ವಿಶ್ವಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್ ಗೆ 188 ಮತ ಪಡೆದು ಭಾರತ ಆಯ್ಕೆ

ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ 188 ಮತಗಳನ್ನು ಪಡೆದು, ವಿಶ್ವಸಂಸ್ಥೆಯ ಸರ್ವೋಚ್ಚ ಮಾನವ ಹಕ್ಕುಗಳ ಸಮಿತಿಗೆ ಭಾರತ ಆಯ್ಕೆಯಾಗಿದೆ. ಇದು ಮೂರು ವರ್ಷಗಳ ಅವಧಿಯದಾಗಿದ್ದು, ಜನವರಿ 1, 2019ರಿಂದ ಈ ಸದಸ್ಯತ್ವ ಅವಧಿ ಆರಂಭ ಆಗುತ್ತದೆ. 193 ಸದಸ್ಯತ್ವ ಬಲದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಚುನಾವಣೆ ನಡೆಯಿತು.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್ ಗಾಗಿ ಈ ಚುನಾವಣೆ ನಡೆದಿತ್ತು. ರಹಸ್ಯ ಮತದಾನದ ಮೂಲಕ 18 ಹೊಸ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕೌನ್ಸಿಲ್ ಗೆ ಯಾವುದೇ ದೇಶ ಆಯ್ಕೆ ಆಗಬೇಕು ಅಂದರೆ ಕನಿಷ್ಠ 97 ಮತಗಳನ್ನು ಪಡೆಯಬೇಕು. ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಭಾರತವು ಆಯ್ಕೆಯಾಗಿದೆ.

India elected to UN human rights council with 188 votes

ಭಾರತದ ಜತೆಗೆ ಬಹ್ರೇನ್, ಬಾಂಗ್ಲಾದೇಶ, ಫಿಜಿ ಹಾಗೂ ಫಿಲಿಪೈನ್ಸ್ ಕೂಡ ಇದೇ ವಿಭಾಗದಲ್ಲಿ ಪೈಪೋಟಿ ನಡೆಸಿದ್ದವು. ಐದು ದೇಶಗಳು ಏಷ್ಯಾ ಪೆಸಿಫಿಕ್ ವಿಭಾಗದ ಐದು ಸ್ಥಾನಗಳಿಗಾಗಿ ಸ್ಪರ್ಧಿಸಿದ್ದವು ಅದರಲ್ಲಿ ಭಾರತದ ಸ್ಥಾನ ಖಾತ್ರಿ ಆಗಿದೆ. ಅಂತರರಾಷ್ಟ್ರೀಯ ಸಮುದಾಯದ ಮಧ್ಯೆ ಭಾರತದ ನಿಲುವು ತಿಳಿಸುವುದನ್ನು ಇದು ಪ್ರತಿಪಾದಿಸುತ್ತದೆ ಎಂದು ವಿಶ್ವಸಂಸ್ಥೆ ಭಾರತದ ಕಾಯಂ ರಾಯಭಾರಿ ಅಕ್ಬರುದ್ದೀನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+