Rishi Sunak UK PM : ರಿಷಿ ಸುನಕ್ ಯುಕೆ ಹೊಸ ಪ್ರಧಾನಿ

ಲಂಡನ್‌, ಅ. 24: ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆ ಕಣದಿಂದ ಹೊರಗುಳಿದ ನಂತರ ಭಾರತೀಯ ಮೂಲದ ರಿಷಿ ಸುನಕ್ ಯುಕೆಯ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ರಿಷಿ ಸುನಕ್ ಮೊದಲ ಭಾರತೀಯ ಮೂಲದ ವ್ಯಕ್ತಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದವರಾಗಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ಗೆ ಮೊದಲ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರನ್ನು ಪ್ರಧಾನಿಯಾಗಿಸಬಹುದು ಎಂದು ಮಾತುಗಳು ಈ ಹಿಂದೆಯೇ ಕೇಳಿಬಂದಿದ್ದವು.

Indian-origin Rishi Sunak Is New PM of UK

ಆಡಳಿತ ಕನ್ಸರ್ವೇಟಿವ್ ಪಕ್ಷವು ಅಪಾರ ಆರ್ಥಿಕ ಸವಾಲುಗಳ ಸಮಯದಲ್ಲಿ ಮತ್ತು ಹಿಂದಿನ ಇಬ್ಬರು ನಾಯಕರ ಆಡಳಿತದಲ್ಲಿ ನಡೆದ ಅವ್ಯವಸ್ಥೆಯ ನಂತರ ಸ್ಥಿರತೆಯನ್ನು ಬಯಸಿದ್ದು, ಏಳು ತಿಂಗಳಲ್ಲಿ ರಿಷಿ ಸುನಕ್ ಮೂರನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ತನಗೆ ಅಗತ್ಯವಾದ ಬೆಂಬಲವಿದೆ ಎಂದು ಹೇಳಿಕೊಂಡಿದ್ದರೂ, ಪಕ್ಷದ ನಾಯಕತ್ವದ ಸ್ಪರ್ಧೆಯಿಂದ ತಾವಾಗಿಯೇ ಹೊರ ನಡೆದಿದ್ದರು. ಮಾಜಿ ಬಾಸ್ ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೊರ್ಡಾಂಟ್ ಅವರು ಚುನಾವಣೆಯಲ್ಲಿ ನಿಲ್ಲಲು ಬೇಕಾದ 100 ಸಂಸದರ ಬೆಂಬಲವನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ.

ರಿಷಿ ಸುನಕ್ ಅವರು ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಯಾರ್ಕ್‌ಷೈರ್‌ನಿಂದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗೆ ಭಗವದ್ಗೀತೆಯ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದ ಮೊದಲ ಯುಕೆ ಸಂಸದರಾಗಿದ್ದರು. ಬೋರಿಸ್ ಜಾನ್ಸನ್ ಅವರ ನಾಯಕತ್ವದಲ್ಲಿ ಖಜಾನೆಯ ಚಾನ್ಸೆಲರ್ ಆಗಿದ್ದರು.

ರಿಷಿ ಸುನಕ್ ಅವರ ತಂದೆ ತಾಯಿಯರಿಬ್ಬರೂ ಭಾರತೀಯ ಮೂಲದವರು. ಸುನಕ್ ಅವರ ಪೋಷಕರು 1960 ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದಿದ್ದರು.

ರಿಷಿ ಸುನಕ್ ಅವರು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡುತ್ತಾರೆ.

2022 ರ ಬೇಸಿಗೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಯ ಪ್ರಚಾರದ ಸಮಯದಲ್ಲಿ, ರಿಷಿ ಸುನಕ್ ಅವರ ಅದ್ದೂರಿ ಮನೆ, ದುಬಾರಿ ಸೂಟುಗಳು ಮತ್ತು ಬೂಟುಗಳು ಸೇರಿದಂತೆ ಹಲವು ವಿಷಯಗಳಲ್ಲಿ ಟೀಕೆಗಳನ್ನು ಎದುರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+