ಪ್ರಧಾನಿ ಮೋದಿ ಮಾಡಿದ ಈ ಸಾಧನೆ ಯಾರೂ ಮಾಡಲು ಆಗಲ್ಲ!
ಪ್ರಧಾನಿ ಮೋದಿಗೆ ಜಗತ್ತಿನಾದ್ಯಂತ ಬೆಂಬಲಿಗರು ಇದ್ದಾರೆ. ಅದ್ರಲ್ಲಿ ಸೋಷಿಯಲ್ ಮೀಡಿಯಾ ತುಂಬಾ ಪಿಎಂ ಮೋದಿ ಅವರ ಅಭಿಮಾನಿಗಳು ತುಂಬಿ ಹೋಗಿದ್ದಾರೆ. ಫೇಸ್‌ಬುಕ್ ಮತ್ತು ಟ್ವಿಟ್ಟರ್ ಮಾತ್ರವಲ್ಲ, ಮತ್ತೊಂದು ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಕೂಡ ಈಗ ಪ್ರಧಾನಿ ಮೋದಿ ಇತಿಹಾಸ ಬರೆದಿದ್ದಾರೆ. ಹಾಗಾದರೆ ಯಾವುದು ಆ ವೇದಿಕೆ? ಪಿಎಂ ಮೋದಿ, ಈಗ ಬರೆದಿರುವ ಹೊಸ ದಾಖಲೆ ಏನು?
ಹೌದು, ಪ್ರಧಾನಿ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ನಂತರ ಮೊದಲು ಮಾಡಿದ್ದ ಕೆಲಸ ಅಂದ್ರೆ ಜನರಿಗೆ ಹತ್ತಿರವಾಗುವುದು. ಅದ್ರಲ್ಲೂ ತಮ್ಮ ವಿಶೇಷ ಯೋಜನೆ ಮೂಲಕ ಸಾಮಾನ್ಯ ಜನರ ಸಮಸ್ಯೆಗಳನ್ನ ಆಲಿಸುತ್ತಾ, ಪ್ರಧಾನಿ ಮೋದಿ ಅವರು ಒಂದು ಹೆಜ್ಜೆಯನ್ನು ಮುಂದಿಟ್ಟರು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಬೆಂಬಲಿಗರು ಈಗ ಪ್ರಧಾನಿ ಮೋದಿ ಅವರನ್ನ ಫಾಲೋ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಅವರ ಯುಟ್ಯೂಬ್ ಖಾತೆ ಕೂಡ ಹೊಸ ದಾಖಲೆ ನಿರ್ಮಿಸಿದೆ.

ಪ್ರಧಾನಿ ಮೋದಿ ಹೊಸ ದಾಖಲೆ!
ಹೌದು, ಪಿಎಂ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ಹೀಗಾಗಿ ಅವರ ಅಧಿಕೃತ ಯುಟ್ಯೂಬ್ ಚಾನೆಲ್ ಹೊಸ ದಾಖಲೆ ಬರೆದಿದೆ. 2 ಕೋಟಿ ಚಂದಾದಾರರು ಈಗ ಪ್ರಧಾನಿ ಮೋದಿ ಅವರ ಯುಟ್ಯೂಬ್ ಚಾನೆಲ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ 20 ಮಿಲಿಯನ್ ಸಬ್‌ಸ್ಕ್ರೈಬರ್ಸ್ ತಲುಪಿದ ಜಗತ್ತಿನ ಏಕೈಕ ನಾಯಕ ಪ್ರಧಾನಿ ಮೋದಿ ಎಂಬ ದಾಖಲೆ ಸೃಷ್ಟಿಯಾಗಿದೆ. ಜೊತೆಗೆ ವೀಕ್ಷಣೆ ವಿಚಾರದಲ್ಲಿ ಕೂಡ, ಪ್ರಧಾನಿ ಮೋದಿ ಅವರ ಯುಟ್ಯೂಬ್ ಚಾನೆಲ್ ಹೊಸ ದಾಖಲೆ ಬರೆದಿದೆ.
ಒಟ್ಟು 450 ಕೋಟಿ ವೀವ್ಸ್!
ಇಡೀ ಜಗತ್ತಿನಲ್ಲೇ ಪ್ರಧಾನಿ ಮೋದಿ ಅವರ ಯುಟ್ಯೂಬ್ ಚಾನೆಲ್ ವೈವಿಧ್ಯಮಯ ವಿಷಯ ಒಳಗೊಂಡಿದೆ. ಚಂದಾದಾರರ ಸಂಖ್ಯೆ & ವಿಡಿಯೋ ವೀವ್ಸ್ ಪ್ರಮಾಣದಲ್ಲಿ ಮಹತ್ವದ ಸಾಧನೆ ಮಾಡಿದೆ ಪ್ರಧಾನಿ ಮೋದಿ ಅವರ ಯುಟ್ಯೂಬ್ ಚಾನೆಲ್. ಭಾರತದ ರಾಜಕಾರಣಿಗಳನ್ನು ಮಾತ್ರವಲ್ಲ ಜಗತ್ತಿನ ಎಲ್ಲಾ ನಾಯಕರ ಸಾಧನೆ ಮೀರಿಸಿದ್ದಾರೆ ಪಿಎಂ ಮೋದಿ. 2 ಕೋಟಿ ಚಂದಾದಾರರ ಜೊತೆಗೆ 4.5 ಬಿಲಿಯನ್ ಅಂದ್ರೆ 450 ಕೋಟಿ ವೀವ್ಸ್ ಕೂಡ ಪಡೆದಿದೆ.

ಎಷ್ಟು ವಿಡಿಯೋ ಅಪ್‌ಲೋಡ್?
ಒಟ್ಟಾರೆ 23,000 ವಿಡಿಯೋ ಪ್ರಧಾನಿ ಮೋದಿ ಅವರ ಯುಟ್ಯೂಬ್ ಚಾನೆಲ್ ಮೂಲಕ, ಅಪ್‌ಲೋಡ್ ಮಾಡಲಾಗಿದೆ. ಪಿಎಂ ಮೋದಿ ಅವರ ಯೂಟ್ಯೂಬ್ ಚಾನೆಲ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ಚಾನೆಲ್‌ಗಿಂತ 43 ಪಟ್ಟು ಹೆಚ್ಚು ವೀಕ್ಷಣೆ ಪಡೆದಿದೆ. ಈ ಮೂಲಕ ಯಾರು ಈವರೆಗೆ ಮಾಡಲಾಗದ ಸಾಧನೆ ಮಾಡಿದೆ ಪಿಎಂ ಮೋದಿ ಅವರ ಯುಟ್ಯೂಬ್ ಚಾನೆಲ್. ಹಾಗೇ ದಿನದಿಂದ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಯುಟ್ಯೂಬ್ ಚಾನೆಲ್‌ಗೆ ಸೇರ್ಪಡೆ ಆಗುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.











Click it and Unblock the Notifications