US Elections 2024: ಅಬ್ಬಬ್ಬಾ ಲಾಟರಿ... ಒಂದೇ ದಿನ ಬಿಟ್‌ಕಾಯಿನ್ ಬೆಲೆ ಲಕ್ಷ ಲಕ್ಷ ಏರಿಕೆ!
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ದೊಡ್ಡ ಸಂಚಲನ ಸೃಷ್ಟಿಯಾಗುತ್ತಿದೆ. ಅದರಲ್ಲೂ ಅಮೆರಿಕದ ವಿರೋಧಿ ದೇಶಗಳಲ್ಲಿ ಹೊಸ ತಲ್ಲಣವೇ ಇದೀಗ ಎದ್ದಿದೆ. ಡೊನಾಲ್ಡ್ ಟ್ರಂಪ್ ಚುನಾವಣೆಗೆ ಮೊದಲು ಹಲವು ಭರವಸೆಗಳನ್ನ ನೀಡಿದ್ದರು, ಆ ಭರವಸೆಗಳ ಪೈಕಿ ಕ್ರಿಪ್ಟೋ ಮಾರುಕಟ್ಟೆಗೆ ಕೂಡ ಮಾತು ನೀಡಿದ್ದರು. ಹೀಗೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಹೊಸ ಮೈಲಿಗಲ್ಲು ಮುಟ್ಟುತ್ತಾ ಇತಿಹಾಸ ನಿರ್ಮಾಣ ಮಾಡುತ್ತಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಮಯದಲ್ಲಿ ಈ ಬಗ್ಗೆ ಆಶ್ವಾಸನೆ ನೀಡಿದ್ದರು. ಕ್ಟಿಪ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡುವವರಿಗೆ ಈ ಹಿನ್ನೆಲೆ ಒಂದು ಭರವಸೆ ಸಿಕ್ಕಿತ್ತು. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಗ್ಯಾರಂಟಿ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಬಿಟ್‌ಕಾಯಿನ್ ಸೇರಿ ಹಲವು ಕ್ಟಿಪ್ಟೋ ಕರೆನ್ಸಿಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಹೀಗೆ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯರಾಗುವುದು ಗ್ಯಾರಂಟಿ ಆದ ನಂತರ ಬಿಟ್‌ಕಾಯಿನ್ ಕೈಗೆ ಸಿಗದಷ್ಟು ಮೇಲೆ ಹೋಗಿ ಬಿಟ್ಟಿದೆ. ನಿನ್ನೆ ಒಂದೇ ದಿನ ಬಿಟ್‌ಕಾಯಿನ್ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಬಿಟ್‌ಕಾಯಿನ್ ದರ? ಎಷ್ಟು ಲಕ್ಷ ರೂಪಾಯಿ ಆಗಿದೆ ಗೊತ್ತಾ ಡಿಜಿಟಲ್ ಕರೆನ್ಸಿ? ಕ್ರಿಪ್ಟೋ ಕರೆನ್ಸಿ ಮೌಲ್ಯದ ಮಾಹಿತಿ ತಿಳಿಯಲು ಮುಂದೆ ಓದಿ.
ಒಂದೇ ದಿನ 10 ಪರ್ಸೆಂಟ್ ಏರಿಕೆ!
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆದ್ದು ಹೊಸ ಅಧ್ಯಕ್ಷರಾಗಿ ಆಯ್ಕೆ ಕೂಡ ಆಗಿದ್ದಾರೆ. ಹೀಗಿದ್ದಾಗ ಬಿಟ್‌ಕಾಯಿನ್ ಮೌಲ್ಯ ಒಂದೇ ದಿನ ಬರೋಬ್ಬರಿ 75 ಲಕ್ಷ ರೂಪಾಯಿ ಗಡಿಗೆ ಬಂದು ನಿಂತಿದೆ. ನಿನ್ನೆ ಒಂದೇ ದಿನ ಹೀಗೆ, ಬಿಟ್‌ಕಾಯಿನ್ ಮೌಲ್ಯ ಬರೋಬ್ಬರಿ 10 ಪರ್ಸೆಂಟ್ ಏರಿಕೆ ಕಂಡು ನಂತರ ಒಂದಷ್ಟು ಇಳಿಕೆ ಕೂಡ ಆಗಿತ್ತು.
ಈ ಮೂಲಕ ಹೊಸ ಇತಿಹಾಸ ಬರೆದಿದೆ ಬಿಟ್‌ಕಾಯಿನ್ ಮೌಲ್ಯ. ಈ ರೀತಿ ಮತ್ತಷ್ಟು ದಿನಗಳ ಕಾಲ ಕ್ಟಿಪ್ಟೋ ಕರೆನ್ಸಿಯ ಮೌಲ್ಯ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಾಗೇ ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ ಕೂಡ ಕ್ರಿಪ್ಟೋ ಕರೆನ್ಸಿ ಬಗ್ಗೆ ಭಾರಿ ಕುತೂಹಲ ಮೂಡುತ್ತಿದೆ. ಹಲವು ದೇಶಗಳ ಹೂಡಿಕೆದಾರರು ಬಿಟ್‌ಕಾಯಿನ್ ಸೇರಿ ಹಲವು ಕ್ರಿಪ್ಟೋ ಮೇಲೆ ಹಣ ಹೂಡಲು ಮುಂದೆ ಬರುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications