Turkey and Bangladesh: ಮಿತ್ರದ್ರೋಹಿ ಟರ್ಕಿ, ಬಾಂಗ್ಲಾಗೆ ಪಾಠ ಕಲಿಸಲು ಮುಂದಾದ ಭಾರತ: ಏನಿದು "ಕಲಾದನ್" ?

Turkey and Bangladesh: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟ ಮೇಲೆ ಭಾರತದ ಮಿತ್ರ ಯಾರು, ಶತ್ರು ಯಾರು ಎನ್ನುವುದು ಗೊತ್ತಾಗಿದೆ. ಸಂಕಷ್ಟದ ಸಮಯದಲ್ಲಿ ನಮ್ಮ ಪರವಾಗಿ ನಿಂತಿದ್ದು ಯಾರು, ನಮ್ಮ ವಿರುದ್ಧ ನಿಂತವರು ಯಾರು ಹಾಗೂ ಭಾರತದ ಬಳಿ ಸಹಾಯಪಡೆದುಕೊಂಡೇ ಭಾರತದ ಬೆನ್ನಿಗೆ ಚೂರಿ ಹಾಕಿದವರು ಯಾರು ಎನ್ನುವುದು ಬಹಿರಂಗವಾಗಿದೆ. ಇದೀಗ ಭಾರತದ ಬೆನ್ನಿಗೆ ಚೂರಿ ಹಾಕಿದ ಎರಡು ದೇಶಗಳಿಗೆ ಪಾಠ ಕಲಿಸುವುದಕ್ಕೆ ಭಾರತ ಸರ್ಕಾರ ಮುಂದಾಗಿದೆ. ಅದರಲ್ಲಿ ಟರ್ಕಿ ಹಾಗೂ ಬಾಂಗ್ಲಾದೇಶಗಳು ಪ್ರಮುಖವಾಗಿವೆ. ಈ ಎರಡೂ ದೇಶಗಳಿಗೆ ಭಾರತವು ಅಪಾರ ಸಹಕಾರ ನೀಡಿದೆ. ಅಲ್ಲದೇ ಬಾಂಗ್ಲಾದೇಶದ ಉದಯಕ್ಕೆ ಕಾರಣವಾಗಿದ್ದೇ ಭಾರತ. ಆದರೆ, ಎರಡೂ ದೇಶಗಳು ವಿಶ್ವಾಸದ್ರೋಹ ಕೆಲಸವನ್ನು ಮಾಡಿವೆ.

ಈ ಹಿನ್ನೆಲೆಯಲ್ಲಿ ಎರಡೂ ದೇಶಗಳೊಂದಿಗೆ ಸಮಾನ ಅಂತರ ಕಾಪಾಡಿಕೊಂಡು ಈ ದೇಶಗಳಿಗೆ ಪಾಠ ಕಲಿಸುವುದಕ್ಕೆ ಭಾರತ ಮುಂದಾಗಿದೆ. ಈಗಾಗಲೇ ಟರ್ಕಿಯೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಗಳು ರದ್ದಾಗುತ್ತಿವೆ. ಇದರೊಂದಿಗೆ ಭಾರತದ ಈಶಾನ್ಯ ಭಾಗದ 7 ರಾಜ್ಯಗಳ ಬಗ್ಗೆ ಭಾರತವು ವಿಶೇಷ ಕಾಳಜಿ ವಹಿಸಿದೆ.

India to teach a lesson to ally-traitor Turkey and Bangladesh What is Kaladan Corridor

ಈಶಾನ್ಯದ ಈ 7 ರಾಜ್ಯಗಳನ್ನು ಸಪ್ತ ಸಹೋದರಿಯರು ಅಂತಲೇ ಕರೆಯಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶವು ಈ ರಾಜ್ಯಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದೆ. ಅಲ್ಲದೇ ಈ ಏಳು ರಾಜ್ಯಗಳನ್ನು ವಶಪಡಿಸಿಕೊಳ್ಳುವುದು ಕಷ್ಟದ ಕೆಲಸವೇನು ಅಲ್ಲ ಎನ್ನುತ್ತಿದೆ. ಹೀಗಾಗಿ, ಬಾಂಗ್ಲಾದೇಶಕ್ಕೆ ಪಾಠ ಕಲಿಸಲು ಭಾರತ ಮುಂದಾಗಿದೆ.

ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಸಂಬಂಧ ಉಳಿದಿಲ್ಲ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನ್ ದೇಶ ತೊರೆದ ಮೇಲೆ ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಸಂಬಂಧ ಸಂಪೂರ್ಣ ಹಾಳಾಗಿದೆ. ಬಾಂಗ್ಲಾದೇಶದ ಮೇಲೆ ಭಾರತವು ಸಂಪರ್ಕ - ಸರಕು ಸಾಗಣಿಕೆಗೆ ಅವಲಂಬಿಸಿದೆ. ಬಾಂಗ್ಲಾದೇಶವು ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದು. ಭಾರತವು ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಭಾರತವು ಕಲಾದನ್ ಬಹು ಮಾದರಿ ಸಾರಿಗೆ ಯೋಜನೆಯನ್ನು ತುರ್ತಾಗಿ ಮುಗಿಸಲು ಮುಂದಾಗಿದೆ. ಇದು ಈಶಾನ್ಯ ಭಾರತದ ಮಿಜೋರಾಂ ಪ್ರದೇಶವನ್ನು ಮ್ಯಾನ್ಮಾರ್‌ ಮೂಲಕವಾಗಿ ಕೋಲ್ಕತ್ತಾ ತಲುಪಲಿದೆ. ಈ ಮೂಲಕ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಭಾರತವು ಮಹತ್ವದ ಹೆಜ್ಜೆಯನ್ನು ಇರಿಸಿದೆ.

ಈ ಬೃಹತ್‌ ಯೋಜನೆ ಜಾರಿಯಿಂದಾಗಿ ಭಾರತವು ಬಾಂಗ್ಲಾದೇಶದ ಮೇಲೆ ಅವಲಂಬನೆ ಆಗುವುದು ತಪ್ಪಲಿದೆ ಎಂದು ಹೇಳಲಾಗಿದೆ. ಈಶಾನ್ಯ ಭಾರತದ ಪ್ರಮುಖ ರಾಜ್ಯಗಳು ಹಾಗೂ ಭಾರತದ ಇತರ ಭಾಗದ ಸಂಪರ್ಕಕ್ಕೆ ಭಾರತವು ಬಾಂಗ್ಲಾದೇಶವನ್ನು ಅವಲಂಬಿಸಿದೆ. ಇನ್ನು ಬಾಂಗ್ಲದೇಶ ಸಹ ಭಾರತವನ್ನೇ ಅವಲಂಬಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಾಂಗ್ಲದೇಶವು ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಕೈಜೋಡಿಸಿದ್ದು ಭಾರತ ಸಹ ಪರ್ಯಾಯ ಆಯ್ಕೆಗಳನ್ನು ಹುಡುಕುತ್ತಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಭಾರತದ ಏಳು ಈಶಾನ್ಯ ರಾಜ್ಯಗಳ ಕೀ ಬಾಂಗ್ಲಾದ ಬಳಿ ಇದೆ ಎಂಬರ್ಥದಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್‌ ನೀಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಈಗ ಹಳೆಯ ಬಾಂಧವ್ಯ ಉಳಿದಿಲ್ಲ. ಪಾಕ್‌ ಹಾಗೂ ಚೀನಾದೊಂದಿಗೆ ಬಾಂಗ್ಲಾ ಕೈಜೋಡಿಸಿರುವುದರಿಂದ ಭಾರತವು, ಭಾರತ ಹಾಗೂ ಬಾಂಗ್ಲಾದೇಶದ ಗಡಿ ಭಾಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಲ್ಲಿ ಈ ಹೆದ್ದಾರಿ ಯೋಜನೆಯೂ ಒಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+