ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ನ್ಯೂಜಿಲೆಂಡ್ ಸಂಸದ
ವೆಲ್ಲಿಂಗ್ಟನ್, ನವೆಂಬರ್ 26: ನ್ಯೂಜಿಲ್ಯಾಂಡ್ನ ಅತಿ ಕಿರಿಯರಲ್ಲಿ ಒಬ್ಬರಾದ ಮತ್ತು ನೂತನವಾಗಿ ಆಯ್ಕೆಯಾದ ಭಾರತ ಮೂಲದ ಸಂಸದ ಡಾ. ಗೌರವ್ ಶರ್ಮಾ ಬುಧವಾರ ದೇಶದ ಸಂಸತ್ನಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಹಿಮಾಚಲಪ್ರದೇಶದ ಹಮಿರ್ಪುರದವರದ ಡಾ. ಗೌರವ್ ಶರ್ಮಾ (33) ನ್ಯೂಜಿಲೆಂಡ್ನ ಹ್ಯಾಮಿಲ್ಟನ್ ವೆಸ್ಟ್ನಿಂದ ಲೇಬರ್ ಪಕ್ಷದ ಸಂಸದರಾಗಿ ಸಂಸತ್ಗೆ ಆಯ್ಕೆಯಾಗಿದ್ದಾರೆ. ಗೌರವ್ ಶರ್ಮಾ ಅವರು ಬುಧವಾರ ಎರಡು ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ನ್ಯೂಜಿಲೆಂಡ್ನಲ್ಲಿನ ಭಾರತದ ಹೈಕಮಿಷನರ್ ಮುಕ್ತೇಶ್ ಪರ್ದೇಶಿ ಟ್ವಿಟ್ಟರ್ನಲ್ಲಿ ಈ ಮಾಹಿತಿ ನೀಡಿದ್ದಾರೆ. 'ಶರ್ಮಾ ಅವರು ಮೊದಲು ನ್ಯೂಜಿಲೆಂಡ್ನ ಸ್ಥಳೀಯ ಭಾಷೆ ಮಾವೊರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ ಭಾರತದ ಶಾಸ್ತ್ರೀಯ ಭಾಷೆ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ಎರಡರ ಸಾಂಸ್ಕೃತಿ ಸಂಪ್ರದಾಯಕ್ಕೆ ಅಪಾರ ಗೌರವವನ್ನು ತೋರಿಸಿದರು' ಎಂದು ಅವರು ಹೇಳಿದ್ದಾರೆ.

ಆಕ್ಲಂಡ್ನಲ್ಲಿ ಎಂಬಿಬಿಎಸ್ ಮತ್ತು ವಾಷಿಂಗ್ಟನ್ನಲ್ಲಿ ಎಂಬಿಎ ಪಡೆದಿರುವ ಶರ್ಮಾ ಅವರು, ಹ್ಯಾಮಿಲ್ಟನ್ನ ನಾವ್ಟನ್ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ನ್ಯೂಜಿಲೆಂಡ್ ಮತ್ತು ಭಾರತ ಸೇರಿದಂತೆ ವಿವಿಧ ದೇಶಗಳ ಸಾರ್ವಜನಿಕ ಆರೋಗ್ಯ, ನೀತಿ, ಔಷಧ ಮತ್ತು ಸಲಹೆಗಾರರಾಗಿ ಕೆಲಸ ಮಾಡಿದ್ದರು.
Historic Moment 👏
— Mahesh Joshi (@MaheshJoshi_MJ) November 26, 2020
Dr Gaurav Sharma a newly-elected MP in New Zealand, takes oath in #Sanskrit in the Parliament.
Hope all Indian politician take cue from him😊@Swamy39 @gmsharmanz pic.twitter.com/bXxttc3UHe
2017ರ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಗೌರವ್ ಶರ್ಮಾ, ಈ ಬಾರಿ ನ್ಯಾಷನಲ್ ಪಾರ್ಟಿಯ ಟಿಮ್ ಮ್ಯಾಸಿಂಡೊ ಅವರನ್ನು ಮಣಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಪ್ರಿಯಾಂಕಾ ರಾಧಾಕೃಷ್ಣನ್ ಅವರು ನ್ಯೂಜಿಲೆಂಡ್ನ ಮೊದಲ ಭಾರತ ಮೂಲದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications