ಚಿತ್ರಗಳು : ಯೋಗದ ಮಹಿಮೆಗೆ ತಲೆಬಾಗಿದ ವಿಶ್ವ
ಯೋಗ ಎಂದರೆ ಮನಸ್ಸು, ಕಾಯಕ, ದೇಹದ ಮೇಲಿನ ಸಂಪೂರ್ಣ ನಿಯಂತ್ರಣ ಹೊಂದುವ ಅತ್ಯಂತ ಪ್ರಾಚೀನ ಕಲೆ. ಸುಮಾರು 5,000 ವರ್ಷಕ್ಕೂ ಹಳೆಯದಾದ ಈ ಪದ್ಧತಿಯನ್ನು ಇಂದಿಗೂ ಉಳಿಸಿಕೊಂಡು ಬೆಳೆಸುತ್ತಿರುವ ಕೀರ್ತಿ ಭಾರತ ದೇಶಕ್ಕಿದೆ. ಈ ಕೀರ್ತಿಯನ್ನು ಮತ್ತೊಮ್ಮೆ ವಿಶ್ವಕ್ಕೆಲ್ಲ ಹಂಚುವ ಕಾಯಕವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಗೊಳಿಸಿದ್ದಾರೆ.
2014ರ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಸಭೆಯಲ್ಲಿ ಭಾಷಣ ಮಾಡುವ ವೇಳೆ ಮೋದಿ ಅವರು ಈ ಮಹತ್ವದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಇದಕ್ಕೆ ಒಕ್ಕೊರಲ ಬೆಂಬಲ ಸಿಕ್ಕ ಬಳಿಕ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆವಾಗಿ ಆಚರಿಸಲ್ಪಡುತ್ತಿದೆ. [ಇಚ್ಛಾಶಕ್ತಿ ಪ್ರಚೋದಿಸಲು ಶಾಸ್ತ್ರಬದ್ಧ ಯೋಗಾಸನ, ಪ್ರಾಣಾಯಾಮ]

ಯುಎಸ್ಎ, ಕೆನಡಾ ಹಾಗೂ ಚೀನಾ ಮುಂಚೂಣಿಯಲ್ಲಿ ನಿಂತು ಸುಮಾರು 175ಕ್ಕೂ ಅಧಿಕ ದೇಶಗಳು ಭಾರತದ ಕರೆಗೆ ಓಗೊಟ್ಟ ಪರಿಣಾಮ ಇಂದು ವಿಶ್ವವೇ ಯೋಗಾಭ್ಯಾಸದಲ್ಲಿ ತೊಡಗಿದೆ.
ಚಿತ್ರಗಳಲ್ಲಿ ವಿಶ್ವ ಯೋಗ ದಿನಾಚರಣೆ
ವಿಶ್ವಸಂಸ್ಥೆ ಈ ಬಗ್ಗೆ ಡಿಸೆಂಬರ್ 11, 2014ರಂದು ಈ ಬಗ್ಗೆ ನಿರ್ಣಯ ಪ್ರಕಟಿಸಿ ಜೂನ್ 21ರಂದು ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲು ಸುತ್ತೋಲೆ ಹೊರಡಿಸಿತು.












Click it and Unblock the Notifications