Imran Khan: ಇಮ್ರಾನ್ ಖಾನ್ ಬೆಂಬಲಿಗರಿಗೆ ಗುಂಡೇಟು, ಪ್ರತಿಭಟನೆಗೆ ಬ್ರೇಕ್!
ಪಾಕಿಸ್ತಾನ ನೆಲದಲ್ಲಿ ಇಮ್ರಾನ್ ಖಾನ್ ಬೆಂಬಲಿಗರನ್ನ ಟಾರ್ಗೆಟ್ ಮಾಡಿ, ಹಿಂಸೆ ನೀಡುತ್ತಾ ಬೇಕು ಅಂತಲೇ ಗುಂಡು ಹಾರಿಸುತ್ತಿರುವ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಪಾಕಿಸ್ತಾನದ ನೆಲದಲ್ಲಿ ಹೋರಾಟ ಆರಂಭ ಮಾಡಿ, ಜೈಲಿನಲ್ಲಿ ಇರುವ ಇಮ್ರಾನ್ ಖಾನ್ ಅವರನ್ನ ಬೇಗ ರಿಲೀಸ್ ಮಾಡುವಂತೆ ಒತ್ತಾಯ ಮಾಡಿದ್ದ ಲಕ್ಷಾಂತರ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಗುಂಡು & ಬಂದೂಕುಗಳ ಮೂಲಕವೇ ಇಮ್ರಾನ್ ಖಾನ್ ಬೆಂಬಲಿಗರನ್ನ ಪಾಕಿಸ್ತಾನ ಸರ್ಕಾರ ಇದೀಗ ಬೆಚ್ಚಿ ಬೀಳುವಂತೆ ಮಾಡಿದೆ!
ಪಾಕಿಸ್ತಾನದ ಸರ್ಕಾರಕ್ಕೂ & ಇಮ್ರಾನ್ ಖಾನ್ ಪಕ್ಷಕ್ಕೂ ದೊಡ್ಡ ಗಲಾಟೆ ಆಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಬಹುಮತ ಪಡೆದು ಸರ್ಕಾರ ರಚನೆ ಮಾಡುವ ತಾಕತ್ ಹೊಂದಿತ್ತು. ಆದರೂ ಮೋಸ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದರ ಜೊತೆಗೆ, ಇಮ್ರಾನ್ ಖಾನ್ ಅವರನ್ನು ಕುತಂತ್ರ ಮಾಡಿ ಜೈಲಿನಿಂದ ಹೊರಗೆ ಬರದಂತೆ ಲಾಕ್ ಮಾಡಿರುವ ಆರೋಪ ಕೂಡ ಇದೆ. ಇಷ್ಟೆಲ್ಲ ನೋಡಿ ನೋಡಿ ರೊಚ್ಚಿಗೆದ್ದಿರುವ ಇಮ್ರಾನ್ ಖಾನ್ ಬೆಂಬಲಿಗರು ತೀವ್ರ ಹೋರಾಟ ಆರಂಭಿಸಿದ್ದರು.

ಹೆದರಿಸಿ & ಬೆದರಿಸಿ ಪ್ರತಿಭಟನೆಗೆ ಬ್ರೇಕ್!
ಹೀಗೆ ಆರಂಭವಾದ ಹೋರಾಟ ಪಾಕಿಸ್ತಾನದ ರಾಜಧಾನಿಗೆ ಕೂಡ ನುಗ್ಗುತ್ತಿತ್ತು. ಅದರಲ್ಲೂ ಪಾಕಿಸ್ತಾನ ಅರಾಜಕತೆ ಬೆಂಕಿಯಲ್ಲಿ ನರಳುವ ಪರಿಸ್ಥಿತಿ ಬಂದಿತ್ತು. ಇಂತಹ ಸಮಯದಲ್ಲೇ ಪಾಕಿಸ್ತಾನ ಮಿಲಿಟರಿ ತೀವ್ರ ದಾಳಿ ನಡೆಸಿ, ಪ್ರತಿಭಟನೆ ಹತ್ತಿಕ್ಕಲು ಮುಂದಾಗಿತ್ತು. ಇದೀಗ ಆ ಕೆಲಸದಲ್ಲಿ ಪಾಕಿಸ್ತಾನ ಮಿಲಿಟರಿ ಸಕ್ಸಸ್ ಆಗಿದ್ದು, ಇಮ್ರಾನ್ ಖಾನ್ ಬೆಂಬಲಿಗರು ಈ ಸಮಯದಲ್ಲಿ ಹೋರಾಟ ಕೈಬಿಟ್ಟು ಓಡಿ ಹೋಗಿದ್ದಾರೆ. ಅಲ್ಲದೆ 4 ಜನ ಇಮ್ರಾನ್ ಖಾನ್ ಅವರ ಬೆಂಬಲಿಗರು ಈ ಗಲಾಟೆಯಲ್ಲಿ ಜೀವ ಬಿಟ್ಟಿರುವ ಆರೋಪ ಕೂಡ ಕೇಳಿ ಬಂದಿದೆ.
ಪಾಕಿಸ್ತಾನದಲ್ಲಿ ಮತ್ತೆ ಭುಗಿಲೇಳುತ್ತಾ ಹೋರಾಟ?
ಉಗ್ರರ ಸ್ವರ್ಗ ಪಾಕಿಸ್ತಾನ ಇದೀಗ ನರಕವಾಗಿದೆ. ಈ ಸಮಯದಲ್ಲಿ ಇಮ್ರಾನ್ ಬೆಂಬಲಿಗರನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿರುವ ಆರೋಪ ಕೇಳಿ ಬಂದಿದೆ. ಇದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಇಸ್ಲಾಮಾಬಾದ್ ನಗರದಲ್ಲಿ ಭಾರಿ ಭದ್ರತೆ ಕೈಗೊಂಡು, ಈಗಾಗಲೇ ಭಾಗಶಃ ಪ್ರತಿಭಟನೆ ಹತ್ತಿಕ್ಕಲಾಗಿದೆ.
ಒಟ್ನಲ್ಲಿ ಈ ಮೂಲಕ ಪಾಕಿಸ್ತಾನ ಅಕ್ಷಶಃ ಅಲ್ಲಾಡಿ ಹೋಗಿದ್ದು, ಮತ್ತೆ ಜಾಗತಿಕವಾಗೂ ತನ್ನ ಮಾನ ತಾನೇ ಹರಾಜು ಹಾಕಿಕೊಂಡಿದೆ. ಹೀಗಾಗಿ ಮತ್ತೆ, ದಿಢೀರ್ ಅಂತಾ ಇಮ್ರಾನ್ ಖಾನ್ ಬೆಂಬಲಿಗರು ಹೋರಾಟ ಆರಂಭ ಮಾಡುವ ಆತಂಕವೂ ಆವರಿಸಿದೆ. ಹೀಗಾಗಿ, ಎಲ್ಲೆಲ್ಲೂ ಹದ್ದಿನ ಕಣ್ಣಿಡಲಾಗಿದ್ದು ಪಾಕಿಸ್ತಾನ ಮಿಲಿಟರಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆ ಮಾಡಿ ಪಾಕಿಸ್ತಾನದ ರಾಜಧಾನಿಗೆ ಭದ್ರತೆ ನೀಡುತ್ತಿದೆ.












Click it and Unblock the Notifications