂದು ಜಿಲ್ ಪ್ರೆಜೀನ್ ಹೇಳಿದ್ದಾರೆ.
ಜಿಲ್ ಪ್ರೆಜೀನ್ ಯಾವಾಗ ತಮ್ಮ ಸೂಚನೆ ಪಾಲಿಸಲಿಲ್ಲವೋ ಆಕೆಯ ಅಧಿಕಾರವನ್ನು ಮೊಟಕುಗೊಳಿಸಲು ಕರ್ಟ್ಜ್ ಮತ್ತು ಆಲ್‌ಬ್ರೈಟ್ ಪ್ರಯತ್ನಿಸಿದ್ದರು. ಇದೇ ಕಾರಣಕ್ಕೆ ಪ್ರೆಜೀನ್ ಕೆಲಸ ಕಳೆದುಕೊಳ್ಳಬೇಕಾಯಿತು. ಇನ್ಫೋಸಿಸ್‌ನ ಈ ನೇಮಕಾತಿ ತಾರತಮ್ಯತೆಯು ನ್ಯೂಯಾರ್ಕ್ ನಗರದ ಮಾನವ ಹಕ್ಕು ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಲಾಸ್ಯೂಟ್‌ನಲ್ಲಿ ತಿಳಿಸಲಾಗಿದೆ.
ಜಿಲ್ ಪ್ರೆಜೀನ್ ಹೂಡಿದ ಕಾನೂನು ಮೊಕದ್ದಮೆಯನ್ನು ಕೈಗೆತ್ತಿಕೊಂಡಿರುವ ನ್ಯೂಯಾರ್ಕ್ ಡಿಸ್ಟ್ರಿಕ್ ಕೋರ್ಟ್, ಸೆಪ್ಪೆಂಬರ್ ೩೦ರಂದು ಇರುವ ಆರ್ಡರ್ ಡೇಟ್‌ನಿಂದ 21 ದಿನದೊಳಗೆ ಪ್ರತಿಕ್ರಿಯಿಸಬೇಕೆಂದು ಆಪಾದಿತರಿಗೆ ಆದೇಶಿಸಿರುವುದು ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)