ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಉದ್ಯಮಿ ಹರ್ನೀಶ್ ಪಟೇಲ್ ಎಂಬುವರನ್ನು ಅವರ ನಿವಾಸದ ಮುಂದೆಯೇ ಹತ್ಯೆ.

|
Google Oneindia Kannada News

ಕ್ಯಾಲಿಫೋರ್ನಿಯಾ, ಮಾರ್ಚ್ 4 : ಇತ್ತೀಚೆಗಷ್ಟೇ ಕನ್ಸಾಸ್ ನಲ್ಲಿ ಭಾರತೀಯ ಟೆಕ್ಕಿ ಶ್ರೀನಿವಾಸ ಕುಚ್ಚಿಭೋತ್ಲಾ ಅವರ ಹತ್ಯೆಯಾದ ಬೆನ್ನಲ್ಲೇ ಇದೀಗ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯರೊಬ್ಬರ ಹತ್ಯೆಯಾಗಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಲ್ಯಾಂಕ್ಯಾಸ್ಟರ್ ನಲ್ಲಿ ವ್ಯಾಪಾರಸ್ಥರಾಗಿದ್ದ ಹರ್ನೀಶ್ ಪಟೇಲ್ (43) ಎಂಬುವರನ್ನು ಅವರ ನಿವಾಸ ಮುಂದೆಯೇ ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ ಸುಮಾರು 11:30ರ ಹೊತ್ತಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯರೊಬ್ಬರ ಹತ್ಯೆಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ತಿಂಗಳ 13ರಂದು ತೆಲಂಗಾಣ ಮೂಲದ ವಿ. ವಂಶಿ ರೆಡ್ಡಿ (27) ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.[ಕ್ಯಾಲಿಫೋರ್ನಿಯಾದಲ್ಲಿ ತೆಲಂಗಾಣ ಯುವಕನ ಹತ್ಯೆ]

Indian-Origin Businessman Harnish Patel Shot Dead Outside His Home In US

ಇತ್ತೀಚೆಗಷ್ಟೇ ನಡೆದಿದ್ದ ಶ್ರೀನಿವಾಸ ಕುಚ್ಚಿಬೋತ್ಲಾ ಅವರ ಹತ್ಯೆಯನ್ನು ಖಂಡಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಸಹನೆಯ ಪೀಡೆಯನ್ನು ಹತ್ತಿಕ್ಕಬೇಕೆಂದು ಕರೆ ನೀಡಿದ್ದರು. ಆದರೆ, ಅಧ್ಯಕ್ಷರ ಆ ಕರೆಯ ಬೆನ್ನಲ್ಲೇ ಮತ್ತೊಬ್ಬ ಭಾರತೀಯರ ಹತ್ಯೆಯಾಗಿರುವುದು ಅಮೆರಿಕದಲ್ಲಿರುವ ಭಾರತೀಯರಿಗೆ ಮತ್ತಷ್ಟು ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.

ಅಮೆರಿಕದ ಕಾಲಮಾನ ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ) ತಮ್ಮ ಅಂಗಡಿಯನ್ನು ಮುಚ್ಚಿ ಮನೆ ಕಡೆಗೆ ತೆರಳುವಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಆದರಿದು ಜನಾಂಗೀಯ ದ್ವೇಷದಿಂದಾದ ಹತ್ಯೆಯೆಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.ಫೆ. 22ರಂದು ಕನ್ಸಾಸ್ ನಲ್ಲಿ ನಡೆದಿದ್ದ ಶ್ರೀನಿವಾಸ್ ಕುಚಿಬೋತ್ಲಾ ಅವರ ಹತ್ಯೆಯ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯು, ಶ್ರೀನಿವಾಸ್ ಅವರನ್ನು ಅರಬ್ ದೇಶದ ಪ್ರಜೆ ಎಂದು ತಿಳಿದು ''ನೀನು ಭಯೋತ್ಪಾದಕ. ನನ್ನ ದೇಶ ಬಿಟ್ಟು ತೊಲಗು'' ಎಂದು ಅರಚಿ ಗುಂಡು ಹಾರಿಸಿದ್ದ.[ಗೆಟ್ ಔಟ್ ಎಂದು ಕಿರುಚಿ ಅಮೆರಿಕದಲ್ಲಿ ಭಾರತೀಯನ ಹತ್ಯೆ]

ಅಮೆರಿಕದ ಔದ್ಯೋಗಿಕ ವಲಯದಲ್ಲಿ ಅಮೆರಿಕನ್ನರಿಗೇ ಮೊದಲ ಆದ್ಯತೆ ಎಂಬ ನಿಲುವನ್ನು ಹೊಂದಿರುವ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಈವರೆಗೆ ಒಟ್ಟು ಮೂವರು ಭಾರತೀಯರ ಹತ್ಯೆಯಾಗಿದೆ.

English summary
With the nation still in shock from the killing of an Indian engineer in the US last week, another Indian-origin businessman has been shot dead outside his home in South Carolina, media reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X