ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊರೆಂಟೊದಲ್ಲಿ ಭಾರತೀಯ ವಿದ್ಯಾರ್ಥಿ ಕಾರ್ತಿಕ್ ಹತ್ಯೆ; ಸಹಾಯ ಮಾಡುತ್ತಿಲ್ಲ ಸರ್ಕಾರ ಎಂದ ಕುಟುಂಬ

|
Google Oneindia Kannada News

ನವದೆಹಲಿ, ಏಪ್ರಿಲ್ 9: ಟೊರೊಂಟೊದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತ ಮೃತಪಟ್ಟು 48 ಗಂಟೆಗಳು ಕಳೆದರೂ ಕೆನಡಾ ಅಥವಾ ಭಾರತ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಕೆನಡಾಕ್ಕೆ ಪ್ರಯಾಣಿಸಲು ಅಗತ್ಯವಾಗಿರುವ ವೀಸಾ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಈ ಪ್ರಕರಣವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಶಂಕಿಸಿದ್ದಾರೆ.

ಟೊರೊ೦ಟೊದಲ್ಲಿ ಪುರ೦ದರ ಆರಾಧನೆಟೊರೊ೦ಟೊದಲ್ಲಿ ಪುರ೦ದರ ಆರಾಧನೆ

ಕಾರ್ತಿಕ್ ವಾಸುದೇವ್ ಅವರ ತಂದೆ ಜೈಶಂಕರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ "ಭಾರತ ಸರ್ಕಾರದಿಂದ ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಿದ್ದಾರೆ. ಇದರ ಮಧ್ಯೆ 21 ವರ್ಷದ ಕಾರ್ತಿಕ್ ಹತ್ಯೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಂತಾಪ ಸೂಚಿಸಿದ್ದಾರೆ.

Indian student shot dead in Toronto; Family members allege no assistance by indian government
ಏಪ್ರಿಲ್ 7ರಂದು ನಡೆದಿರುವ ಕಾರ್ತಿಕ್ ವಾಸುದೇವ್ ಹತ್ಯೆ:
ಕಳೆದ ಏಪ್ರಿಲ್ 7ರ ಸಂಜೆ ಟೊರೊಂಟೊದ ಸ್ಥಳೀಯ ಸುರಂಗಮಾರ್ಗ ನಿಲ್ದಾಣದಲ್ಲಿ ಶೂಟಿಂಗ್ ನಡೆದಿರುವ ಕುರಿತು ರೇಡಿಯೊ ಕರೆಗೆ ಪೊಲೀಸರು ಪ್ರತಿಕ್ರಿಯಿಸಿದರು. ಕಾರ್ತಿಕ್ ವಾಸುದೇವ್ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ಟೊರೊಂಟೊದ ಸುರಂಗಮಾರ್ಗ ನಿಲ್ದಾಣದ ಪ್ರವೇಶದ್ವಾರದ ಬಳಿ ಗುಂಡು ಹಾರಿಸಲಾಗಿತ್ತು. "ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಸ್ಥಳದಲ್ಲೇ ಕರ್ತವ್ಯನಿರತ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ತದನಂತರದ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಶಸ್ವಿಯಾಗದೇ ಕಾರ್ತಿಕ್ ವಾಸುದೇವ್ ಮೃತಪಟ್ಟಿದ್ದಾರೆ," ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ತಿಕ್ ವಾಸುದೇವನ್ ಸಾವಿನ ಬಗ್ಗೆ ಸಂತಾಪ:
ಟೊರೊಂಟೊದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಗುಂಡು ತಗುಲಿ ಸಾವನ್ನಪ್ಪಿದ ದಾರುಣ ಘಟನೆಯಿಂದ ದುಃಖಿತನಾಗಿದ್ದೇನೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದರು.
ಟೊರೊಂಟೊದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮುಖ್ಯಸ್ಥರು ಟ್ವೀಟ್‌ನಲ್ಲಿ ಗುರುವಾರ "ಟೊರೊಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಕಾರ್ತಿಕ್ ವಾಸುದೇವ್ ಅವರ ದುರದೃಷ್ಟಕರ ಹತ್ಯೆಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ," ಎಂದು ಹೇಳಿದ್ದಾರೆ. "ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಮೃತದೇಹವನ್ನು ರವಾನಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲ ಸಹಾಯವನ್ನು ಒದಗಿಸುತ್ತೇವೆ," ಎಂದಿದ್ದಾರೆ.

ಟೊರೆಂಟೊದಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು:
ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಯಾರಿದ್ದರು ಎಂಬುದರ ಕುರಿತು ಪೊಲೀಸರು ಚುರುಕಿನ ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿದ್ದ ಚಾಲಕರು, ವ್ಯಾಪಾರಿಗಳು ಹಾಗೂ ಸಾಕ್ಷಿಗಳನ್ನು ಹುಡುಕುತ್ತಿದ್ದು, ಹಾಗೆಯೇ ಕ್ಯಾಮೆರಾ ದೃಶ್ಯಗಳನ್ನು ಕಲೆ ಹಾಕಲಾಗುತ್ತಿದೆ.

2022ರ ಜನವರಿಯಲ್ಲಿ ಕೆನಡಾಕ್ಕೆ ತೆರಳಿದ್ದ ಕಾರ್ತಿಕ್:
ಇದೇ 2022ರ ಜನವರಿ ತಿಂಗಳಿನಲ್ಲಷ್ಟೇ ಕಾರ್ತಿಕ್ ವಾಸುದೇವ್ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವುದಕ್ಕಾಗಿ ಕೆನಡಾಕ್ಕೆ ತೆರಳಿಸಿದ್ದರು. ಕೆನಡಾದ ಟೊರೊಂಟೊದಲ್ಲಿರುವ ಮೆಕ್ಸಿಕನ್ ರೆಸ್ಟೋರೆಂಟ್‌ಗೆ ಕೆಲಸ ಮಾಡಲು ಹೋಗುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅವರು ಕೊನೆಯದಾಗಿ ಗುರುವಾರ ತಮ್ಮ ಪೋಷಕರೊಂದಿಗೆ ಮಾತನಾಡಿದರು, ನಂತರ ಅವರು ಕೆಲಸಕ್ಕೆ ಹೋದರು, ಅವರು ಎರಡು ವಾರಗಳ ಹಿಂದೆ ಅರೆಕಾಲಿಕ ಉದ್ಯೋಗಕ್ಕೆ ಸೇರಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಟೊರೆಂಟೊದಲ್ಲಿ ನಾಲ್ಕು ತಿಂಗಳಿನಲ್ಲಿ 19ನೇ ಹತ್ಯೆ:
ಕಳೆದ ಏಪ್ರಿಲ್ 8 ರಂದು, ಟೊರೊಂಟೊ ಪೋಲೀಸ್ ತನ್ನ ಸುದ್ದಿ ಬಿಡುಗಡೆಯಲ್ಲಿ ಕಾರ್ತಿಕ್ ಹತ್ಯೆಯು ಈ ವರ್ಷ ನಗರದಲ್ಲಿ ನಡೆದ 19ನೇ ನರಹತ್ಯೆ ಎಂದು ಹೇಳಿಕೊಂಡಿದೆ. ಅಲ್ಲಿನ ಪೊಲೀಸರು ಪ್ರಕರಣದ ತನಿಖೆಗೆ ಸಹಾಯ ಮಾಡುವಂತೆ ಪ್ರತ್ಯಕ್ಷದರ್ಶಿಗಳನ್ನು ಕೋರಿದ್ದಾರೆ. ಆದಾಗ್ಯೂ, ಟೊರೊಂಟೊದಿಂದ ಕೆಲವು ಸುದ್ದಿ ವರದಿಗಳು ಘಟನೆಯು ದರೋಡೆಯ ಪ್ರಯತ್ನ ಎಂದು ಸೂಚಿಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎನ್ನಲಾಗುತ್ತಿದೆ.

English summary
Indian student shot dead in Toronto; Family members allege no assistance by indian government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X