• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದ ಕಠ್ಮಂಡು ಪಶುಪತಿನಾಥ ದೇವಾಲಯದಲ್ಲಿ ಶಿವನ ಆರಾಧನೆ

|
Google Oneindia Kannada News

ಕಠ್ಮಂಡು, ನವೆಂಬರ್ 14: ಭಾರತೀಯ ರಾಯಭಾರ ಕಚೇರಿ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕ್ರತಿಕ ಕೇಂದ್ರ ಸಂಯುಕ್ತಾಶ್ರಯದಲ್ಲಿ ನೇಪಾಳದ ರಾಜಧಾನಿಯ ಕಠ್ಮಂಡುನ ಪಶುಪತಿನಾಥ ದೇವಾಲಯದಲ್ಲಿ ಶಿವ ಪೂಜೆ ಹಾಗೂ ವಿಶೇಷ ಕಾರ್ಯಕ್ರಮವನ್ನು ಸೋಮವಾರ ಸಂಜೆ ಆಯೋಜಿಸಲಾಗಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಿಂದ ಪಶುಪತಿನಾಥದಲ್ಲಿ ವಿಶೇಷವಾದ ಶಿವಪೂಜೆಯಲ್ಲಿ ಶಿವನ ಆರಾಧನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿವನನ್ನು ಭಕ್ತಿಯಿಂದ ಸ್ಮರಿಸಲಾಯಿತು.

ಪಶುಪತಿ ಏರಿಯಾ ಡೆವಲಪ್‌ಮೆಂಟ್ ಟ್ರಸ್ಟ್ (PADT)ಸಹಯೋಗದಲ್ಲಿ ಸಾಂಸ್ಕೃತಿಕ ಸಂಜೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಸಾಂಪ್ರದಾಯಿಕ ನೇಪಾಳಿ ಕುಮಾರಿ ನೃತ್ಯದೊಂದಿಗೆ ಪ್ರಾರಂಭವಾಯಿತು. ತದನಂತರ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 ಸಚಿವರಾದ ಬಳಿಕ ಕ್ಷೇತ್ರಕ್ಕೆ ಮೊದಲ ಭೇಟಿ: ಪಶುಪತಿ ಪಾರಸ್‌ ಮೇಲೆ ಶಾಹಿ ಎಸೆದ ಮಹಿಳೆ ಸಚಿವರಾದ ಬಳಿಕ ಕ್ಷೇತ್ರಕ್ಕೆ ಮೊದಲ ಭೇಟಿ: ಪಶುಪತಿ ಪಾರಸ್‌ ಮೇಲೆ ಶಾಹಿ ಎಸೆದ ಮಹಿಳೆ

ಒಂದು ಗಂಟೆ ಅವಧಿಗೂ ನಡೆದ ಕಾರ್ಯಕ್ರಮದಲ್ಲಿ ಅರ್ಧನಾರೀಶ್ವರ (ಶಿವ ಮತ್ತು ಪಾರ್ವತಿಯ ಒಂದು ರೂಪದಲ್ಲಿ ಸಂಯೋಜನೆ) ಮತ್ತು ಶಿವ ನಾಟ್ಯ ರೂಪವನ್ನು ಭಗವಾನ್ ಶಿವ, ಗಣೇಶ ಮತ್ತು ಪಾರ್ವತಿ ಭಾವರೂಪಗಳನ್ನು ಒಳಗೊಂಡಿದ್ದವು. ಈ ಸಂದರ್ಭದಲ್ಲಿ ಇಡೀ ಶಿವನ ಕುಟುಂಬವನ್ನು ಪೂಜಿಸಲಾಯಿತು. ನೇಪಾಳಿಯಲ್ಲಿ ಸಾಂಪ್ರದಾಯಿಕ ಪ್ರದರ್ಶನಗಳು ದೇವಿಯ ಆರಾಧನೆಯಲ್ಲಿ ಪ್ರಸ್ತುತಪಡಿಸಲಾಯಿತು ಎಂದು ಭಾರತೀಯ ರಾಯಭಾರ ಕಚೇರಿಯು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮವನ್ನು ಪಶುಪತಿನಾಥ ದೇವಸ್ಥಾನದ ಮುಖ್ಯಸ್ಥ ಭಟ್ ಗಣೇಶ್ ರಾವಲ್ ಉದ್ಘಾಟಿಸಿದರು. 200ಕ್ಕೂ ಹೆಚ್ಚು ಜನರು, ಟ್ರಸ್ಟಿಗಳು ಹಾಗೂ ಸಮಾಜದ ಪ್ರಮುಖರು ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

English summary
Swami Vivekananda Cultural Center, Embassy of India, Kathmandu organized an event ‘Shiva Pooja’ in the evening of 14th November 2022 at the revered venue of Pashupatinath Temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X