ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿನಿಯನ್ನು ಸಜೀವ ಸಮಾಧಿ ಮಾಡಿದ ಬಾಯ್‌ಫ್ರೆಂಡ್‌: ಸೇಡಿನ ಕೃತ್ಯದ ಫುಲ್‌ ಡಿಟೇಲ್ಸ್‌

ಸಿಡ್ನಿ, ಜುಲೈ 06: 21 ವಯಸ್ಸಿನ ಭಾರತ ಮೂಲಕ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಸ್ಟ್ರೇಲಿಯಾದಲ್ಲಿ ಸಜೀವ ಸಮಾಧಿ ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ವಾಸಸ್ಥಳದಿಂದ ಸುಮಾರು 650 ಕಿಲೋಮೀಟರ್ ದೂರವಿರುವ ದಕ್ಷಿಣ ಆಸ್ಟ್ರೇಲಿಯಾದ ರಿಮೋಟ್ ಫ್ಲಿಂಡರ್ಸ್ ಪ್ರದೇಶದಲ್ಲಿ ವಿದ್ಯಾರ್ಥಿನಿಯನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಅಡಿಲೇಡ್ ಸಿಟಿಯಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಜಾಸ್ಮೀನ್ ಕೌರ್ ಅವರನ್ನು ಬಾಯ್‌ಫ್ರೆಂಡ್‌ ತಾರಿಕ್ಜೋತ್ ಸಿಂಗ್ ಜೀವಂತ ಸಮಾಧಿ ಮಾಡಿದ್ದಾನೆ. ಮಾರ್ಚ್ 2021 ರಲ್ಲಿ ತಾರಿಕ್ಜೋತ್ ಸಿಂಗ್ ವಿರುದ್ಧ ಜಾಸ್ಮೀನ್ ಕೌರ್ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಇದರ ಸೇಡಿಗಾಗಿ ತಾರಿಕ್ಜೋತ್ ಸಿಂಗ್ ಈ ರೀತಿಯ ಹೀನಾಯ ಪ್ರಮಾದವನ್ನು ಎಸಗಿದ್ದಾನೆ ಎಂದು ತಿಳಿದುಬಂದಿದೆ.

Indian student in Australia buried alive by boyfriend: details are here

ಮಾರ್ಚ್ 5, 2021 ರಂದು ಕೌರ್ ತನ್ನ ಕೆಲಸದ ಸ್ಥಳದಿಂದ ಅಪಹರಿಸಲ್ಪಟ್ಟಳು. 400 ಮೈಲಿ (644 ಕಿಮೀ) ಗಿಂತ ಹೆಚ್ಚು ದೂರ ಆಕೆಯನ್ನು ಕರೆದುಕೊಂಡು ಹೋಗಲಾಯಿತು. ತನ್ನ ಫ್ಲಾಟ್‌ಮೇಟ್‌ನಿಂದ ಎರವಲು ಪಡೆದ ಕಾರಿನಲ್ಲಿ ಸಿಂಗ್‌ ಆಕೆಯನ್ನು ಅಪಹರಿಸಿದ್ದನೆಂದು ಹೇಳಲಾಗಿದೆ.

ಜಾಸ್ಮೀನ್‌ ಅವರನ್ನು ಕಾರಿನಲ್ಲಿ ತುಂಬಿಕೊಂಡು ಆಕೆಗೆ ಚಿತ್ರಹಿಂಸೆ ನೀಡಿದ್ದನೆಂಬ ಮಾಹಿತಿ ಬೆಳಕಿಗೆ ಬಂದಿದೆ.

ಕೌರ್‌ಳನ್ನು ಜೀವಂತವಾಗಿಯೇ ಮರಕ್ಕೆ ಕಟ್ಟಿದ್ದ. ಆ ನಂತರ ಸಮಾಧಿಯನ್ನು ತೋಡಿದ್ದ. ಆಕೆಯನ್ನು ವೈರುಗಳಿಂದ ಬಿಗಿಯಾಗಿ ಕಟ್ಟಿ ಸಮಾಧಿಗೆ ದೂಡಿದ್ದ. ಆಕೆ ಮೇಲೆಳದಂತೆ ಕೈಕಾಲುಗಳನ್ನು ಗಟ್ಟಿಯಾಗಿ ಕಟ್ಟಿ ಸಮಾಧಿಗೆ ನೂಕಿದ್ದ. ಆ ನಂತರ ಆಕೆಯನ್ನು ಮಣ್ಣಿನಿಂದ ಮುಚ್ಚಿದ್ದನೆಂಬ ಮಾಹಿತಿ ಲಭ್ಯವಾಗಿದೆ.

ಈ ಕೃತ್ಯವನ್ನು ತಾನೊಬ್ಬನೇ ಮಾಡಿ ಮುಗಿಸಿದ್ದಾಗಿ ಸಿಂಗ್‌ ತಪ್ಪೊಪ್ಪಿಕೊಂಡಿದ್ದಾನೆ. ಈ ಪ್ರಕಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಅಪರಾಧದ ಭಯಾನಕ ವಿವರಗಳು ಬೆಳಕಿಗೆ ಬಂದಿವೆ.

Indian student in Australia buried alive by boyfriend: details are here

ವಾದ ಮಂಡಿಸಿದ ಪ್ರಾಸಿಕ್ಯೂಟರ್ ಕಾರ್ಮೆನ್ ಮ್ಯಾಟಿಯೊ , ಅಪರಾಧಿ ತನ್ನ ಗರ್ಲ್‌ಫ್ರೆಂಡ್‌ಳನ್ನು ಕೊಲ್ಲುವುದಕ್ಕೂ ಮುಂಚಿತವಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ಇದು ಸೇಡಿನ ಕೃತ್ಯವಾಗಿದೆ ಎಂದು ಹೇಳಿದ್ದಾರೆ.

'ಮಣ್ಣನ್ನು ಉಸಿರಾಡುತ್ತಾ, ನುಂಗುತ್ತಾ ಸಾಯುವುದು ದುರಂತವೇ ಸರಿ. ಆ ರೀತಿಯಲ್ಲಿ ಸಾಯಿಸುವುದು ಪೂರ್ಣ ಪ್ರಮಾಣದ ಭಯೋತ್ಪಾದನೆ' ಎಂದು ಮ್ಯಾಟಿಯೊ ಅಭಿಪ್ರಾಯಪಟ್ಟಿದ್ದಾರೆ.

ಕೌರ್ ಅವರ ತಾಯಿ ಸೇರಿದಂತೆ ಕುಟುಂಬದವರು ಶಿಕ್ಷೆಯ ಪ್ರಮಾಣವನ್ನು ಆಲಿಸಲು ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ಪ್ರೇಮ ಸಂಬಂಧದ ಒಡಕಿನ ನೋವಿನಿಂದ ಹೊರಬರಲು ಸಾಧ್ಯವಾಗದ ಕಾರಣ ಸಿಂಗ್ ಹತ್ಯೆಯನ್ನು ಯೋಜಿಸಿದ್ದನೆಂದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

'ಕೌರ್ ಅವರ ಕೊಲೆಯು ಅಸಾಮಾನ್ಯ ಕ್ರೌರ್ಯವನ್ನು ಒಳಗೊಂಡಿದೆ' ಎಂದು ಮ್ಯಾಟಿಯೊ ಹೇಳಿದ್ದಾರೆ.

'ಅವಳ ಗಂಟಲನ್ನು ಯಾವಾಗ ಕತ್ತರಿಸಲಾಯಿತು ಎಂಬುದು ತಿಳಿದಿಲ್ಲ. ಅವಳು ಯಾವಾಗ ಅಥವಾ ಹೇಗೆ ಆ ಸಮಾಧಿಗೆ ಪ್ರವೇಶಿಸಿದಳು ಎಂಬುದು ತಿಳಿದಿಲ್ಲ' ಎಂದು ಪ್ರಾಸಿಕ್ಯುಟರ್‌ ತಿಳಿಸಿದ್ದಾರೆ.

'ಇದು ಪ್ರತೀಕಾರ ಅಥವಾ ಸೇಡಿಗಾಗಿ ಮಾಡಿದ ಕೊಲೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸಿಂಗ್ ಆರಂಭದಲ್ಲಿ ಕೊಲೆಯನ್ನು ನಿರಾಕರಿಸಿದ್ದ. ಕೌರ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಿದ್ದ. ಆದರೆ ಈ ವರ್ಷದ ಆರಂಭದಲ್ಲಿ ವಿಚಾರಣೆಗೆ ಹಾಜರಾಗುವ ಮೊದಲು ತಪ್ಪೊಪ್ಪಿಕೊಂಡಿದ್ದನೆಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+