• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಸಿಕೆಗೆ ಶೀತಲ ಗೃಹ ನಿರ್ಮಾಣ:ಲಕ್ಸಂಬರ್ಗ್ ಸಂಸ್ಥೆಯ ಜತೆ ಮಾತುಕತೆ

|

ನವದೆಹಲಿ, ಡಿಸೆಂಬರ್ 04: ಭಾರತಕ್ಕೆ ಶೀಘ್ರ ಕೊರೊನಾ ಲಸಿಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳ ಶೇಖರಣೆಗೆ ಶೀತಲ ಗೃಹ ನಿರ್ಮಾಣವೂ ಮುಖ್ಯವಾಗಿದೆ.

ಈ ಕುರಿತು ಭಾರತವು ಲಕ್ಸಂಬರ್ಗ್‌ನ ಸಂಸ್ಥೆಯ ಜತೆ ಮಾತುಕತೆ ನಡೆಸುತ್ತಿದ್ದು, ಈ ವಾರಾಂತ್ಯ ಲಕ್ಸ್ಂಬರ್ಗ್ ನ ಬಿ ಮೆಡಿಕಲ್ ಸಿಸ್ಟಂನ ಇಬ್ಬರು ಅಧಿಕಾರಿಗಳು ದೆಹಲಿಗೆ ಭೇಟಿ ನೀಡಲಿದ್ದಾರೆ.

ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 6.50 ಕೋಟಿಗೆ ಏರಿಕೆ

ಅವರು ಹಿರಿಯ ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳ ಜತೆ ಮಾತುಕತೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗಿಂತ ಅದರ ಶೇಖರಣೆಯೇ ತಲೆನೋವು ತರುವಂತಹ ವಿಚಾರವಾಗಿದೆ. ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಾಗುತ್ತದೆ. ಮಾಡೆರ್ನಾ ಲಸಿಕೆಯನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕು.

ಇದೇ ತಾಪಮಾನದಲ್ಲಿ 6 ತಿಂಗಳ ಕಾಲ ಇಡಬೇಕಾಗುತ್ತದೆ. ದೇಶದಲ್ಲಿ ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಸಿದ್ಧವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಸರ್ವಪಕ್ಷಗಳ ಸಭೆ ಕರೆದಿದ್ದು ಮುಂದಿನ ಒಂದು ವಾರದಲ್ಲಿ ದೇಶಕ್ಕೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಮೊದಲು 1 ಕೋಟಿ ಕೊರೊನಾ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರಿಗೆ ವಿತರಿಸುವುದಾಗಿ ತಿಳಿಸಿದ್ದಾರೆ.

ಬಳಿಕ ಪೊಲೀಸರು, ಶಿಕ್ಷಕರಿಗೆ ಹಂತ ಹಂತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸರ್ವ ಪಕ್ಷ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಎಲ್ಲಾ ರಾಜ್ಯಗಳ ಕೊರೊನಾ ಪರಿಸ್ಥಿತಿ ಕುರಿತಂತೆ ಹಾಗೂ ಕೊರೊನಾ ಲಸಿಕೆ ಕುರಿತು ಮಾತುಕತೆ ನಡೆಸಿದ್ದಾರೆ.

ಕೊರೊನಾವೈರಸ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ವಪಕ್ಷದ ನಾಯಕರು ತಮ್ಮ ಸಲಹೆ ಸೂಚನೆಗಳನ್ನು ಬರಹದ ರೂಪದಲ್ಲಿ ನೀಡಬೇಕು.

ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಎಲ್ಲ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಮನವಿ ಮಾಡಿದ್ದಾರೆ.

English summary
Two top officials of the Luxembourg-headquartered B Medical Systems will arrive in New Delhi over the weekend to initiate talks with senior government officials, scientists and diplomats on setting up a cold chain for Covid-19 vaccines in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X