ಆರು ತಿಂಗಳು ಗಗನಯಾನ ಯಶಸ್ಸಿನ ನಂತರ ಭೂಮಿಗೆ ಮರಳಿದ ರಾಜಾ ಚಾರಿ
ವಾಷಿಂಗ್ಟನ್, ಮೇ 7: ಭಾರತೀಯ ಮೂಲದ ರಾಜಾ ಚಾರಿ (Raja Chari) ಆರು ತಿಂಗಳು ಯಶಸ್ವಿಯಾಗಿ ಗಗನ ಪ್ರಯಾಣ ಮಾಡಿ ವಾಪಸ್ಸಾಗಿದ್ದಾರೆ. ಎಲಾನ್ ಮಸ್ಕ್ ಮಾಲಿಕತ್ವದ ಸ್ಪೇಸ್‌ಎಕ್ಸ್ (SpaceX) ಕಂಪನಿಯ ಗಗನನೌಕೆಯಲ್ಲಿ ಕೂತು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಆರು ತಿಂಗಳಿದ್ದು ಬಳಿಕ ವಾಪಸ್ ಬಂದಿದ್ದಾರೆ. ಇವರ ಜೊತೆ ಇನ್ನೂ ಮೂವರೂ ಪ್ರಯಾಣಿಸಿ ಬಂದಿದ್ದಾರೆ.
ರಾಜಾ ಚಾರಿ, ಕೇಯ್ಲಾ ಬಾರಾನ್, ಟಾಮ್ ಮಾರ್ಶ್‌ಬರ್ನ್ ಮತ್ತು ಮಥಿಯಾಸ್ ಮೌರರ್ ಈ ನಾಲ್ವರು ಗಗನಯಾತ್ರಿಗಳು ನಾಸಾ ಮತ್ತು ಸ್ಪೇಸ್‌ಎಕ್ಸ್ ಜಂಟಿ ಪ್ರಯೋಗದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಹೋಗಿ ಬಂದಿದ್ದಾರೆ. ಇವರ ಪೈಕಿ ಮಥಿಯಾಸ್ ಮೌರರ್ ಯೂರೋಪಿಯನ್ ಸ್ಪೇಸ್ ಏಜೆನ್ಸಿಯಿಂದ ಬಂದವರಾದರೆ, ಇನ್ನುಳಿದವರು ನಾಸಾದಿಂದ ಆಯ್ಕೆಯಾದವರು. ಇಂದು ಈ ನಾಲ್ವರಿದ್ದ ಗಗನನೌಕೆಯು ಅಮೆರಿಕದ ಫ್ಲೋರಿಡಾ ರಾಜ್ಯದ ಆಚೆ ಇರುವ ಮೆಕ್ಸಿಕೋ ಕೊಲ್ಲಿ ಪ್ರದೇಶದಲ್ಲಿ ಪ್ಯಾರಚ್ಯೂಟ್ ಸಹಾಯದಿಂದ ಧರೆಗಿರಿಳಿದಿದೆ.
ಇದು ನಾಸಾದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾದ ಮೂರನೇ ವಾಣಿಜ್ಯಾತ್ಮಕ ಗಗನಯಾನ ಯೋಜನೆಯಾಗಿದೆ. ನವೆಂಬರ್ 10ರಂದು ಫ್ಲೋರಿಡಾದ ಕೆನಡಿ ಸ್ಪೆಸ್ ಸೆಂಟರ್‌ನಲ್ಲಿ ಸ್ಪೇಸ್‌ಎಕ್ಸ್ ನಿರ್ಮಿತ ಫಾಲ್ಕಾನ್-9 ರಾಕೆಟ್ ಮೂಲಕ ಮಿಷನ್ ಉಡಾವಣೆ ಆಗಿದೆ. 24 ಗಂಟೆ ಬಳಿಕ ಗಗನಯಾತ್ರಿಗಳಿದ್ದ ಹಾರ್ಮೋನಿ ಮಾಡ್ಯುಲ್ ಅನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸೇರಿಸಲಾಯಿತು. ಈ ಮೂರನೇ ಮಿಷನ್‌ನಲ್ಲಿ ರಾಜಾಚಾರಿ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನಲ್ಲಿ 177 ದಿನಗಳ ಕಾಲ ಇದ್ದು ಬಂದಿದ್ದಾರೆ.

ಏನಿದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ?:
ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ಎಂಬದು ಅಮೆರಿಕ, ರಷ್ಯಾ, ಜಪಾನ್, ಯೂರೋಪ್ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಭೂಮಿಯ ಆಚೆ ನಿರ್ಮಿಸಿರುವ ಕೇಂದ್ರವಾಗಿದೆ. ಇದು ಭೂಮಿಗೆ ಸಮೀಪದಲ್ಲೇ ಒಂದು ಕಕ್ಷೆಯಲ್ಲಿದೆ. ಐಎಸ್‌ಎಸ್‌ಗೆ ಮುನ್ನ ಕೆಲವಾರು ಬಾಹ್ಯಾಕಾಶ ಕೇಂದ್ರಗಳು ಇವೆಯಾದರೂ ಐಎಸ್‌ಎಸ್ ಭೂಮಿಯ ಕೆಳ ಕಕ್ಷೆಯಲ್ಲಿರುವ ಅತಿದೊಡ್ಡ ಉಪಗ್ರಹ ರೀತಿಯ ವಸ್ತು ಇದಾಗಿದೆ. ಇದು ಭೂಮಿಯಿಂದ 400 ಕಿಮೀ ಸರಾಸರಿ ಎತ್ತರದಲ್ಲಿನ ಕಕ್ಷೆಯಲ್ಲಿ ನಿಯೋಜಿತವಾಗಿದೆ. ಭೂಮಿಯಿಂದ ಇದು ಬರಿಗಣ್ಣಿಗೂ ಕಾಣುತ್ತದೆ ಎಂದು ಹೇಳಲಾಗುತ್ತದೆ.

ಕೇವಲ 93 ಗಂಟೆಯಲ್ಲಿ ಇದು ಭೂಮಿಯನ್ನು ಸುತ್ತು ಹಾಕುತ್ತದೆ. ಅಂದರೆ ದಿನಕ್ಕೆ ಇದು 15.5 ಬಾರಿ ಭೂಮಿಯ ಪ್ರದಕ್ಷಿಣೆ ಹಾಕುತ್ತದೆ. ಐಎಸ್‌ಎಸ್ ಬಾಹ್ಯಾಕಾಶ ಕೇಂದ್ರವನ್ನು ಹಲವು ವೈಜ್ಞಾನಿಕ ಪ್ರಯೋಗಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಚಂದ್ರ, ಮಂಗಳ ಮೊದಲಾದ ದೂರ ದೂರದ ಗ್ರಹಗಳಿಗೆ ಹೋಗಲು ಬೇಕಾದ ಗಗನಹೌಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಮತ್ತು ಅಭಿವೃದ್ಧಿ ಪಡಿಸಲು ಐಎಸ್‌ಎಸ್ ಬಹಳ ಉಪಯುಕ್ತವೆನಿಸಿದೆ. ಹೀಗಾಗಿ, ಐಎಸ್‌ಎಸ್ ಅತಿ ಹೆಚ್ಚು ಬಳಸಲಾಗುವ ಬಾಹ್ಯಾಕಾಶ ಕೇಂದ್ರವಾಗಿದೆ.

577 ಕೋಟಿ ಕಿಮೀ ಪ್ರಯಾಣಿಸಿದ ಗಗನಯಾತ್ರಿಗಳು:
ರಾಜ ಚಾರಿ ಸೇರಿದಂತೆ ಮೂರನೇ ನಾಸಾ ಮಿಷನ್‌ನಲ್ಲಿದ್ದ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನಲ್ಲಿ ಇದ್ದದ್ದು 175 ದಿನ. ಅಲ್ಲಿಗೆ ತಲುಪಲು ಒಂದು ದಿನ, ಅಲ್ಲಿಂದ ವಾಪಸ್ ಬರಲು ಒಂದು, ಹೀಗೆ ಒಟ್ಟು 177 ದಿನ ಅವರ ಪ್ರಯಾಣ ಇತ್ತು. ಈ ಟೂರ್‌ನಲ್ಲಿ ಅವರು ಸುಮಾರು 577 ಕೋಟಿ ಕಿಮೀ ಪ್ರಯಾಣ ಮಾಡಿದ್ದಾರೆ. ಸ್ಪೇಸ್ ಸ್ಟೇಷನ್ ಜೊತೆ ಇವರು 2832 ಬಾರಿ ಭೂಮಿಯನ್ನ ಪ್ರದಕ್ಷಿಣೆ ಮಾಡಿದ್ದಾರೆ.
ಇವರ ತಂಡ ಭೂಮಿಗೆ ಇಳಿಯುವ ಸ್ವಲ್ಪ ದಿನ ಮುಂಚೆ ನಾಸಾದ ನಾಲ್ಕನೆ ತಂಡ ಗಗನಯಾನ ಕೈಗೊಂಡು ಬಾಹ್ಯಾಕಾಶ ಕೇಂದ್ರದತ್ತ ಧಾವಿಸಿದೆ.
(ಒನ್ಇಂಡಿಯಾ ಸುದ್ದಿ)
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications