Get Updates
Get notified of breaking news, exclusive insights, and must-see stories!

Breaking: ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಡಾ. ಕೆ ಸುಬ್ರಮಣಿಯನ್ ನೇಮಕ

ನವದೆಹಲಿ, ಆಗಸ್ಟ್ 25: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಾರತದ ಡಾ. ಕೆ ಸುಬ್ರಮಣಿಯನನ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

Indias Dr K Subramanian appointed as Executive Director at IMF

ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ ಕೆ ಸುಬ್ರಮಣಿಯನ್ ಅವರು ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೂ ಐಎಂಎಪ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಕೆವಿ ಸುಬ್ರಮಣಿಯನ್ ಅಧಿಕಾರಾವಧಿಯು ನವೆಂಬರ್‌ನಿಂದ ಪ್ರಾರಂಭವಾಗುತ್ತದೆ. ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶಗಳವರೆಗೆ ಮುಂದುವರಿಯುತ್ತದೆ. ಇದಕ್ಕೂ ಪೂರ್ವದಲ್ಲಿ ಅಂದರೆ 31 ಅಕ್ಟೋಬರ್, 2022 ರವರೆಗೆ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಸುರ್ಜಿತ್ ಎಸ್ ಭಲ್ಲಾ ಅವರ ಅಕಾಲಿಕ ಮರಣದಿಂದ ಅಧಿಕಾರಾವಧಿ ಮೊಟಕುಗೊಂಡಿತು.

ಕಳೆದ 2019ರಲ್ಲಿ ಭಲ್ಲಾ ಅವರನ್ನು IMF ಮಂಡಳಿಯಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಯಿತು. ಆದರೆ ಅವರು ಅನಾರೋಗ್ಯದಿಂದ ಜುಲೈ 30ರಂದು USನಲ್ಲಿ ನಿಧನರಾದರು. ತದನಂತರದಲ್ಲಿ RBI ಮಾಜಿ ಡೆಪ್ಯೂಟಿ ಗವರ್ನರ್ ಸುಬೀರ್ ಗೋಕರ್ನ್ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಮೂರು ವರ್ಷಗಳ ಅವಧಿಗೆ ನೇಮಕ:
"ಸಚಿವ ಸಂಪುಟದ ನೇಮಕಾತಿ ಸಮಿತಿಯು ಪ್ರೊಫೆಸರ್ (ಹಣಕಾಸು) ಡಾ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ನೇಮಕಾತಿಯನ್ನು ಅನುಮೋದಿಸಿದೆ. ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ (ಭಾರತ) ಹುದ್ದೆಗೆ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರನ್ನು ನೇಮಿಸಲಾಗಿದೆ. 2022ರ ನವೆಂಬರ್ 1 ರಿಂದ ಇವರ ಸೇವಾವಧಿ ಪ್ರಾರಂಭವಾಗಲಿದೆ. ಅಲ್ಲಿಂದ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೂ ಇವರು ಅಧಿಕಾರದಲ್ಲಿ ಇರಲಿದ್ದಾರೆ," ಎಂದು ಉಲ್ಲೇಖಿಸಲಾಗಿದೆ.

ಸುಬ್ರಮಣಿಯನ್ 2021ರಲ್ಲಿ 3 ವರ್ಷಗಳ ಅಧಿಕಾರಾವಧಿಯ ನಂತರ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ತದನಂತರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ಸರ್ಕಾರವು ಡಿಸೆಂಬರ್ 2018 ರಲ್ಲಿ ISB ಹೈದರಾಬಾದ್ ಪ್ರಾಧ್ಯಾಪಕರಾದ ಸುಬ್ರಮಣಿಯನ್ ಅವರನ್ನು CEA ಆಗಿ ನೇಮಿಸಿತ್ತು. ಅವರು ಅರವಿಂದ್ ಸುಬ್ರಮಣ್ಯನ್ ಉತ್ತರಾಧಿಕಾರಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+