• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಟನ್ನಿನ ಪ್ರಭಾವಿ ಹುದ್ದೆಗೆ ಭಾರತೀಯ ಸಂಜಾತೆ

|

ಬ್ರಿಟನ್, ಜುಲೈ 25: ಬ್ರಿಟನ್‌ಗೆ ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ನೇಮಕವಾದ ಬೆನ್ನಲ್ಲೇ, ಅಲ್ಲಿಯ ಸರ್ಕಾರದ ಪ್ರಮುಖ ಎರಡು ಹುದ್ದೆಗಳನ್ನು ಪಾಕಿಸ್ತಾನ ಹಾಗೂ ಭಾರತ ಮೂಲದ ಇಬ್ಬರು ಅಲಂಕರಿಸಿದ್ದಾರೆ.

ಭಾರತೀಯ ಮೂಲದ ಪ್ರೀತಿ ಪಟೇಲ್ ನೂತನ ಸರ್ಕಾರದ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದರೆ, ಪಾಕಿಸ್ತಾನದ ಸವೀದ್ ಜಾವೇದ್ ಹಣಕಾಸು ಸಚಿವರಾಗಿ ನೇಮಕವಾಗಿದ್ದಾರೆ. ಭಾರತ, ಪಾಕಿಸ್ತಾನ ಹಾಗೂ ಬ್ರಿಟನ್ ನಡುವಿನ ಆಂತರಿಕ ಸಂಬಂಧಗಳ ದೃಷ್ಟಿಯಲ್ಲಿ ನೇಮಕಾತಿಗಳು ಪ್ರಮುಖವಾಗುವ ಸಾಧ್ಯತೆಗಳಿವೆ.

ಪ್ರೀತಿ ಪಟೇಲ್ ಬ್ರಿಟನ್ನಿನ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ಭಾರತಕ್ಕೆ ನೆರವಾಗುವ ಸಾಧ್ಯತೆಯೂ ಇದೆ. ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಕೆಲ ಆರ್ಥಿಕ ಅಪರಾಧಿಗಳು ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.

ಈ ಕುರಿತ ರಾಜತಾಂತ್ರಿಕ ಸಂಬಂಧಗಳಿಗೆ ಹಾಗೂ ಕಾನೂನು ಹೋರಾಟಗಳಿಗೆ ಬ್ರಿಟನ್ ಗೃಹ ಕಾರ್ಯದರ್ಶಿ ಜೊತೆಗೆ ಭಾರತ ಸರ್ಕಾರ ನೇರವಾಗಿ ಸಂಬಂಧ ಹೊಂದಿರಬೇಕಾಗುತ್ತಿದೆ. ಈ ದೃಷ್ಟಿಯಲ್ಲಿ ಪ್ರೀತಿ ಪಟೇಲ್ ಭಾರತಕ್ಕೆ ಲಾಭವಾಗುವ ನಿರೀಕ್ಷೆ ಇದೆ.

ಪಕ್ಷದ ನಾಯಕತ್ವ ಮತ್ತು ಪ್ರಧಾನಿ ತೆರೇಸಾ ಮೇ ಅವರ ಉತ್ತರಾಧಿಕಾರಿ ಆಯ್ಕೆಗಾಗಿ ಜುಲೈ 22 ರ ಸೋಮವಾರ ಮತದಾನ ನಡೆದಿತ್ತು. ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್‌ ಅವರನ್ನು ಸೋಲಿಸಿ ಜಾನ್ಸನ್‌ ಆಯ್ಕೆಯಾದರು.

ತೀವ್ರ ಕುತೂಹಲ ಕೆರಳಿಸಿದ್ದ ಸ್ಪರ್ಧೆಯಲ್ಲಿ ಬೋರಿಸ್‌ ಜಾನ್ಸನ್‌ ಅವರು 92,153 ಮತಗಳನ್ನು ಪಡೆಯುವ ಮೂಲಕ, ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಪ್ರತಿಸ್ಪರ್ಧಿ ಹಂಟ್‌ ಅವರು 46,656 ಮತಗಳನ್ನು ಪಡೆದರು. 1,59,320 ಮತಗಳು ಚಲಾವಣೆಯಾಗಿದ್ದು, 509 ತಿರಸ್ಕೃತಗೊಂಡವು ಎಂದು ಕನ್ಸರ್ವೇಟಿವ್‌ ಪಕ್ಷದ 1922- ಸಮಿತಿ ಸಹ ಅಧ್ಯಕ್ಷ ಶೆರಿಲ್‌ ಗಿಲ್ಲನ್‌ ಘೋಷಿಸಿದರು.

ಫಲಿತಾಂಶ ಘೋಷಣೆಯಾದ ನಂತರ, ಸಂಸತ್‌ ಸಮೀಪವಿರುವ ಕ್ವೀನ್‌ ಎಲಿಜಬೆತ್‌-2 ಕೇಂದ್ರದಲ್ಲಿ ಟೋರಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಾನ್ಸನ್‌, 'ದೇಶಕ್ಕೆ ನವ ಚೈತನ್ಯ ತುಂಬುವ ಜತೆಗೆ ಬ್ರೆಕ್ಸಿಟ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವುದೇ ನನ್ನ ಆದ್ಯತೆ' ಎಂದು ಹೇಳಿದರು.

ಬೋರಿಸ್‌ ಜಾನ್ಸನ್‌, ವಿವಾದಗಳಿಂದಾಗಿಯೂ ಗಮನ ಸೆಳೆಯುತ್ತಾರೆ. ಆಕ್ಸ್‌ಫರ್ಡ್‌ ವಿ.ವಿಯಿಂದ ಪದವಿ ಪಡೆದ ನಂತರ ಬೋರಿಸ್‌ ಜಾನ್ಸನ್‌1987ರಲ್ಲಿ ದಿ ಟೈಮ್ಸ್‌ ಪತ್ರಿಕೆಯಲ್ಲಿ ಟ್ರೇನಿ ವರದಿಗಾರರಾಗಿ ಸೇರಿಕೊಂಡರು. ಲೇಖನವೊಂದರಲ್ಲಿ ರಾಜಾ 2ನೇ ಎಡ್ವರ್ಡ್‌ ಕುರಿತು ತಪ್ಪಾಗಿ ಮಾಹಿತಿ ಪ್ರಕಟಿಸಿದ ಕಾರಣ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು.

2004ರಲ್ಲಿ ಸಂಸದರಾಗಿ ಆಯ್ಕೆಗೊಂಡರು. ಕನ್ಸರ್ವೇಟಿವ್‌ ಪಕ್ಷದ ಉಪಾಧ್ಯಕ್ಷರೂ ಆಗಿದ್ದರು. ವಿವಾಹೇತರ ಸಂಬಂಧದ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾ ಮಾಡಲಾಯಿತು. ನಂತರ ತನ್ನ ಎರಡನೇ ಪತ್ನಿಯನ್ನೇ ಅವರು ಮತ್ತೇ ಮದುವೆಯಾದರು.

ಜಾನ್ಸನ್‌ ಅವರ ಸಚಿವ ಸಂಪುಟದಲ್ಲಿ ಭಾರತ ಮೂಲದ ಸಂಸದರಾದ ಪ್ರೀತಿ ಪಟೇಲ್‌ ಮತ್ತು ರಿಷಿ ಸುನಕ್‌ ಸೇರಿದ್ದಾರೆ.

ಬಳಿಕ ಬಕಿಂಗ್‌ಹ್ಯಾಮ್‌ ಅರಮನೆಗೆ ತೆರಳಿ ರಾಣಿ ಎರಡನೇ ಎಲಿಜಬೆತ್‌ ಅವರಿಗೆ ಔಪಚಾರಿಕವಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಅಲ್ಲಿಯವರೆಗೂ ಮೇ ಅವರೇ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

English summary
Indian-origin Priti Patel appointed to Britain Home Secretary, Priti Patel on Wednesday took charge as Britain’s first Indian-origin Home Secretary in the newly-unveiled Boris Johnson Cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X