ಮಲೇಷ್ಯಾ ಜೊತೆ ಭಾರತದ ಭರ್ಜರಿ ವ್ಯಾಪಾರ ಒಪ್ಪಂದ, ಯಾವ ಯಾವ ಕ್ಷೇತ್ರದಲ್ಲಿ ಬಂಪರ್ ತಿಳಿಯಿರಿ | India And Malaysia
ಭಾರತ ಇದೀಗ ಜಗತ್ತಿನ ಬಹುತೇಕ ಎಲ್ಲಾ ದೊಡ್ಡ ದೊಡ್ಡ ದೇಶಗಳ ಜೊತೆಗೆ ಒಪ್ಪಂದ ಮಾಡುತ್ತಾ, ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಮುಂದೆ ನುಗ್ಗುತ್ತಿದೆ. ಹೀಗಿದ್ದಾಗ ಯುರೋಪ್ ಸೇರಿ ಅಮೆರಿಕ ಜೊತೆಗೂ ಭಾರತ ಈಗಾಗಲೇ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಭವಿಷ್ಯದ ದೃಷ್ಟಿ ಇಟ್ಟುಕೊಂಡು ನೋಡುವುದಾದರೆ ಭಾರತ ಇದೀಗ ಮಾಡಿಕೊಳ್ಳುತ್ತಿರುವ ಒಪ್ಪಂದಗಳು ಭಾರಿ ಲಾಭ ತಂದುಕೊಡಲಿವೆ. ಇಂತಹ ಸಮಯದಲ್ಲಿ ಮಲೇಷ್ಯಾ ಜೊತೆಗೂ ಭಾರತ ಭರ್ಜರಿ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಈಗ. ಹಾಗಾದರೆ ಯಾವ ಯಾವ ಕ್ಷೇತ್ರದಲ್ಲಿ ಬಂಪರ್ ಸಿಗಲಿದೆ? ಬನ್ನಿ ತಿಳಿಯೋಣ.
ಮಲೇಷ್ಯಾ ಹಾಗೂ ಭಾರತದ ನಡುವೆ ಸಂಬಂಧ ಮೊದಲಿನಿಂದ ಕೂಡ ಅದ್ಭುತವಾಗಿದ್ದು, ಇದೀಗ ಈ ಸಂಬಂಧವನ್ನು ಮತ್ತಷ್ಟು ದೊಡ್ಡ ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ಶುರುವಾಗಿದೆ. ಇದರ ಭಾಗ ಎನ್ನುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷ್ಯಾಗೆ ವಿಶೇಷ ಭೇಟಿ ಕೈಗೊಂಡಿದ್ದಾರೆ. ಈ ಭೇಟಿ ಸಮಯದಲ್ಲಿ ಹಲವು ಮಹತ್ವದ ಚರ್ಚೆಗಳು ನಡೆದಿವೆ. ಇಲ್ಲಿ ಮತ್ತೊಂದು ಪ್ರಮುಖ ವಿಚಾರ ಏನೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದಲ್ಲಿ ಕೈಗೊಂಡಿರುವ ಮೊದಲ ಭೇಟಿ ಇದಾಗಿದೆ. ಮಲೇಷ್ಯಾ ಪ್ರಧಾನಿ ದಾತು ಸೆರಿ ಅನ್ವರ್ ಇಬ್ರಾಹಿಂ ಅವರ ಜೊತೆಗೆ ಇದೀಗ ಪಿಎಂ ಮೋದಿ ಅವರು ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರೆ.

ಪೇಮೆಂಟ್ ಸಿಸ್ಟಮ್ ಜೊತೆ ಹೊಂದಾಣಿಕೆ
ಭಾರತ ಮತ್ತು ಮಲೇಷ್ಯಾ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಲು ಈಗ ಮಲೇಷ್ಯಾ ನೆಲದಲ್ಲಿ ಭಾರತೀಯ ರಾಯಭಾರ ಕಚೇರಿ ತೆರೆಯಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ಮಲೇಷ್ಯಾ ದೇಶದ ಆನ್‌ಲೈನ್ ಹಣ ಪಾವತಿ ಎಂದರೆ ಪೇಮೆಂಟ್ ಸಿಸ್ಟಂ ಭಾರತದ ಯುಪಿಐ ಪಾವತಿ ಜೊತೆಗೆ ಸೇರಿಕೊಳ್ಳಲಿದೆ. ಹೀಗೆ ಎರಡೂ ದೇಶಗಳ ಪೇಮೆಂಟ್ ಸಿಸ್ಟಂ ಒಂದಾದರೆ ಅದರಿಂದ ಭಾರತೀಯರಿಗೆ ಸಾಕಷ್ಟು ಅನುಕೂಲಗಳು ಆಗಲಿವೆ. ಭಾರತ ಈಗಾಗಲೇ ಈ ರೀತಿ ಯುಪಿಐ ಪೇಮೆಂಟ್ ಸಿಸ್ಟಮ್ ಜೊತೆಗೆ ಹಲವು ದೇಶಗಳಲ್ಲಿನ ಹಣ ಪಾವತಿ ವಿಧಾನವನ್ನು ಹೊಂದಾಣಿಕೆ ಮಾಡಿದ್ದು, ಸಾಕಷ್ಟು ಅನುಕೂಲ ಆಗುತ್ತಿದೆ. ಮಲೇಷ್ಯಾ ಕೂಡ ಅದೇ ಸಾಲಿಗೆ ಇದೀಗ ಸೇರುತ್ತಿರುವುದು ಖುಷಿ ನೀಡುತ್ತಿದೆ ಭಾರತದ ಪ್ರವಾಸಿಗರಿಗೆ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಕಾರ
ಇದರ ಜೊತೆಗೆ ಭಾರತ ಮತ್ತು ಮಲೇಷ್ಯಾ ವಿಪತ್ತು ನಿರ್ವಹಣೆಗೆ ಒಪ್ಪಂದ ಮಾಡಿಕೊಂಡಿವೆ. ಹಾಗೂ
ಭ್ರಷ್ಟಾಚಾರ ನಿಗ್ರಹ ವಿಚಾರದಲ್ಲೂ ಕೈಜೋಡಿಸಲು ಮುಂದಾಗಿವೆ. ಇದೆಲ್ಲದರ ಜೊತೆಗೆ ಮತ್ತೊಂದು ಪ್ರಮುಖ ಒಪ್ಪಂದ ಏನೆಂದರೆ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿವೆ ಈಗ ಎರಡೂ ದೇಶಗಳು. ಆರೋಗ್ಯ ಮತ್ತು ಔಷಧ ಕ್ಷೇತ್ರಗಳಲ್ಲಿ ಸಹಕಾರ ಸೇರಿದಂತೆ ಹಲವು ಒಪ್ಪಂದಗಳಿಗೆ ಅಂತಿಮ ರೂಪ ನೀಡಲಾಗಿದೆ. ಇದು ಭವಿಷ್ಯದಲ್ಲಿ ಭಾರತ ಮತ್ತು ಮಲೇಷ್ಯಾ ಎರಡೂ ದೇಶಗಳಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನುಕೂಲ ಮಾಡಿಕೊಡಲಿದೆ. ಭಾರತ ಮತ್ತು ಮಲೇಷ್ಯಾ ನಡುವಿನ ಈ ಒಪ್ಪಂದಗಳು ಜಗತ್ತಿನ ಗಮನ ಸೆಳೆಯುತ್ತಿವೆ.












Click it and Unblock the Notifications