ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಜನ್ಮ ಜಾಲಾಡಿದ ಭಾರತ

ವಿಶ್ವ ಸಂಸ್ಥೆ, ಸೆಪ್ಟೆಂಬರ್ 26: ಪ್ರಸ್ತುತ ನಡೆಯುತ್ತಿರು ವಿಶ್ವ ಸಂಸ್ಥೆ ಮಹಾಧಿವೇಶನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಆರೋಪಗಳು ಮುಂದುವರಿದಿವೆ.

ಮಹಾಧಿವೇಶನದಲ್ಲಿ ವಿವಿಧ ದೇಶಗಳ ಗಣ್ಯರ ಮುಂದೆ ಭಾರತದ ಮುಖಕ್ಕೆ ಮಸಿ ಬಳಿಯುವ ಪ್ರಯತ್ನದಲ್ಲಿ ಪಾಕಿಸ್ತಾನ ಇಡುತ್ತಿರುವ ಪ್ರತಿ ಹೆಜ್ಜೆಗೂ ಭಾರತ ದಿಟ್ಟ ಉತ್ತರ ನೀಡುತ್ತಿದೆ.

India's strong reply to Pak's alleges in UN General Assembly

ಪಾಕಿಸ್ತಾನದ ಪ್ರತಿನಿಧಿ ಮಲೀನಾ ಲೋಧಿ ಅವರು, 2014ರಲ್ಲಿ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯ ವೇಳೆ ಗಾಯಗೊಂಡಿದ್ದ ಯುವತಿಯೊಬ್ಬಳ ಫೋಟೋ ತೋರಿಸಿ ಇದು ಕಾಶ್ಮೀರದಲ್ಲಿ ಭಾರತವು ಕಾಶ್ಮೀರಿಗಳ ಮೇಲೆ ತೋರುತ್ತಿರುವ ದೌರ್ಜನ್ಯ ಎಂದು ಹೇಳಿದ್ದರು.

ಅವರು ಹಾಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಆ ಫೋಟೋ ಪ್ಯಾಲೆಸ್ತೀನ್ ನದ್ದು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ, ಪಾಕಿಸ್ತಾನ ಮುಜುಗರಕ್ಕೀಡಾಯಿತು.

ಸೋಮವಾರದ ಅಧಿವೇಶನದ ವೇಳೆ, ಭಾರತ, ಪಾಕಿಸ್ತಾನದ ಇಂಥ ಕುಕರ್ಮಗಳನ್ನು ಪಟ್ಟಿ ಮಾಡಿ ವಿಶ್ವ ಸಮುದಾಯದ ಮುಂದಿಟ್ಟಿತು. ಭಾರತದ ಪ್ರತಿನಿಧಿ ಪೌಲೊಮಿ ತ್ರಿಪಾಠಿ ಅವರು ಮಾತನಾಡಿ, ಹೇಗೆ ನಕಲಿ ಫೋಟೋ ತೋರಿಸಿ, ಕಾಶ್ಮೀರದಲ್ಲಿ ಭಾರತ ಅಲ್ಲಿನ ನಾಗರಿಕರನ್ನು ಹೇಗೆ ಹಿಂಸಿಸುತ್ತಿದೆ ಎಂಬುದನ್ನು ಪಾಕಿಸ್ತಾನ ಆರೋಪ ಮಾಡಿತೋ ಅದೇ ರೀತಿಯಲ್ಲಿ ಈವರೆಗೆ ಅದು ಭಾರತದ ವಿರುದ್ಧ ಅಂಥ ನಕಲಿ ಸಾಕ್ಷ್ಯಾಧಾರಗಳನ್ನು ನೀಡಿಯೇ ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಜ್ವಲಂತ ಸಾಕ್ಷಿ ಮಲೀನಾ ಅವರು ತೋರಿಸಿರುವ ನಕಲಿ ಫೋಟೋ ಎಂದರು.

ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರಿಂದ ಕೊಲ್ಲಲ್ಪಟ್ಟ ಪೊಲೀಸ್ ಅಧಿಕಾರಿಯೊಬ್ಬರ ಶವ ಸಂಸ್ಕಾರದ ವೇಳೆ ದುಃಖತಪ್ತರಾಗಿರುವ ಅವರ ಕುಟುಂಬದ ಸದಸ್ಯರ ಫೋಟೋ ತೋರಿಸಿದ ತ್ರಿಪಾಠಿ, ''ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳು, ಸೈನಿಕರನ್ನು ಕೊಲ್ಲುತ್ತಿದ್ದಾರೆ. ಇದು ವಾಸ್ತವ. ಆದರೆ, ವಿಶ್ವ ಸಮುದಾಯದ ಮುಂದೆ, ತಾನು ಮಾಡಿದ ಕುಕೃತ್ಯವನ್ನು ಭಾರತದ ಮೇಲೆ ಹೊರಿಸಿ ಪಾಕಿಸ್ತಾನ ತನ್ನ ಆರೋಪಗಳಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ'' ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+