Donald Trump: ಡೊನಾಲ್ಡ್ ಟ್ರಂಪ್ ಆಡಳಿತದ ಜೊತೆಗೆ ಮಾತುಕತೆ ಆರಂಭಿಸಿದ ಭಾರತ!

ಭಾರತ ಎಂಬ ದೈತ್ಯ ದೇಶವನ್ನು ಎದುರು ಹಾಕಿಕೊಂಡು ಇದೀಗ ಅಮೆರಿಕ ನೂರಾರು ಸಮಸ್ಯೆ ಸುಳಿಗೆ ಸಿಲುಕಿದೆ. ಭಾರತ ಇಲ್ಲದೆ ಅಮೆರಿಕ ನೆಮ್ಮದಿಯಾಗಿ ಜೀವನ ನಡೆಸಲು ಆಗಲ್ಲ ಅನ್ನೋದು ಮತ್ತೊಮ್ಮೆ ಇದೀಗ ಇಡೀ ಜಗತ್ತಿಗೇ ಗೊತ್ತಾಗಿದೆ. ಭಾರತ & ಅಮೆರಿಕ ಸಂಬಂಧ ಇನ್ನೇನು ಟ್ರಂಪ್ ನಿರ್ಧಾರದಿಂದ ಹಾಳಾಗಿ ಹೋಯ್ತು ಅನ್ನುವಾಗಲೇ ಎರಡೂ ದೇಶಗಳ ನಡುವೆ ಮಹತ್ವದ ಮಾತುಕತೆ ನಡೆಯಬಹುದು ಅನ್ನೋ ನಿರೀಕ್ಷೆ ಇತ್ತು. ಹೀಗಿದ್ದಾಗ ದಿಢೀರ್ ಅಂತಾ ಡೊನಾಲ್ಡ್ ಟ್ರಂಪ್ ಆಡಳಿತದ ಜೊತೆಗೆ ಮಾತುಕತೆ ಆರಂಭಿಸಿದ ಭಾರತ ಎಂತಹ ಹೆಜ್ಜೆ ಇಟ್ಟಿದೆ ಗೊತ್ತಾ?

ಹೌದು, ಅಮೆರಿಕ ಜೊತೆಗೆ ಭಾರತ ಉತ್ತಮ ಸಂಬಂಧ ಇಟ್ಟುಕೊಂಡು ಬಂದಿದೆ. ಆದರೆ ಡೊನಾಲ್ಡ್ ಟ್ರಂಪ್ ಆಡಳಿತ ಬಂದ ನಂತರ ಸಾಕಷ್ಟು ದೊಡ್ಡ ಕಿರಿಕ್ ಶುರುವಾಗಿದ್ದು, ಭಾರತ & ಅಮೆರಿಕ ಸಂಬಂಧ ಇದೀಗ ಹಾಳಾಗಿ ಹೋಗಿದೆ. ಇದೇ ಕಾರಣಕ್ಕೆ ಚೀನಾ & ರಷ್ಯಾ ಜೊತೆಗೆ ಸಂಬಂಧ ಬೆಸೆಯಲು ನಮ್ಮ ಭಾರತ ಕೂಡ ಮುಂದಾಗಿತ್ತು. ಆದರೆ ಇದರಿಂದ ಹೆದರಿದ ಅಮೆರಿಕ ಇದೀಗ ಭಾರತದ ಜೊತೆಯಲ್ಲಿ ತೆರಿಗೆ ಹೇರಿಕೆ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಮಾತುಕತೆ ನಡೆಸಲು ಸಜ್ಜಾಗಿದೆ. ಭಾರತ ಈಗಾಗಲೇ ಈ ಕುರಿತು ಮಾತುಕತೆ ಕೂಡ ಶುರು ಮಾಡಿದೆ.

India-US Trade Deal In-Person Talks Begin After Tariff Imposition

ಮಹತ್ವದ ಮಾತುಕತೆ ಕೊನೆಗೂ ಶುರು

ಸೆಪ್ಟೆಂಬರ್ 16 ಮಂಗಳವಾರ ಭಾರತ ಮತ್ತು ಅಮೆರಿಕದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಮತ್ತೆ ಶುರುವಾಗಿದೆ. ಅಮೆರಿಕ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ನಿಯೋಗವು ನೇತೃತ್ವ ವಹಿಸಿದ್ದು, ಡೊನಾಲ್ಡ್ ಟ್ರಂಪ್ ಆಡಳಿತದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕರಾಗಿ ಬ್ರೆಂಡನ್ ಲಿಂಚ್ ಕಾರ್ಯನಿರ್ವಣೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಭಾರತ ಮತ್ತು ಅಮೆರಿಕದ ನಡುವಿನ ಈ ದ್ವಿಪಕ್ಷೀಯ ಮಾತುಕತೆ ಸಾಕಷ್ಟು ಗಮನ ಸೆಳೆದಿದೆ.

ಡಬಲ್ ತೆರಿಗೆ ಹಾಕಿದ್ದ ಟ್ರಂಪ್!

ಕಳೆದ ತಿಂಗಳು ಅಂದ್ರೆ ಆಗಸ್ಟ್ 27 ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು, ಯಾಕಂದ್ರೆ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿ ಟ್ರಂಪ್ ಆದೇಶ ನೀಡಿದ್ದ ದಿನ ಇದಾಗಿತ್ತು. ಈ ಕಾರಣಕ್ಕೆ ಭಾರತ ಕೂಡ ಅಮೆರಿಕ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಭಾರತ ದೇಶದಿಂದ ಅಮೆರಿಕಗೆ ರಫ್ತು ಮಾಡುವ ವಸ್ತುಗಳ ಮೇಲೆ ಶೇಕಡಾ 25 ತೆರಿಗೆ ಜೊತೆಗೆ ಹೆಚ್ಚುವರಿ ಶೇಕಡಾ 25ರಷ್ಟು ಟ್ಯಾಕ್ಸ್ ಹಾಕಿದ್ದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇದರಿಂದ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗಿ ತಲೆನೋವಾಗಿತ್ತು. ಆದರೆ ಇದೀಗ ಮಾತುಕತೆ ಆರಂಭ ಮಾಡಿವೆ ಎರಡೂ ದೇಶಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+