ದುಬೈನಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಲಾಟರಿ ಗೆದ್ದ ಸಂದೀಪ್ ಮೆನನ್
ದುಬೈ, ಆಗಸ್ಟ್ 1: ಲಾಟರಿ ಹೊಡೆಯೋದು ಅಂದರೆ ಹೀಗಿರಬೇಕು ನೋಡಿ. ಈ ಮಾತನ್ನು ಪಾಸಿಟಿವ್ ತಗೊಳ್ಳಿ. ಏಕೆಂದರೆ, ದುಬೈನಲ್ಲಿ ಭಾರತೀಯರೊಬ್ಬರಿಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಲಾಟರಿ ಮೊತ್ತ ಬಂದಿದೆ. ಅದು ದುಬೈನ ಡ್ಯೂಟಿ ಫ್ರೀ ಲಾಟರಿಯಿಂದ.
ಜುಲೈ 31ರ ಮಂಗಳವಾರದಂದು ಕುವೈತ್ ನ ಸಂದೀಪ್ ಮೆನನ್ ಪಾಲಿಗೆ ಮರೆಯಲಾಗದ ಮಂಗಳ ತಂದ ದಿನವಾಗಿದೆ. ಈ ಲಾಟರಿ ಆರಂಭವಾದದ್ದು 1999ರಲ್ಲಿ. ಅಲ್ಲಿಂದ ಈವರೆಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಗಳಿಸಿದ ಭಾರತೀಯರ ಪೈಕಿ ಈ ಸಂದೀಪ್ ಮೆನನ್ 132ನೆಯವರು.
"ನನ್ನ ಜೀವನದಲ್ಲಿ ಏನನ್ನೂ ಗೆದ್ದಿಲ್ಲ. ಅದರಲ್ಲೂ ಇಷ್ಟು ದೊಡ್ಡದು ಗೆದ್ದೇ ಇಲ್ಲ ಬಿಡಿ. ಈ ಅಚ್ಚರಿ ನೀಡಿದ್ದಕ್ಕೆ ದುಬೈ ಡ್ಯೂಟಿ ಫ್ರೀನವರಿಗೆ ನಾನು ಆಭಾರಿ" ಎಂದು ಸಂದೀಪ್ ಮೆನನ್ ಹೇಳಿದ್ದಾರೆ.

ಇನ್ನು ಭಾರತೀಯ ಮೂಲಕ ಯುಎಇಯಲ್ಲಿರುವ ಸಂತಿ ಬೋಸ್ ಬಿಎಂಡಬ್ಲ್ಯು ದುಬಾರಿ ಬೈಕ್ ಗೆದ್ದಿದ್ದಾರೆ. ಮತ್ತೊಬ್ಬರು ಈಜಿಪ್ಟ್ ಮೂಲದ ಹೊಸಮ್ ಹುಸೇನ್ ಸಲ್ಮಾನ್ ಎಂಬುವವರು ಕೂಡ ವಿಲಾಸಿ ವಾಹನ ಗೆದ್ದಿದ್ದಾರೆ.
ಅಬುಧಾಬಿ ಹಾಗೂ ದುಬೈನಲ್ಲಿ ನಡೆಯುವ ಇಷ್ಟು ದೊಡ್ಡ ಮೊತ್ತದ ಲಾಟರಿ ಡ್ರಾನಲ್ಲಿ ಈ ವರೆಗೆ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಹುಮಾನ ಗೆದ್ದುಕೊಂಡಿದ್ದಾರೆ.












Click it and Unblock the Notifications