ಚೀನಾದಿಂದ ಇಂಡೋನೇಷ್ಯಾಕ್ಕೆ ಬಂತು 12 ಲಕ್ಷ ಕೊವಿಡ್ ಲಸಿಕೆ

ಜಕಾರ್ತಾ, ಡಿಸೆಂಬರ್ 07: ಚೀನಾದಿಂದ ಇಂಡೋನೇಷ್ಯಾಕ್ಕೆ ಮೊದಲ ಹಂತದಲ್ಲಿ 12 ಕೊರೊನಾ ಲಸಿಕೆ ರವಾನೆಯಾಗಿದೆ.

ಚೀನಾ ಮೂಲದ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಸಿನೋವಾಕ್ ಅಭಿವೃದ್ಧಿಪಡಿಸಿರುವ ಲಸಿಕೆ ಇದಾಗಿದೆ. ಕೊವಿಡ್ ಲಸಿಕೆ 12 ಲಕ್ಷ ಡೋಸ್‌ಗಳು ಭಾನುವಾರ ಇಂಡೋನೇಷ್ಯಾಗೆ ಸೇರ್ಪಡೆಯಾಗಿದೆ.

ಲಸಿಕೆ ಲಭ್ಯವಾಗಿರುವುದರಿಂದ ದೇಶದಲ್ಲಿ ರೋಗ ಹರಡುವಿಕೆಯನ್ನು ಶೀಘ್ರವೇ ನಿಯಂತ್ರಿಸಬಹುದಾಗಿದೆ ಎಂದು ಅಧ್ಯಕ್ಷ ಜೊಕೊ ವೊಡೋಡೊ ತಿಳಿಸಿದ್ದಾರೆ.

 Indonesia Receives 1.2 Million COVID-19 Vaccine From China

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಇನ್ನೂ 18 ಲಕ್ಷ ಲಸಿಕೆಗಳು ಜನವರಿ ಆರಂಭದಲ್ಲಿ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಇಂಡೋನೇಷ್ಯಾ ಈಗಾಗಲೇ ಸಿನೋವಾಕ್ ಸಂಸ್ಥೆಯೊಂದಿಗೆ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ಸಹಕರಿಸುತ್ತಿದೆ.

ಆಗಸ್ಟ್‌ನಿಂದ ಪಶ್ಚಿಮ ಜಾವಾದ ಬಂಡುಂಗ್ ನಗರದಲ್ಲಿ 1620 ಸ್ವಯಂಸೇವಕರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ. ಚೀನಾದ ಇತರೆ ಔಷಧ ತಯಾರಕರಾದ ಸಿನೊಫಾರ್ಮ್ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್‌ನ ಸಹಭಾಗಿತ್ವವನ್ನು ಸರ್ಕಾರ ಪರಿಶೀಲಿಸಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸಾಮೂಹಿಕ ಲಸಿಕೆ ವಿತರಣೆ ಪ್ರಕ್ರಿಯೆ ಪ್ರಾರಂಭಿಸಲು ರಾಷ್ಟ್ರೀಯ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರದಿಂದ ತುರ್ತು ಬಳಕೆಯ ದೃಢೀಕರಣದ ಅನುಮತಿ ಅಗತ್ಯವಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+